ನಾವು ಚೀನಾದ ಹಡಗಿಗೆ ಬಂದಿರದಲ್ಲಿ ನಿಲ್ಲಲು ಅನುಮತಿ ನೀಡಿಲ್ಲ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ

ಶ್ರೀಲಂಕಾದ ವಿದೇಶಾಂಗ ಸಚಿವರಿಂದ ಮಾಹಿತಿ !

ಕೊಲಂಬೋ (ಶ್ರೀಲಂಕಾ) – ನನ್ನ ಮಾಹಿತಿಯ ಪ್ರಕಾರ ನಾವು ಚೀನಾ ಹಡಗಿಗೆ ನಮ್ಮ ದೇಶಕ್ಕೆ ಬರಲು ಅನುಮತಿ ನೀಡಿಲ್ಲ. ಈ ಹಡಗಿನಿಂದ ಭಾರತೀಯ ರಕ್ಷಣಾ ವ್ಯವಸ್ಥೆಯಿಂದ ಕಳವಳ ವ್ಯಕ್ತಪಡಿಸಲಾಗಿತ್ತು. ಅದು ಯೋಗ್ಯವು ಆಗಿದೆ ಮತ್ತು ನಮಗಾಗಿ ಮಹತ್ವದ್ದು ಆಗಿದೆ. ನಾವು ಯಾವಾಗಲೂ, ನಮಗೆ ನಮ್ಮ ಕ್ಷೇತ್ರ ಸುರಕ್ಷಿತವಾಗಿಡುವುದಿದೆ ಎಂದು ಯಾವಾಗಲೂ ಹೇಳುತ್ತೇವೆ, ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಇವರು ಈ ಮಾಹಿತಿ ನೀಡಿದರು. ಚೀನಾದ ಹಡಗು ಬೇಹುಗಾರಿಕೆ ನಡೆಸುವ ಉದ್ದೇಶದಿಂದ ಶ್ರೀಲಂಕಾದ ಬಂದರಿಗೆ ಬರುವುದರಿಂದ ಭಾರತವು ಅನುಮತಿ ನೀಡಲು ವಿರೋಧಿಸಿತ್ತು.

ಶ್ರೀಲಂಕಾ ಈ ಹಡಗಿಗೆ ಅದರ ಬಂದರಿನಲ್ಲಿ ನಿಲ್ಲಲು ಅನುಮತಿ ನೀಡಿರುವ ವಾರ್ತೆ ಕೂಡ ಪ್ರಕಟವಾಗಿತ್ತು; ಆದರೆ ಈಗ ಅಧಿಕೃತವಾಗಿ ಶ್ರೀಲಂಕಾ ಚೀನಾದ ಹಡಗಿಗೆ ಅನುಮತಿ ನೀಡಿಲ್ಲ ಎಂದು ಹೇಳಿದೆ. ಚೀನಾದ ‘ಶಿನ್ ಯಾನ್ ೬’ ಈ ಹಡಗು ಅಕ್ಟೋಬರ್ ನಲ್ಲಿ ಶ್ರೀಲಂಕಾದ ಬಂದರದಲ್ಲಿ ೩ ತಿಂಗಳ ಕಾಲ ನಿಲ್ಲುವುದಿತ್ತು. ಕಳೆದ ವರ್ಷ ಶ್ರೀಲಂಕಾದಿಂದ ಚೀನಾದ ಬೇಹುಗಾರಿಕೆ ನಡೆಸುವ ಹಡಗಿಗೆ ಅದರ ಬಂದರದಲ್ಲಿ ನಿಲ್ಲಲು ಅನುಮತಿ ನೀಡಿತ್ತು.