ಆಧಾರವಿಲ್ಲದ ಆರೋಪ ಮಾಡುವುದು ಕೆನಡಾದ ಪ್ರಧಾನಮಂತ್ರಿಗಳ ಅಭ್ಯಾಸವಾಗಿದೆ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲೀ ಸಬ್ರೀ

ಭಾರತದ ಮೇಲೆ ಆರೋಪ ಮಾಡಿದಾಗಿನಿಂದ ಕೆನಡಾದ ಪ್ರಧಾನಮಂತ್ರಿ ಟ್ರುಡೊರವರನ್ನು ಶ್ರೀಲಂಕಾದ ವಿದೇಶಾಂಗ ಸಚಿವ ಅಲೀ ಸಬ್ರೀಯವರು ತರಾಟೆಗೆ ತೆಗೆದುಕೊಂಡರು !

ಕೊಲಂಬೊ (ಕೆನಡಾ) – ಕೆನಡಾದ ಪ್ರಧಾನಮಂತ್ರಿ ಟ್ರುಡೊರವರು ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡ ಇರುವುದಾಗಿ ಆರೋಪಿಸಿದ ನಂತರ ಈಗ ಶ್ರೀಲಂಕಾವು ಭಾರತದ ಪರ ವಹಿಸಿದೆ. ಶ್ರೀಲಂಕಾದ ವಿದೇಶಾಂಗ ಸಚಿವ ಅಲೀ ಸಬ್ರೀಯವರು ಮಾತನಾಡುತ್ತ, ಎರಡನೇ ಮಹಾಯುದ್ಧದಲ್ಲಿ ನಾಝಿಗಳಿಗಾಗಿ ಹೋರಾಡಿದ್ದ ವ್ಯಕ್ತಿಯನ್ನು ಟ್ರುಡೊರವರು ತಮ್ಮ ಸಂಸತ್ತಿನಲ್ಲಿ ಸನ್ಮಾನ ಮಾಡಿರುವ ವಿಡಿಯೋವನ್ನು ನಾನು ನೋಡಿದೆ. ಇದರಿಂದಾಗಿ ಜಸ್ಟಿನ್ ಟ್ರುಡೊರವರು ಭಾರತದ ಮೇಲೆ ಮಾಡಿರುವ ಆರೋಪದ ಬಗ್ಗೆ ಕೇಳಿದಾಗ ನನಗೆ ಸ್ವಲ್ಪವೂ ಆಶ್ಚರ್ಯವಾಗಲಿಲ್ಲ. ಟ್ರುಡೊರವರು ಯಾವಾಗಲೂ ಇಂತಹ ಆಘಾತಕಾರಿ ಹಾಗೂ ಅಸಂಬದ್ಧವಾದ ಆರೋಪಗಳನ್ನು ಮಾಡುತ್ತಿರುತ್ತಾರೆ. ಈ ರೀತಿಯಲ್ಲಿ ಆಧಾರವಿಲ್ಲದ ಆರೋಪಗಳನ್ನು ಮಾಡುವುದು ಕೆನಡಾದ ಪ್ರಧಾನಮಂತ್ರಿಗಳಿಗೆ ರೂಢಿಯಾಗಿದೆ. ಅವರು ಇದೆ ರೀತಿಯಲ್ಲಿ ಶ್ರೀಲಂಕಾದ ಸಂದರ್ಭದಲ್ಲಿಯೂ ಮಾಡಿದ್ದರು.

(ಸೌಜನ್ಯ – CNN-News18)

ಶ್ರೀಲಂಕಾದಲ್ಲಿ ನರಮೇಧ ನಡೆದಿರುವುದಾಗಿ ಹೇಳಿದ್ದರು. ಆದರೆ ಅದರಲ್ಲಿ ತಥ್ಯವಿಲ್ಲದಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇಂತಹ ಹೇಳಿಕೆಗಳನ್ನು ನಾವು ನಿಷೇಧಿಸುತ್ತೇವೆ, ಎಂದು ಹೇಳಿದರು.
ವಿದೇಶಾಂಗ ಸಚಿವ ಅಲೀ ಸಬ್ರೀಯವರು ಮಾತನಾಡುತ್ತ, ನನಗೆ ಯಾವುದೇ ದೇಶವು ಇತರ ದೇಶಗಳ ಪ್ರಕರಣದಲ್ಲಿ ತಮ್ಮ ಮೂಗು ತೂರಿಸಬಾರದು ಎಂದು ಅನಿಸುತ್ತದೆ. ಯಾವುದೇ ದೇಶವು ಇತರ ದೇಶಗಳಿಗೆ ಅವರು ದೇಶವನ್ನು ಹೇಗೆ ನಡೆಸಬೇಕು ? ಎಂಬುದನ್ನು ಹೇಳಬಾರದು. ನಮಗೆ ನಮ್ಮ ದೇಶದ ಮೇಲೆ ಪ್ರೀತಿಯಿದೆ; ಆದುದರಿಂದ ನಾವು ನಮ್ಮ ದೇಶದಲ್ಲಿ ಇದ್ದೇವೆ. `ನಮ್ಮ ವ್ಯವಹಾರವನ್ನು ಹೇಗೆ ಮಾಡಬೇಕು ? ಎಂಬುದನ್ನು ನಮಗೆ ಯಾರೂ ಕಲಿಸಿಕೊಡುವುದು ಬೇಡ, ಎಂದು ಹೇಳಿದರು.