ದೇಶವಿರೋಧಿ ಶಕ್ತಿಗಳಿಗೆ ನಕಲಿ ಗುರುತಿನ ಚೀಟಿ ಕೊಡುವ ತಂಡಗಳು ಭಾರತದಲ್ಲಿ ಸಕ್ರಿಯ !

  • ಮಹಾರಾಷ್ಟ್ರದಲ್ಲಿ ಕೂಡ ನುಸುಳುಕೋರರು !

  • ಮಹಾರಾಷ್ಟ್ರ ಪೊಲೀಸರು ಸಮರೋಪಾದಿಯಲ್ಲಿ ಶೋಧ ಅಭಿಯಾನ ನಡೆಸುವವರು !

ಮುಂಬಯಿ – ನುಸುಳುಕೋರರು ಮತ್ತು ದೇಶ ವಿರೋಧಿ ಕಾರ್ಯ ಚಟುವಟಿಕೆ ನಡೆಸುವವರಿಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಡುವ ತಂಡಗಳು ಭಾರತದಲ್ಲಿ ಸಕ್ರೀಯವಾಗಿವೆ. ಇವರು ನುಸುಳುಕೋರರು ದೇಶ ವಿರೋಧಿ ಕಾರ್ಯದಲ್ಲಿ ತೊಡಗಿರುವ ಆಘಾತಕಾರಿ ಮಾಹಿತಿ ಕೇಂದ್ರ ಸುರಕ್ಷಾ ದಳದ ಗಮನಕ್ಕೆ ಬಂದಿದೆ. ಆದ್ದರಿಂದ ಕೇಂದ್ರ ಗೃಹ ಸಚಿವಾಲಯದಿಂದ ದೇಶದಲ್ಲಿನ ಎಲ್ಲಾ ರಾಜ್ಯಗಳಿಗೆ ಇದರ ಬಗ್ಗೆ ಸತರ್ಕತೆಯ ಸೂಚನೆ ನೀಡಿದೆ. ಕೇಂದ್ರ ಸರಕಾರದ ಆದೇಶದ ನಂತರ ಮಹಾರಾಷ್ಟ್ರ ಪೊಲೀಸ್, ನುಸುಳುಕೋರರ ಶೋಧ ನಡೆಸುವದಕ್ಕಾಗಿ ಸಮರೋಪಾದಿಯಲ್ಲಿ ಶೋಧ ಕಾರ್ಯ ಕೈಗೆತ್ತಿಕೊಂಡಿದೆ. ಈ ಬಗ್ಗೆ ರಾಜ್ಯದ ಗೃಹ ಇಲಾಖೆಯು ಸೆಪ್ಟೆಂಬರ್ ೨೫ ರಂದು ಸರಕಾರಿ ಆದೇಶ ಹೊರಡಿಸಿದೆ.
ಈ ಗುಂಪು ಭಾರತೀಯ ಪಾಸ್ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಮುಂತಾದವು ನಕಲಿ ದಾಖಲೆಗಳನ್ನು ತಯಾರಿಸಿ ದೇಶ ವಿರೋಧಿ ಶಕ್ತಿಗಳಿಗೆ ಮತ್ತು ನುಸುಳುಕೋರರಿಗೆ ನೀಡುತ್ತಿದೆ. ಇದರಲ್ಲಿ ಸ್ಥಳೀಯ ಪ್ರಾಧಿಕಾರಣಗಳ ಮೇಲೆ ಕೂಡ ಈ ತಂಡಗಳ ಪ್ರಭಾವ ಇರುವುದು ಎಂದರೆ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳಿಗೆ ಹಣ ನೀಡಿ ಅವರಿಂದ ನಕಲಿ ದಾಖಲೆಗಳು ತಯಾರಿಸಿಕೊಳ್ಳುತ್ತಿರುವುದರ ಬಗ್ಗೆ ಕೇಂದ್ರ ರಕ್ಷಣಾ ಇಲಾಖೆಯ ಗಮನಕ್ಕೆ ಬಂದಿದೆ.

ಇತರ ರಾಜ್ಯದ ನಿವಾಸಿಗಳೆಂದು ಹೇಳಿ ಮಹಾರಾಷ್ಟ್ರದಲ್ಲಿ ಪ್ರವೇಶ !

ಇದರಲ್ಲಿ ಈ ನುಸುಳುಕೋರರು ಭಾರತದ ಉತ್ತರ ಮತ್ತು ಪೂರ್ವ ರಾಜ್ಯಗಳಲ್ಲಿ ಪ್ರವೇಶ ಮಾಡುತ್ತಿದ್ದಾರೆ. ಇಲ್ಲಿಯ ನಿವಾಸಿಗಳಿರುವ ಗುರುತಿನ ಚೀಟಿ ಪಡೆದು ಅದರ ಆಧಾರದಲ್ಲಿ ಮಹಾರಾಷ್ಟ್ರದಲ್ಲಿ ಪ್ರವೇಶ ಮಾಡುತ್ತಿದ್ದಾರೆ. ಇತರ ರಾಜ್ಯದಲ್ಲಿನ ಗುರುತಿನ ಚೀಟಿಯ ಬಳಕೆ ಮಾಡಿಕೊಂಡು ಈ ನುಸುಳುಕೋರರು ಮಹಾರಾಷ್ಟ್ರದಲ್ಲಿ ಪ್ಯಾನ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ ಕಾರ್ಡ್, ಮುಂತಾದ ದಾಖಲೆಗಳು ಪಡೆಯುತ್ತಿರುವುದು ರಕ್ಷಣಾ ಇಲಾಖೆಯ ಗಮನಕ್ಕೆ ಬಂದಿದೆ.

ಪ್ರತ್ಯಕ್ಷ ನಿವಾಸಸ್ಥಾನಕ್ಕೆ ಹೋಗಿ ಮಹಾರಾಷ್ಟ್ರ ಪೊಲೀಸ್ ಖಚಿತ ಪಡಿಸಿಕೊಳ್ಳಲಿದೆ !

ಭಾರತೀಯ ಪಾಸ್ಪೋರ್ಟ್ ನೀಡುವಾಗ ಅರ್ಜಿದಾರರ ವಿಳಾಸ, ಅಪರಾಧದ ಹಿಂದಿನ ಇತಿಹಾಸ, ಗುರುತಿನ ಚೀಟಿ ಇದರ ಪರಿಶೀಲನೆ ಮಾಡಿದ ನಂತರ ಮಹಾರಾಷ್ಟ್ರ ಪೊಲೀಸ್ ಗುರುತಿನ ಚೀಟಿಯ ಮೇಲೆ ನೀಡಿರುವ ವಿಳಾಸಕ್ಕೆ ಹೋಗಿ ಖಾತ್ರಿಪಡಿಸಿಕೊಳ್ಳುವುದು. ಇದರ ಬಗ್ಗೆ ಪರಿಶೀಲನೆಯ ವರದಿ ಪೊಲೀಸರಿಂದ ಪಾಸ್ಪೋರ್ಟ್ ಇಲಾಖೆಗೆ ನೀಡಲಾಗುವುದು.