‘ಎನ್.ಐ.ಎ.’ ಯ ಆರೋಪ ಪತ್ರದಿಂದ ಬಹಿರಂಗ !
(ಹವಾಲಾ ಎಂದರೆ ದಕ್ಷಿಣ ಏಶಿಯಾ ದೇಶಗಳಲ್ಲಿ ಹಣ ಹಸ್ತಾಂತರಗೊಳಿಸುವ ಪಾರಂಪರಿಕ ಪದ್ಧತಿ. ಇದರಲ್ಲಿ ಏಜೆಂಟಿಗೆ ಹಣ ನೀಡಿ ಅವನ ಮೂಲಕ ಸಂಬಂಧಿತರ ವರೆಗೆ ಹಣ ತಲುಪಿಸಲಾಗುತ್ತದೆ.)
ನವ ದೆಹಲಿ – ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಭಾರತದ ಮೇಲೆ ಹರದೀಪ ಸಿಂಹ ನಿಜ್ಜರ್ ಈ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ಪ್ರಕರಣದಲ್ಲಿ ಆರೋಪ ಮಾಡಿದ ನಂತರ ರಾಷ್ಟ್ರೀಯ ತನಿಖಾದಳವು ಖಲಿಸ್ತಾನಿಗಳ ವಿರುದ್ಧ ದಂಡ ತಟ್ಟಿದೆ. ಇಲಾಖೆಯಿಂದ ಖಲಿಸ್ತಾನಿ ಚಳುವಳಿಯ ಭಾರತದಲ್ಲಿನ ಬೇರು ಸಹಿತ ಹೊರತೆಗೆಯುವ ಕಾರ್ಯ ಕೈಗೆತ್ತಿಕೊಂಡಿದ್ದು ಇದರ ಸಂದರ್ಭದಲ್ಲಿ ಅದು ದಾಖಲಿಸಿರುವ ಆರೋಪ ಪತ್ರದಲ್ಲಿ ಬಹಿರಂಗಪಡಿಸಿದೆ. ಇಲಾಖೆಯ ಆರೋಪ ಪತ್ರದಲ್ಲಿ ಭಾರತದಿಂದ ಕೆನಡಾದಲ್ಲಿನ ಖಲಿಸ್ತಾನಿಗಳಿಗೆ ಹವಾಲಾ ಮೂಲಕ ಹಣ ಕಳುಹಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
खालिस्तानियों पर जांच एजेंसियों की पैनी नजर, हवाला के जरिए कनाडा भेजे गए करोड़ों रुपये, अब होगा एक्शन#NIAAction #Khalistanis #Canadahttps://t.co/wHsd8xTSFv
— India TV (@indiatvnews) September 25, 2023
೧. ಆರೋಪಪತ್ರದ ಪ್ರಕಾರ ೨೦೧೯ ರಿಂದ ೨೦೨೧ ರ ವರೆಗಿನ ೩ ವರ್ಷಗಳಲ್ಲಿ ಭಾರತದಿಂದ ನಿವ್ವಳ ೧೩ ಸಲ ಕೆನಡಾ ಮತ್ತು ಥೈಲ್ಯಾಂಡ್ ಇಲ್ಲಿ ಹವಾಲಾ ಮೂಲಕ ಹಣ ಕಳುಹಿಸಲಾಗಿರುವುದೆಂದು ಹೇಳಲಾಗುತ್ತಿದೆ. ಇದರಲ್ಲಿ ೫ ಲಕ್ಷ ರೂಪಾಯಿ ಇಂದ ೬೦ ಲಕ್ಷ ರೂಪಾಯವರೆಗಿನ ಮೋತ್ತದ ಸಮಾವೇಶವಿದೆ.
೨. ಈ ಹಣ ಲಾರೆನ್ಸ್ ಬಿಷ್ನೊಯಿ ಇವನ ಮೂಲಕ ಕೆನಡಾದಲ್ಲಿನ ಖಲಿಸ್ತಾನಿಗಳ ವರೆಗೆ ತಲುಪಿಸಲಾಗುತ್ತಿರುವುದು ಕೂಡ ಇದರಲ್ಲಿ ನಮೂದಿಸಲಾಗಿದೆ. ‘ಬಬ್ಬರ ಖಾಲಸ ಇಂಟರ್ನ್ಯಾಷನಲ್’ ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಲಖಬೀರ ಸಿಂಹ ಲಾಂಡಾ ಇವನ ಸಹಾಯದಿಂದ ಬಿಷ್ಣೊಯ ಎಲ್ಲಾ ಹಣ ಸುತ್ತಿಸಿರುವುದು ಆರೋಪ ಪತ್ರದಲ್ಲಿ ಹೇಳಲಾಗಿದೆ.
೩. ವಸೂಲಿ, ಕಾನೂನುಬಾಹಿರ ಮಧ್ಯ ಮಾರಾಟ ಮತ್ತು ಶಸ್ತ್ರಾಸ್ತ್ರಗಳ ಕಳ್ಳ ಸಾಗಾಣಿಕೆಯಿಂದ ಜಮಾಗೊಳಿಸಿರುವ ಹಣ ಲಾರೆನ್ಸ್ ಬಿಷ್ಣೊಯಿ ಸಹಚರ ಗೋಲ್ಡಿ ಬ್ರಾರ್ ಮತ್ತು ಸತಬೀರ ಸಿಂಹ ಅಲಿಯಾಸ್ ಸ್ಯಾಮ್ ಈ ಇಬ್ಬರಿಗೆ ಮೊದಲು ಹಸ್ತಾಂತರಿಕವಾಗುತ್ತಿತ್ತು. ಅಲ್ಲಿಂದ ಅದು ಕೆನಡಾದಲ್ಲಿನ ಇತರ ಸಂಘಟನೆಗಳಿಗೆ ನೀಡಲಾಗುತ್ತಿತ್ತು.
೪. ಹವಾಲಾ ಮಾಧ್ಯಮದಿಂದ ಕೆನಡಾದಲ್ಲಿ ತಲುಪಿಸಿರುವ ಈ ಹಣ ಖಲಿಸ್ತಾನಿ ಚಳುವಳಿಯ ಮುಖ್ಯಸ್ಥರ ಮೂಲಕ ಚಲನಚಿತ್ರ ನಿರ್ಮಾಣದಲ್ಲಿ ಹಾಗೂ ‘ಕೆನಡಾ ಪ್ರೀಮಿಯಂ ಲೀಗ್’ ನಂತಹ ಸ್ಪರ್ಧೆಯಲ್ಲಿ ತೊಡಗಿಸಿರುವುದು ಕೂಡ ಎನ್.ಐ.ಎ. ಯ ಆರೋಪ ಪತ್ರದಲ್ಲಿ ಹೇಳಲಾಗಿದೆ.
೫. ೨೦೨೦ ರಲ್ಲಿ ಗೋಲ್ಡಿ ಬ್ರಾರಿಗೆ ಎರಡು ಸಲ ೨೦ ಲಕ್ಷ ರೂಪಾಯಿ ಕಳುಹಿಸಲಾಗಿದೆ ಹಾಗೂ ಸ್ಯಾಮ್ ಗೆ ಒಟ್ಟು ೬೦ ಲಕ್ಷ ರೂಪಾಯಿ ಕಳುಹಿಸಲಾಗಿತ್ತು. ೨೦೨೧ ರಲ್ಲಿ ಗೋಲ್ಡಿ ಬ್ರಾರ್‌ಗೆ ಪ್ರತಿ ತಿಂಗಳಿಗೆ ೨ ಲಕ್ಷ ರೂಪಾಯಿ ಕಳುಹಿಸಲಾಗಿದೆ. ಈ ವರ್ಷ ಸ್ಯಾಮ್ ಗೆ ಇನ್ನೂ ಎರಡು ಸಾರಿ ೪೦ ಲಕ್ಷ ಮತ್ತು ೨೦ ಲಕ್ಷ ರೂಪಾಯ ಕಳುಹಿಸಲಾಗಿದೆ.
ಸಂಪಾದಕೀಯ ನಿಲುವು೨೦೧೯ ರಿಂದ ೨೦೨೧ ಈ 3 ವರ್ಷಗಳಲ್ಲಿ ಭಾರತದಿಂದ ಹವಾಲಾ ಮೂಲಕ ನಿವ್ವಳ ೧೩ ಸಲ ದೊಡ್ಡ ಮೊತ್ತ ಕೆನಡಾಗೆ ಕಳುಹಿಸಲಾಗಿದೆ ! ಕೆನಡಾದಿಂದ ಭಾರತದ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿ ಕೂಡ ಅದಕ್ಕೆ ಒಂದೇ ಒಂದು ಸಾಕ್ಷಿ ಕೂಡ ನೀಡಲು ಸಾಧ್ಯವಾಗಿಲ್ಲ. ಇನ್ನೊಂದು ಕಡೆ ಭಾರತದಿಂದ ಕೆನಡಾದಲ್ಲಿನ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಆರೋಪಪತ್ರ ದಾಖಲಿಸಲಾಗಿದೆ. ಇದರಿಂದ ಕೆನಡಾ ಈಗಲಾದರೂ ಈ ಖಲಿಸ್ತಾನಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವುದೇ ? ಭಾರತವು ಈ ಖಲಿಸ್ತಾನಿಗಳಿಗೆ ಅಂತರಾಷ್ಟ್ರೀಯ ಭಯೋತ್ಪಾದಕರೆಂದು ಘೋಷಿಸಲು ಕಟಿಬದ್ಧರಾಗಬೇಕು !
|