ಭಾರತ ಕೊರೋನಾ ಮಹಾಮಾರಿಯ ಸಮಯದಲ್ಲಿ ಮಾಡಿರುವ ಸಹಾಯದಿಂದ ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ಅನೇಕ ದೇಶಗಳಿಂದ ಆಭಾರ ಮನ್ನಣೆ !

ನ್ಯೂಯಾರ್ಕ್ (ಅಮೇರಿಕಾ) – ಕೊರೊನಾ ಮಹಾಮಾರಿಯ ಸಮಯದಲ್ಲಿ ಭಾರತವು ೯೮ ದೇಶಗಳಿಗೆ ಕೊರೊನಾದ ಲಸಿಕೆ ನೀಡಿರುವುದರಿಂದ ಅನೇಕ ದೇಶಗಳು ಮನಃ ಪೂರ್ವಕವಾಗಿ ಧನ್ಯವಾದ ನೀಡಿದ್ದರು. ಈ ಸಮಯದಲ್ಲಿ ಭಾರತದ ‘ವ್ಯಾಕ್ಸಿನ್ ಸ್ನೇಹ’ ಇದರ ಅಂತರ್ಗತದಲ್ಲಿ ಈ ಸಹಾಯ ಮಾಡಲಾಗಿತ್ತು. ಈಗಲೂ ಕೂಡ ವಿಶ್ವ ಸಂಸ್ಥೆಯ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಮಹಾಸಭೆಯಲ್ಲಿ ಅನೇಕ ದೇಶಗಳ ವಿದೇಶಾಂಗ ಸಚಿವರು ಮತ್ತೊಮ್ಮೆ ಭಾರತದ ಆಭಾರ ಮನ್ನಿಸಿದರು.

ಕೊರೋನಾ ಮಹಾಮರಿಯ ಸಮಯದಲ್ಲಿ ಭಾರತದಿಂದ ನಮ್ಮ ಕರೆಗೆ ತತ್ಪರತೆಯಿಂದ ಸ್ಪಂದಿಸಿತು ! – ಡಾ. ವಿಂಗ್ಸ್ ಹೆಂಡರಸನ್ , ವಿದೇಶಾಂಗ ಸಚಿವ, ಡಾಮಿನಿಕಾ

ಕೊರೊನಾ ಮಹಾಮಾರಿಯ ಸಮಯದಲ್ಲಿ ನಮ್ಮ ‘ನಾಗರಿಕರನ್ನು ಇದರಿಂದ ಹೇಗೆ ರಕ್ಷಿಸುವುದು’, ಇದು ಒಂದು ನಮಗೆ ಯಕ್ಷಪ್ರಶ್ನೆ ಆಗಿತ್ತು. ಆಗ ನಮ್ಮ ಕರೆಗೆ ಭಾರತ ತತ್ಪರತೆಯಿಂದ ಸ್ಪಂದಿಸಿತು. ಭಾರತ ನಮಗೆ ಕೊರೋನಾದ ಲಸಿಕೆ ಪೂರೈಸಿತು. ನಮ್ಮಂತಹ ಪುಟ್ಟ ಮತ್ತು ಬಡ ದೇಶ, ಆರ್ಥಿಕ ವ್ಯವಸ್ಥೆ ಕೇವಲ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ ಅದಕ್ಕೆ ಭಾರತವು ಸಹಾಯ ಮಾಡಿತು. ನಾನು ವೈಯಕ್ತಿಕವಾಗಿ ಭಾರತೀಯ ಜನತೆ ಮತ್ತು ಅಲ್ಲಿಯ ಸರಕಾರಕ್ಕೆ ಮನಪೂರ್ವಕವಾಗಿ ಈ ಮಹತ್ವಪೂರ್ಣ ವೇದಿಕೆಯಿಂದ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಭಾರತದಿಂದ ಮಾನವೀಯತೆಗಾಗಿ ಐತಿಹಾಸಿಕ ಮುನ್ನಡೆ ! – ತಾಂದಿ ದೊರಜಿ, ವಿದೇಶಾಂಗ ಸಚಿವ, ಭೂತಾನ್

ಭಾರತದಿಂದ ‘ವ್ಯಾಕ್ಸಿನ್ ಸ್ನೇಹ’ದ ಮಾಧ್ಯಮದಿಂದ ಮಾನವೀಯತೆಗಾಗಿ ಇಟ್ಟಿರುವ ಐತಿಹಾಸಿಕ ಹೆಜ್ಜೆ ಆಗಿತ್ತು. ಭಾರತದಿಂದ. ಜಗತ್ತಿನಲ್ಲಿನ ೧೦೦ ಕ್ಕೂ ಹೆಚ್ಚಿನ ದೇಶಗಳಿಗೆ ಕೊರೋನಾ ಲಸಿಕೆ ಪೂರೈಸಿದೆ.

ಆರ್ಥಿಕ ಪ್ರಗತಿ ಮಾಡುತ್ತಾ ಭಾರತ ಇತರ ದೇಶಗಳನ್ನು ಮರೆಯಲಿಲ್ಲ ! – ಮನೀಷ ಗೋಬಿನ, ಆಹಾರ ಸುರಕ್ಷಾ ಸಚಿವ, ಮೋರೀಶಸ್

೧೯೯೦ ರಲ್ಲಿ ಭಾರತವು ಮುಕ್ತ ಆರ್ಥಿಕ ವ್ಯವಸ್ಥೆ ನೀತಿಯನ್ನು ಸ್ವೀಕರಿಸಿತು. ಆದ್ದರಿಂದ ಭಾರತ ಎಲ್ಲಿಂದ ಎಲ್ಲಿಗೆ ತಲುಪಿದೆ. ಆರ್ಥಿಕ ಪ್ರಗತಿ ಮಾಡುತ್ತಿರುವಾಗ ಭಾರತ ಇತರ ದೇಶಗಳನ್ನು ಮರೆಯಲಿಲ್ಲ. ಭಾರತವು ಮಾರಿಶಿಸ ನಂತಹ ದೇಶಕ್ಕೆ ಜಿ 20 ಯ ವೇದಿಕೆಗೆ ಕರೆ ತಂದಿದ್ದು ಇದೇ ಅದರ ಒಂದು ಉದಾಹರಣೆ ಆಗಿದೆ ಎಂದು ಹೇಳಿದರು.

ಕೊರೊನಾ ಮಹಾಮಾರಿಯಿಂದ ಚೇತರಿಸಿಕೊಳ್ಳಲು ಭಾರತ ಸಹಾಯ ನೀಡಿತು ! – ಅಹಮದ್ ಖಲೀಲ್, ವಿದೇಶಾಂಗ ಸಚಿವ, ಮಾಲದಿವ

ಮುಂದಿನ ೨೫ ವರ್ಷಗಳಲ್ಲಿ ಭಾರತ ಜಗತ್ತಿನಲ್ಲಿನ ಎರಡನೇ ಎಲ್ಲಕ್ಕಿಂತ ಬೃಹತ್ ಅರ್ಥವ್ಯವಸ್ಥೆ ಆಗುವುದು. ಕೊರೊನಾ ಮಹಾಮಾರಿಯಿಂದ ನಮ್ಮ ದೇಶಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಅದರಿಂದ ಬೇಗನೆ ಚೇತರಿಸಿಕೊಳ್ಳುವ ಹಿಂದಿನ ಕಾರಣವೇ ಭಾರತದಿಂದ ಪೂರೈಸಲಾಗಿರುವ ಸಹಾಯ ಕೂಡ ಆಗಿದೆ. ಭಾರತ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.