ಮುಝಫ್ಫರಪುರ (ಬಿಹಾರ)ದಲ್ಲಿ ೧೦ ಕುಟುಂಬಗಳ ೭೦ ಜನರು ಹಿಂದು ಧರ್ಮದಲ್ಲಿ ಘರವಾಪಸಿ !

೧೦ ವರ್ಷಗಳ ಹಿಂದೆ ಇಸ್ಲಾಂ ಸ್ವೀಕರಿಸಿದ್ದರು !

ಮುಝಫ್ಫರಪುರ (ಬಿಹಾರ) – ಇಲ್ಲಿಯ ೧೦ ಕುಟುಂಬಗಳ ೭೦ ಜನರು ಇಸ್ಲಾಂ ತ್ಯಜಿಸಿ ಹಿಂದು ಧರ್ಮದಲ್ಲಿ ಘರವಾಪಸಿ ಮಾಡಿದರು. ಈ ಎಲ್ಲರೂ ಮೌಲ್ವಿ ಮತ್ತು ಮುಸಲ್ಮಾನ ಮುಖಂಡರ ಹೇಳಿಕೆಯನುಸಾರ ಇಸ್ಲಾಂ ಧರ್ಮವನ್ನು ಸ್ವೀರಿಸಿದ್ದರು. ಈಗ ಇಲ್ಲಿನ ಶರವೀರ ಆಶ್ರಮದಲ್ಲಿ ಅವರ ಶುದ್ಧೀಕರಣ ಮಾಡಿ ಹಿಂದು ಧರ್ಮದಲ್ಲಿ ಪುನಃ ಕರೆದುಕೊಳ್ಳಲಾಯಿತು.

ಆಶ್ರಮದ ಸ್ವಾಮಿ ಮೃಗೇಂದ್ರ ಸಿಂಹ ಇವರು, ಇಲ್ಲಿನ ಜೋಗಿ ಸಮುದಾಯವು ೧೦ ವರ್ಷಗಳ ಹಿಂದೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿತ್ತು. ಅವರನ್ನು ಹೆದರಿಸಿ ಮತ್ತು ಆಮಿಷ ತೋರಿಸಿ ಮತಾಂತರ ಮಾಡಲಾಗಿತ್ತು. ಈಗ ಅವರಿಗೆ ಪುನಃ ಹಿಂದು ಧರ್ಮದಲ್ಲಿ ಬರುವ ಇಚ್ಛೆಯಾದನಂತರ ಅವರು ಇಲ್ಲಿಗೆ ಬಂದಿದ್ದರು, ಎಂದು ಹೇಳಿದರು.