ಸಪ್ತಲೋಕಗಳ ಅರ್ಥ

ಸನಾತನ ಧರ್ಮದಲ್ಲಿ ಸಪ್ತಲೋಕಗಳ ಬಗ್ಗೆ ಹೇಳಲಾಗಿದೆ. ದೇವರ ಕೃಪೆಯಿಂದ ನನಗೆ ಸೂಕ್ಷ್ಮ ಜ್ಞಾನದ ಮೂಲಕ ಇದರ ಅರ್ಥ ಪ್ರಾಪ್ತವಾಯಿತು. ಅದನ್ನು ಮುಂದೆ ನೀಡಿದ್ದೇವೆ.

ಶ್ರೀ. ರಾಮ ಹೊನಪ

೧. ಭೂಲೋಕ : ಭೂ, ಈ ಶಬ್ದ ಮಾತೃ ಎಂಬ ಅರ್ಥದಲ್ಲಿದೆ. ಮನುಷ್ಯನ ಜನ್ಮ ಭೂಮಿಗೆ ಭೂಲೋಕ ಅಥವಾ ಮಾತೃಲೋಕ ಎಂದು ಹೇಳಲಾಗಿದೆ.

೨. ಭುವರ್ಲೋಕ : ಭೂ ಎಂದರೆ ಪೃಥ್ವಿ ಮತ್ತು ವ ಎಂದರೆ ಅದಕ್ಕೆ ಸಂಬಂಧಿತ. ಪೃಥ್ವಿಗೆ ಸಂಬಂಧಪಟ್ಟ ಸೂಕ್ಷ್ಮ ಲೋಕ ಎಂದರೆ ಭುವರ್ಲೋಕ. ಇಲ್ಲಿ ಪೃಥ್ವಿಯಿಂದ ಬಂದಿರುವ ಒಳ್ಳೆಯ ಶಕ್ತಿ ಮತ್ತು ಕೆಟ್ಟ ಶಕ್ತಿ ಇವುಗಳ ವಾಸ್ತವ್ಯವಿರುತ್ತದೆ.

೩. ಸ್ವರ್ಗಲೋಕ : ಸ್ವ ಈ ಶಬ್ದ ಸುಖಕ್ಕೆ ಸಂಬಂಧ ಪಟ್ಟಿದೆ. ಮತ್ತು ರ್ಗ ಈ ಶಬ್ದ ಗರ್ಕ ಇರುವುದು ಅಥವಾ ತಲ್ಲೀನವಾಗಿರುವುದು ಎಂಬ ಅರ್ಥದಲ್ಲಿದೆ. ಯಾವ ಲೋಕದಲ್ಲಿ ಸುಖದಲ್ಲಿ ತಲ್ಲೀನ ವಾಗಿರುವ ಜೀವ ವಾಸಿಸುತ್ತದೆ ಅದಕ್ಕೆ ಸ್ವರ್ಗಲೋಕ ಎನ್ನುತ್ತಾರೆ.

೪. ಮಹರ್ಲೋಕ : ಮಹಾ ಎಂದರೆ ದೊಡ್ಡದು. ಸಾಧನೆಯ ದೃಷ್ಟಿಯಿಂದ ಉನ್ನತ ಎಂದರೆ ಉಚ್ಚ ಲೋಕ.

೫. ಜನಲೋಕ : ಜನ ಶಬ್ದದ ಅರ್ಥ ಜೋಡಣೆ ಆಗುವುದು ಎಂದಾಗಿದೆ. ಜೀವವು ಶಿವನ ಜೊತೆಗೆ ಜೋಡಣೆಯಾಗುವ ಲೋಕಕ್ಕೆ ಜನಲೋಕ ಎಂದು ಹೇಳಲಾಗಿದೆ.

೬. ತಪೋಲೋಕ : ತಪ ಈ ಶಬ್ದ ತಪಸ್ಸು ಎಂಬ ಅರ್ಥದಲ್ಲಿದೆ. ಜನಲೋಕದಲ್ಲಿ ಜೀವವು ಶಿವನ ಜೊತೆಗೆ ಜೋಡಣೆಯಾಯಿತು; ಆದರೆ ಈ ಅವಸ್ಥೆ ಶಾಶ್ವತವಾಗಿರಲು ಜೀವವು ತಪ್ಪ ಎಂದರೆ ತಪಸ್ಸು ಮಾಡಬೇಕು, ಅಂತಹ ಜೀವಗಳಿಗೆ ತಪಸ್ಸು ಮಾಡಲಿಕ್ಕಾಗಿ ಇರುವ ಸೂಕ್ಷ್ಮ ಸ್ಥಾನ ಎಂದರೆ ತಪೋಲೋಕ.

೭. ಸತ್ಯಲೋಕ : ಸತ್ಯ ಈ ಶಬ್ದ ಬ್ರಹ್ಮ ಎಂಬ ಅರ್ಥದಲ್ಲಿದೆ. ಜೀವಕ್ಕೆ ಬ್ರಹ್ಮನ ಅನುಭೂತಿ ಬರುವ ಲೋಕವೇ ಸತ್ಯಲೋಕ.

– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ) ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೨.೨೦೨೨)