ಶ್ರೀನಗರ (ಜಮ್ಮು-ಕಾಶ್ಮೀರ) – ಜಿಹಾದಿ ಭಯೋತ್ಪಾದಕರಿಗೆ ಸಹಾಯ ಮಾಡುವುದು ಮತ್ತು ಭ್ರಷ್ಟಾಚಾರದ ಪ್ರಕರಣದಲ್ಲಿ ಶ್ರೀನಗರ ಪೊಲೀಸರು ಪೊಲೀಸ ಉಪಾಯುಕ್ತ ಶೇಖ ಆದಿಲ್ ಮುಸ್ತಾಕ್ ಇವನನ್ನು ಬಂಧಿಸಿದ್ದಾರೆ. ಅವನ ಮನೆಯ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ ನಂತರ ಶೇಖ ಇವನು ಮನೆಯಿಂದ ಹೊರಗೆ ಜಿಗಿದು ಓಡಿ ಹೋಗುವ ಪ್ರಯತ್ನ ಮಾಡಿದನು, ಆ ಸಮಯದಲ್ಲಿ ಅವನನ್ನು ಬಂಧಿಸಲಾಯಿತು.
J&K | Police Arrests KPS Officer Sheikh Adil In Srinagarhttps://t.co/A8rwOEUuID
— Daily Excelsior (@DailyExcelsior1) September 21, 2023
ಶೇಖ ಆದಿಲ್ ಇವನು ಮುಜಮ್ಮೀಲ್ ಜಹೂರ್ ಈ ಜಿಹಾದಿ ಭಯೋತ್ಪಾದಕನಿಗೆ ಬಂಧನದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು, ಇದರ ಬಗ್ಗೆ ಸಲಹೆ ನೀಡಿದ್ದನು. ಇವರಿಬ್ಬರೂ ಯಾವಾಗಲೂ ಪರಸ್ಪರ ಸಂಪರ್ಕದಲ್ಲಿದ್ದರು. ಶೇಖ ಆದಿಲ್ ಇವನು ಮುಜಮ್ಮಿಲ್ ಜಹೂರ್ ನಿಂದ 5 ಲಕ್ಷ ರೂಪಾಯಿ ಕೂಡ ಪಡೆದಿದ್ದನು. ಹಾಗೂ ಶೇಖ ಆದಿಲ್ ಇವನು ಜಹೂರ್ ಇವನ ವಿಚಾರಣೆ ನಡೆಸುವ ಪೊಲೀಸ ಅಧಿಕಾರಿಗೆ ಮೋಸ ಮಾಡುವ ಪ್ರಯತ್ನ ಮಾಡಿದನು. ಶೇಖ ಇವನು ನಕಲಿ ದಾಖಲೆಗಳ ಮೂಲಕ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದನು. ಅದರಲ್ಲಿ ಭಯೋತ್ಪಾದಕರಿಗಾಗಿ ಹಣ ಜಮಾ ಮಾಡುತ್ತಿದ್ದ.
(ಸೌಜನ್ಯ – NDTV)
ಸಂಪಾದಕೀಯ ನಿಲುವುಕಾಶ್ಮೀರದಲ್ಲಿ ಇಂತಹ ಇನ್ನು ಎಷ್ಟು ಪೊಲೀಸ ಅಧಿಕಾರಿಗಳು ಇದ್ದಾರೆ ಇದರ ಬಗ್ಗೆಯೂ ವಿಚಾರಣೆ ನಡೆಸಬೇಕು. ಹಾಗೂ ಇಂತಹವರ ಮೇಲೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಕಠಿಣ ಶಿಕ್ಷೆಯಾಗಲು ಸರಕಾರ ಪ್ರಯತ್ನಿಸಬೇಕು ! |