ಎನ್.ಐ.ಎ.ಯು ಕೆನಡಾದಲ್ಲಿ ಅಡಗಿರುವ ೪೩ ಭಯೋತ್ಪಾದಕರು ಮತ್ತು ಗೂಂಡಾಗಳ ವಿವರಗಳನ್ನು ಪ್ರಸಾರ ಮಾಡಿ ಮಾಹಿತಿ ಕೋರಿದೆ !

ನವ ದೆಹಲಿ – ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಕೆನಡಾದೊಂದಿಗೆ ಸಂಪರ್ಕ ಹೊಂದಿರುವ ೪೩ ಭಯೋತ್ಪಾದಕರ ಮತ್ತು ಗೂಂಡಾಗಳ ವಿವರವನ್ನು ಬಿಡುಗಡೆ ಮಾಡಿದೆ. ‘ಸಂಬಂಧ ಪಟ್ಟ ಆರೋಪಿಗಳ ಆಸ್ತಿಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ’ ಎನ್.ಐ.ಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಈ ಆಸ್ತಿಯನ್ನು ಕೇಂದ್ರ ಸರಕಾರವು ವಶಕ್ಕೆ ಪಡೆಯಬಹುದು. ಲಾರೆನ್ಸ ಬಿಶನೊಯಿ, ಜಸದೀಪ ಸಿಂಗ, ಕಾಲಾ ಜಠೇಡಿ ಅಲಿಯಾಸ ಸಂದೀಪ, ವೀರೇಂದ್ರ ಪ್ರತಾಪ ಅಲಿಯಾಸ ಕಾಲಾರಾಣ ಜೋಗೀಂದರ ಸಿಂಗ ಮತ್ತು ಇತರ ಅಪರಾಧಿಗಳ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ. ಇದರಲ್ಲಿ ಅನೇಕ ಗೂಂಡಾಗಳು ಕೆನಡಾದಲ್ಲಿ ನೆಲೆಸಿದ್ದಾರೆ ಎಂದು ಎನ್.ಐ ಎ. ಹೇಳಿದೆ. ಎನ್.ಐ,ಎ. ಇದಕ್ಕಾಗಿ ವಾಟ್ಸಾಪ್ ಸಂಖ್ಯೆ ೭೨೯೦೦೦೯೩೭೩ ಅನ್ನು ಪ್ರಸಾರ ಮಾಡಿದೆ.

ಸಂಪಾದಕೀಯ ನಿಲುವು

ಕೆನಡಾ ಸರಕಾರಕ್ಕೆ ಈ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಂಡು ಭಾರತಕ್ಕೆ ಹಸ್ತಾಂತರಿಸಲು ವಿನಂತಿಸಿದರೂ ಅದನ್ನು ತಿರಸ್ಕರಿಸಲಾಗಿದೆ. ಇದರಿಂದ ಕೆನಡಾ ಹೇಗೆ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಇದನ್ನು ಗಮನಕ್ಕೆ ಬರುತ್ತದೆ !