ಕೆನಡಾದಲ್ಲಿನ ಹಿಂದೂಗಳು ಖಲಿಸ್ತಾನಿ ಭಯೋತ್ಪಾದಕರ ಕರಿನೆರಳಿನಲ್ಲಿದ್ದಾರೆ ! – ಕೆನಡಾದಲ್ಲಿನ ಹಿಂದೂ ಸಂಸದ ಚಂದ್ರಾ ಆರ್ಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಪರಾಧಿಗಳ ವೈಭವೀಕರಣ ನಡೆಯುತ್ತಿದೆ ಎಂದು ಹೇಳಿಕೆ !

ಓಟಾವಾ (ಕೆನಡಾ) – ಭಾರತ ಮತ್ತು ಕೆನಡಾ ನಡುವಿನ ಬಿಗುವಿನ ವಾತಾವರಣ ಇರುವಾಗಲೇ ಈಗ ಕೆನಡಾದ ಸಂಸತ್ತಿನಲ್ಲಿ ಹಿಂದೂ ಸಂಸದ ಚಂದ್ರಾ ಆರ್ಯ ಇವರು ಗಂಭೀರ ಹೇಳಿಕೆ ನೀಡಿದ್ದಾರೆ. ಆರ್ಯ ಇವರು ಕೆನಡಾದಲ್ಲಿನ ಹಿಂದುಗಳಿಗೆ ಕರೆ ನೀಡಿರುವ ವಿಡಿಯೋ ‘ಎಕ್ಸ್’ ಮೂಲಕ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು, ಕೆಲವು ದಿನಗಳ ಹಿಂದೆ ಕೆನಡಾದಲ್ಲಿನ ಖಲಿಸ್ತಾನಿ ಚಳುವಳಿಯ ನಾಯಕ ಮತ್ತು ‘ಸಿಖ್ ಫಾರ್ ಜಸ್ಟಿಸ್’ ನ ಅಧ್ಯಕ್ಷ ಗುರುಪತವಂತ ಸಿಂಹ ಪನ್ನು ಇವನು ಕೆನಡಾದಲ್ಲಿನ ಹಿಂದುಗಳ ಮೇಲೆ ವೈಚಾರಿಕವಾಗಿ ದಾಳಿ ಮಾಡುತ್ತಾ ನಮ್ಮ ಹಿಂದುಗಳಿಗೆ ಕೆನಡಾದಿಂದ ಭಾರತಕ್ಕೆ ಹಿಂತಿರುಗಿ ಹೋಗಲು ಹೇಳಿದ್ದೇವೆ. ಇದರ ನಂತರ ಅನೇಕ ಹಿಂದೂ ಕೆನಡಿಯನ್ ನಾಗರಿಕರು ಭಯೋತ್ಪಾದಕರ ಕರಿನೆರಳಿನಲ್ಲಿ ಇರುವುದನ್ನು ನಾನು ಕೇಳಿದ್ದೇನೆ. ನಾನು ಕೆನಡಾದಲ್ಲಿನ ಹಿಂದೂ ನಾಗರಿಕರಿಗೆ, ಅವರು ಶಾಂತವಾಗಿ ಮತ್ತು ಜಾಗರೂಕಗಿ ಇರಬೇಕು ಎಂದು ಕರೆ ನೀಡುತ್ತೇನೆ. ಈ ರೀತಿಯ ಹಿಂದೂ ದ್ವೇಷದ ಯಾವುದೇ ಘಟನೆ ನಿಮಗೆ ಕಾಣಿಸಿದರೆ ತಕ್ಷಣ ಸ್ಥಳೀಯ ಸುರಕ್ಷಾ ಇಲಾಖೆಗೆ ಇದರ ಮಾಹಿತಿ ನೀಡಿರಿ. ಖಲಿಸ್ತಾನಿ ಚಳುವಳಿಯ ನಾಯಕ ಇಲ್ಲಿಯ ಹಿಂದೂ ನಾಗರಿಕರಿಗೆ ಪ್ರಚೋದಿಸಿ ದೇಶದಲ್ಲಿ ಹಿಂದೂ ಮತ್ತು ಸಿಖ್ ರ ನಡುವೆ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಆರ್ಯ ಇವರು ಮಂಡಿಸಿರುವ ಮಹತ್ವಪೂರ್ಣ ಅಂಶಗಳು !

೧. ನಾನು, ಕೆನಡಾದಲ್ಲಿನ ಬಹಳಷ್ಟು ಸಿಖ ಜನಾಂಗವು ಖಲಿಸ್ತಾನಿ ಚಳುವಳಿಗೆ ಬೆಂಬಲಿಸುವುದಿಲ್ಲ. ಅನೇಕ ಸಿಖ್ ನಾಗರಿಕರು ಕೆಲವು ಕಾರಣಗಳಿಂದ ಬಹಿರಂಗವಾಗಿ ಖಲಿಸ್ತಾನಿ ಚಳವಳಿಯನ್ನು ನಿಷೇಧಿಸಲು ಸಾಧ್ಯವಾಗುತ್ತಿಲ್ಲ: ಆದರೆ ಅವರು ಕೆನಡಾದಲ್ಲಿನ ಹಿಂದೂ ನಾಗರಿಕರ ಜೊತೆಗೆ ಒಳ್ಳೆಯ ಸಂಬಂಧ ಇಟ್ಟು ಕೊಂಡಿದ್ದಾರೆ. ಈ ಸಂಬಂಧ ಕೌಟುಂಬಿಕವಾಗಿ ಇರಬಹುದು, ಸಾಮಾಜಿಕ ಸಾಂಸ್ಕೃತಿಕವಾಗಿ ಕೂಡ ಇರುವುದು ಎಂಬುದು ನಾನು ಸ್ಪಷ್ಟವಾಗಿ ಹೇಳುತ್ತೇನೆ.

೨. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಯೋತ್ಪಾದನೆ ಅಥವಾ ದ್ವೇಷದ ಮೂಲಕ ಅಪರಾಧದ ವೈಭವೀಕರಣ ಹೇಗೆ ಮಾಡಲಾಗುತ್ತಿದೆ? ಇದು ನನಗೆ ತಿಳಿಯುತ್ತಿಲ್ಲ. ಕೆನಡಾದಲ್ಲಿನ ಹಿಂದೂ ಜನಾಂಗ ಈ ಪ್ರಚೋದನೆಗೆ ಏನಾದರೂ ಬಲಿಯಾದರೆ ಆಗ ಕೆನಡಾದಲ್ಲಿ ಗಂಭೀರ ಪರಿಸ್ಥಿತಿ ಉದ್ಭವಿಸುವುದು. ಆದರೆ ಖಲಿಸ್ತಾನಿ ನಾಯಕರು ಹಿಂದೂಗಳನ್ನು ಪ್ರಚೋದಿಸುವುದನ್ನು ಬಿಡಲಾರರು, ಹೇಗೆ ಕಾಣುತ್ತದೆ. ಕೆನಡಾದಲ್ಲಿನ ಹಿಂದೂ ನಾಗರಿಕರು ಶಾಂತವಾಗಿರುತ್ತಾರೆ ಮತ್ತು ಅವರನ್ನೇ ಸುಲಭವಾಗಿ ಗುರಿ ಮಾಡಬಹುದೆಂದು ಖಲಿಸ್ತಾನಿಗಳ ಊಹೆ ಆಗಿದೆ.

೩. ಹಿಂದೂ ನಾಗರಿಕರಿಗೆ ದೊರೆತಿರುವ ಯಶಸ್ಸು ಹಿಂದೂ ವಿರೋಧಿ ಸಮಾಜಕಂಟಕರು ಸಹಿಸುತ್ತಿಲ್ಲ. ಹೀಗೆ ಎರಡು ಗುಂಪುಗಳು ಸುನಿಯೋಜಿತವಾಗಿ ಕೆನಡಾದಲ್ಲಿನ ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ನನ್ನ ಮೇಲೆ ಕೂಡ ದಾಳಿ ನಡೆದಿವೆ. ಕೆನಡಾದ ಧ್ವಜದ ಸಹಿತ ನಮ್ಮ ಓಂ ಚಿಹ್ನೆ ರಾರಾಜಿಸಿರುವುದರಿಂದ ಕಳೆದ ೧೦ ತಿಂಗಳಿಂದ ನನ್ನನ್ನು ನಿರಂತರ ಗುರಿ ಮಾಡಲಾಗುತ್ತಿದೆ.

೪. ನಾನು ಎಲ್ಲಾ ಹಿಂದೂ ಕೆನಡಿಯನ್ ನಾಗರಿಕರಿಗೆ ಮತ್ತೊಮ್ಮೆ ವಿನಂತಿಸುತ್ತೇನೆ, ಅವರು ಶಾಂತ ಆದರೆ ಜಾಗರೂಕರಾಗಿರಬೇಕು. ಒಬ್ಬ ಕೆನಡಿಯನ್ ನಾಗರಿಕನೆಂದು ನಮ್ಮ ಹಿಂದೂ ಶ್ರದ್ಧೆ, ಪರಂಪರೆ ಮತ್ತು ಕೆನಡಾದ ವಿಕಾಸದಲ್ಲಿ ನಮ್ಮ ಕೊಡುಗೆ ಇದರ ಬಗ್ಗೆ ನಮಗೆ ಅಭಿಮಾನ ಅನಿಸಬೇಕು. (ಕೇವಲ ಹಿಂದೂ ಸಮಾಜವೇ ಜಗತ್ತಿನಲ್ಲಿ ಎಲ್ಲೇ ಹೋದರು ಅಲ್ಲಿಯ ರಾಷ್ಟ್ರ ಮತ್ತು ಸಂಸ್ಕೃತಿಯ ಜೊತೆಗೆ ಏಕರೂಪರಾಗುತ್ತಾರೆ. ಅಲ್ಲಿಯ ಭೂಮಿ ತನ್ನ ಭೂಮಿ ಎಂದು ತಿಳಿದು ಅಲ್ಲಿಯ ವಿಕಾಸಕ್ಕಾಗಿ ನಿಸ್ವಾರ್ಥತೆಯಿಂದ ಕಾರ್ಯನಿರತರಾಗುತ್ತಾರೆ. ಇದು ಹಿಂದುಗಳಿಗೆ ದೊರೆತಿರುವ ವ್ಯಾಪಕ ಧರ್ಮದ ಕಲಿಕೆಯ ಪರಿಣಾಮವಾಗಿದೆ ಇದನ್ನು ತಿಳಿದುಕೊಳ್ಳಿ ! – ಸಂಪಾದಕರು)

ಸಂಪಾದಕೀಯ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಜಸ್ಟಿನ್ ಟ್ರುಡೋ ಇವರು ‘ಇಲ್ಲಿಯ ಹಿಂದೂ ನಾಗರಿಕರ ರಕ್ಷಣೆಗಾಗಿ ಏನು ಮಾಡುವರು ?’, ಇದನ್ನು ಹೇಳಲು ಅನಿವಾರ್ಯ ಪಡಿಸಬೇಕು !