ಕೆನಡಾದ ಪಂಜಾಬದಲ್ಲಿನ ಸಿಖ ರೌಡಿಯ ಗುಂಡು ಹಾರಿಸಿ ಹತ್ಯೆ

ಓಟಾವಾ (ಕೆನಡಾ) – ಜೂನ್ ತಿಂಗಳಲ್ಲಿ ಕೆನಡಾದಲ್ಲಿ ನಡೆದಿರುವ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿರುವ ಕೆನಡಾದ ಪ್ರಧಾನಮಂತ್ರಿಯ ಹೇಳಿಕೆಯಿಂದ ಆರಂಭವಾಗಿರುವ ವಿವಾದದಲ್ಲಿ ಈಗ ಕೆನಡಾದಲ್ಲಿ ಭಾರತೀಯ ಸಿಖ್ ರೌಡಿಯ ಹತ್ಯೆ ಮಾಡಲಾಗಿದೆ. ಸುಖದುಲ ಸಿಂಹ ಗಿಲ್ ಅಲಿಯಾಸ್ ಸುಕ್ಖಾ ದುನಾಕೆ ಇವನ ಹತ್ಯೆ ಮಾಡಲಾಗಿದೆ. ೨೦೧೭ ರಲ್ಲಿ ನಕಲಿ ಪಾಸ್ ಪೋರ್ಟ್ ತಯಾರಿಸಿ ಪಂಜಾಬ್ ದಿಂದ ಕೆನಡಾಗೆ ಪಲಾಯನ ಮಾಡಿದ್ದನು. ಆ ಸಮಯದಲ್ಲಿ ಅವನ ಮೇಲೆ ೭ ಅಪರಾಧಗಳು ಬಾಕಿ ಇದ್ದವು. ಹಣ ವಸೂಲಿ ಮತ್ತು ಕೊಲೆ ಮಾಡುವುದು ಇಂತಹ ಗಂಭೀರ ಆರೋಪ ಅವನ ಮೇಲೆ ನಮೂದಿಸಲಾಗಿದ್ದವು. ಈ ಎಲ್ಲಾ ಪ್ರಕರಣಗಳು ಸ್ಥಳೀಯ ಗುಂಪುಗಳ ಕಾರ್ಯಾಚರಣೆಗೆ ಸಂಬಂಧಿತವಾಗಿದ್ದವು.

ಕೆನಡಾದಲ್ಲಿನ ವಿನಿಪೆಗದಲ್ಲಿ ಸುಕ್ಖಾ ದುನಾಕೆ ಇವನ ತಲೆಗೆ ೮ ಗುಂಡುಗಳು ಹಾರಿಸಲಾಗಿದೆ. ಅದರಲ್ಲಿ ಅವನು ಸ್ಥಳದಲ್ಲಿಯೇ ಮೃತಪಟ್ಟನು. ರಾಷ್ಟ್ರೀಯ ತನಿಖಾ ದಳದಿಂದ ಘೋಷಿಸಲಾದ ೪೩ ಭಯೋತ್ಪಾದಕ ಮತ್ತು ರೌಡಿಗಳ ಪಟ್ಟಿಯಲ್ಲಿ ಸುಕ್ಖಾ ಹೆಸರು ಸಮಾವೇಶಗೊಂಡಿತ್ತು. ಸುಕ್ಖಾ ದುನಾಕೆ ರೌಡಿತನ ನಡೆಸುವ ಮೊದಲು ಪಂಜಾಬದ ಮೊಗ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದನು. ಸುಕ್ಖಾ ದುನಾಕೆ ಇವನು ಮೂಲತಃ ಬಂಬಿಹ ತಂಡದ ಜೊತೆಗೆ ಗುರುತಿಸಿಕೊಂಡಿದ್ದನು. ಕೆನಡಾಕೆ ಹೋದ ನಂತರ ಅವನು ಭಾರತದಲ್ಲಿ ಇದರ ಜಾಲ ಹೆಚ್ಚಿಸಲು ಆರಂಭಿಸಿದನು. ಅವನು ಭಯೋತ್ಪಾದಕ ಅರ್ಶ್ ಡಲ್ಲಾ ಇವನ ನಿಕಟವರ್ತಿ ಆಗಿದ್ದನು. ಅವನು ರಾಜ್ಯದಲ್ಲಿ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆ ಮತ್ತು ಹಣ ವಸೂಲಿ ಆರಂಭಿಸಿದನು.

ಸಂಪಾದಕೀಯ ನಿಲುವು

ಕೆನಡಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ, ಇದೇ ಇದರಿಂದ ತಿಳಿಯುತ್ತದೆ ! ಪ್ರಧಾನಮಂತ್ರಿ ಟ್ರುಡೋ ಇವರು ಭಾರತದ ಮೇಲೆ ಬೊಟ್ಟು ಮಾಡುವ ಬದಲು ಕಾನೂನು ಮತ್ತು ಸುವ್ಯವಸ್ಥೆಯ ಕಡೆಗೆ ಗಮನಹರಿಸಬೇಕು !