ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ ಭುಟ್ಟೊ ಇವರಿಂದ ಪಶ್ಚಿಮಾತ್ಯ ಶಕ್ತಿಗಳಿಗೆ ಹಾಸ್ಯಸ್ಪದ ಕರೆ !
ಇಸ್ಲಾಮಾಬಾದ – ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಪ್ರಕರಣದಿಂದ ಭಾರತ ಮತ್ತು ಕೆನಡಾದಲ್ಲಿನ ಸಂಬಂಧದಲ್ಲಿ ಹೆಚ್ಚಿರುವ ಒತ್ತಡದ ಬಗ್ಗೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವರು ವಿಚಿತ್ರವಾದ ಹಾಸ್ಯಸ್ಪದ ಹೇಳಿಕೆ ನೀಡಿದ್ದಾರೆ. ‘ಪಾಕಿಸ್ತಾನ ಪೀಪಲ್ಸ್ ಪಾರ್ಟಿ’ಯ ಅಧ್ಯಕ್ಷನಾಗಿರುವ ಬಿಲಾವಲ ಭುಟ್ಟೊ ಇವರು ಭಾರತವನ್ನು ‘ಹಿಂದೂ ಭಯೋತ್ಪಾದಕ ದೇಶ’ವೆಂದು ಘೋಷಿಸಬೇಕೆಂದು ಆಗ್ರಹಿಸಿದರು. ಅವರು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ಇದರ ಬಗ್ಗೆ ಅಧಿಕೃತ ಹೇಳಿಕೆ ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಭುಟ್ಟೊ ಇವರು, ಕೆನಡಾವು ಭಾರತದ ಮೇಲೆ ಮಾಡಿರುವ ಆರೋಪದಿಂದ ಭಾರತದ ನಿಜವಾದ ಮುಖ ಜಗತ್ತಿನೆದುರು ಬಂದಿದೆ. ಅಂತರಾಷ್ಟ್ರೀಯ ಸಮುದಾಯ, ವಿಶೇಷವಾಗಿ ಪಶ್ಚಿಮ ರಾಷ್ಟ್ರಗಳು ಪಾಕಿಸ್ತಾನದ ಸ್ನೇಹಿತರು ಇನ್ನು ಎಷ್ಟು ಕಾಲ ಭಾರತದೊಂದಿಗೆ ಇಂತಹ ವಿಷಯಗಳು ಕಡೆಗೆ ನಿರ್ಲಕ್ಷ್ಯ ಮಾಡುವರು ? ಭಾರತ ಇದೊಂದು ದುಷ್ಟ ಹಿಂದುತ್ವವಾದಿ ಭಯೋತ್ಪಾದಕ ದೇಶವಾಗಿದೆ ಎಂದು ಅಂತರಾಷ್ಟ್ರೀಯ ಸಮುದಾಯ ಇದನ್ನು ಸ್ವೀಕರಿಸುವ ಸಮಯ ಬಂದಿದೆ, ಹೇಳಿದರು.
Following Canada’s accusation of India’s alleged involvement in the assassination of a Sikh separatist leader within its borders, former Foreign Minister Bilawal Bhutto-Zardari kicked off a controversy by asking the global community to acknowledge India as a “Hindutva-driven… pic.twitter.com/I3DvLV9iNu
— TIMES NOW (@TimesNow) September 20, 2023
ಕಾಶ್ಮೀರದ ಬಗ್ಗೆ ವಿಷಕಾರಿದ !
ಕಾಶ್ಮೀರದ ಸಂದರ್ಭದಲ್ಲಿ ಮತ್ತೆ ಅದೇ ಹಳೆಯ ರಾಗ ಹಾಡುತ್ತಾ ಭುಟ್ಟೊರವರು, ಭಾರತವು ಕಾಶ್ಮೀರದಲ್ಲಿ ಭಯೋತ್ಪಾದನೆ ಪೋಷಿಸಲಾಗುತ್ತಿದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ದಾಳಿಗಳಲ್ಲಿ ಭಾರತೀಯ ಬೇಹುಗಾರಿಕೆಯವರು ಸಹಭಾಗಿರುತ್ತಾರೆ. ಅದರಲ್ಲಿನ ಅನೇಕರನ್ನು ಬಂಧಿಸಲಾಗಿದೆ. (ಆಧಾರ ಇಲ್ಲದಿರುವ ಸುಳ್ಳು ಆರೋಪ ಮಾಡುವುದು ಭುಟ್ಟೊ ಇವರ ರಕ್ತದಲ್ಲಿಯೇ ಇದೆ ! – ಸಂಪಾದಕರು) ಇಂದು ಭಾರತವು ‘ನಾಟೋ’ದ ಸದಸ್ಯ ಆಗಿರುವ ಕೆನಡಾದ ಸಾರ್ವಭೌಮತ್ವದ ಉಲ್ಲಂಘನೆ ಮಾಡಿದೆ. ಇದು ಅಂತರಾಷ್ಟ್ರೀಯ ಕಾನೂನು ಮತ್ತು ಮಾನದಂಡದ ಉಲ್ಲಂಘನೆಯಾಗಿದೆ ಎಂದು ಹೇಳಿದರು. (ಭಾರತದಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪಾದಕರನ್ನು ಕಳಿಸುವಾಗ ಭುಟ್ಟೊ ಇವರಿಗೆ ಅಂತರಾಷ್ಟ್ರೀಯ ಕಾನೂನು ನೆನಪಾಗುವುದಿಲ್ಲವೆ ? – ಸಂಪಾದಕರು)
ಸಂಪಾದಕೀಯ ನಿಲುವುಭಾರತದ ದುಷ್ಟತನದ ಬಗ್ಗೆ ಹೇಳಿಕೆ ನೀಡುವುದಕ್ಕಿಂತಲೂ ಭುಟ್ಟೊ ಇವರು ತಮ್ಮ ದೇಶದ ಉಳಿದಿರುವ ಮಾನಮರ್ಯಾದೆ ಕಾಪಾಡುವುದಕ್ಕಾಗಿ ಪ್ರಯತ್ನಿಸಬೇಕು ! ಇಂತಹ ಸಾಮಾನ್ಯ ವಿಷಯ ಕೂಡ ತಿಳಿಯದಿರುವಂತಹ ವ್ಯಕ್ತಿ ಒಂದು ಕಾಲದಲ್ಲಿ ವಿದೇಶಾಂಗ ಸಚಿವನಾಗಿದ್ದರೂ ಇದರಲ್ಲಿಯೇ ಎಲ್ಲವೂ ಅಡಕವಾಗಿದೆ ! |