ಕರಿಮಾ ಬಲೂಚ ಹತ್ಯೆಯ ಸಂದರ್ಭದಲ್ಲಿ ಟ್ರುಡೊ ಮೌನ ವಹಿಸಿದ್ದರು ! – ನಿವೃತ್ತ ಕ್ಯಾಪ್ಟನ್ ಅನಿಲ ಗೌರ

ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಬಲೂಚಿ ನಾಯಕಿ ಕರಿಮಾ ಬಲೂಚ್

ನವ ದೆಹಲಿ – ಪಾಕಿಸ್ತಾನಿ ಸೇನೆ ಬಲೂಚಿ ಜನರ ಮೇಲೆ ನಡೆಸಿದ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿದ್ದ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಬಲೂಚಿ ನಾಯಕಿ ಕರಿಮಾ ಬಲೂಚ್ ಅವರನ್ನು ೩ ವರ್ಷಗಳ ಹಿಂದೆ ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಕೈವಾಡವಿದೆ ಎಂದು ಹೇಳಲಾಗಿತ್ತು. ಆ ಸಂದರ್ಭದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊ ಮೌನವಹಿಸಿದ್ದರು. ಈಗ ಟ್ರುಡೊ ಖಲಿಸ್ತಾನಿಗಳನ್ನು ಬೆಂಬಲಿಸುವ ಮೂಲಕ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಿವೃತ್ತ ಕ್ಯಾಪ್ಟನ್ ಅನಿಲ ಗೌರ ಹೇಳಿದ್ದಾರೆ.