ಭಾರತದ ವಿರೋಧದ ನಂತರವೂ ಶ್ರೀಲಂಕಾ ನಿರ್ಣಯ
ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ಮತ್ತೊಮ್ಮೆ ಚೀನಾದ ಬೇಹುಗಾರಿಕಾ ಹಡಗಿಗೆ ಕೊಲಂಬೊ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನೀಡಿ ಭಾರತಕ್ಕೆ ದ್ರೋಹವೆಸಗಿದೆ. ಕಳೆದ ವರ್ಷವೂ ಭಾರತದ ವಿರೋಧದ ನಂತರ ಶ್ರೀಲಂಕಾ ಚೀನಾದ ಬೇಹುಗಾರಿಕೆ ಮಾಡುವ ಹಡಗನ್ನು ಹಂಬನಟೊಟಾ ಬಂದರಿನಲ್ಲಿ ನಿಲ್ಲಿಸುವ ಅನುಮತಿ ನೀಡಿತ್ತು.
‘ಶಿ ಯಾನ್ ೬’ ಈ ಹಡಗು ಸಂಶೋಧನೆಯ ಹೆಸರಿನಲ್ಲಿ ಹಿಂದೂ ಮಹಾಸಾಗರದಲ್ಲಿ ಬೇಹುಗಾರಿಕೆ ಮಾಡುತ್ತದೆ. ಮುಂದಿನ ೩ ತಿಂಗಳು ಈ ಹಡಗು ಹಿಂದೂ ಮಹಾಸಾರಗರದಲ್ಲಿ ಪ್ರಯಾಣಿಸಲಿದೆ. ಕಳೆದ ವರ್ಷ ‘ಯುಆನ್ ವಾಂಗ್ ೫’ ಈ ಬೇಹುಗಾರಿಕೆ ಹಡಗು ಶ್ರೀಲಂಕಾದಲ್ಲಿ ನಿಂತಿತ್ತು. ಆ ಸಮಯದಲ್ಲಿ ಭಾರತ ಸಹಿತ ಅಮೇರಿಕಾ ಸಹ ಇದನ್ನು ವಿರೋಧಿಸಿತ್ತು.
ಸಂಪಾದಕೀಯ ನಿಲುವುಆರ್ಥಿಕವಾಗಿ ದಿವಾಳಿಯಾದ ಶ್ರೀಲಂಕಾಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲು ಚೀನಾ ಅಲ್ಲ, ಭಾರತ ಸಹಾಯ ಮಾಡಿತ್ತು. ಅನಂತರ ಶ್ರೀಲಂಕಾ ಪುನಃ ಚೇತರಿಸಿಕೊಳ್ಳುತ್ತಿದೆ; ಆದರೆ ಶ್ರೀಲಂಕಾ ಈ ರೀತಿಯಲ್ಲಿ ಮರುಪಾವತಿ ಮಾಡುತ್ತಿದ್ದರೆ, ಭಾರತ ಈ ಬಗ್ಗೆ ವಿಚಾರ ಮಾಡುವ ಆವಶ್ಯಕತೆ ಇದೆ. |