ನೂತನ ಸಂಸತ್ ಭವನದಲ್ಲಿ ಕಾರ್ಯಕಲಾಪ ಆರಂಭ

ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. ೩೩ ರಷ್ಟು ಮೀಸಲಾತಿ ನೀಡುವ ಮಸೂದೆ ಮಂಡನೆ

ನವ ದೆಹಲಿ – ಎಲ್ಲ ಸಂಸದರು ಹಳೆಯ ಸಂಸತ್ ಭವನದಿಂದ ಕಾಲ್ನಡಿಗೆ ಮೂಲಕ ನೂತನ ಸಂಸತ್ ಭವನಕ್ಕೆ ತಲುಪಿದ ಬಳಿಕ ಪ್ರಧಾನಮಂತ್ರಿ ಮೋದಿಯವರು ಎಲ್ಲರಿಗೂ ಮಾರ್ಗದರ್ಶನ ಮಾಡಿದನಂತರ ಕಾರ್ಯಕಲಾಪ ಆರಂಭವಾಯಿತು. ಈ ಸಮಯದಲ್ಲಿ ಕಾನೂನು ಸಚಿವ ಅರ್ಜುನ ಮೇಘವಾಲ್ ಇವರು ಲೋಕಸಭೆಯಲ್ಲಿ ೧೨೮ ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ‘ನಾರೀ ಶಕ್ತಿ ವಂದನ’ ಈ ಹೆಸರಿನಲ್ಲಿ ಮಂಡಿಸಲಾದ ಮಸೂದೆಯಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗಾಗಿ ಮಹಿಳೆಯರಿಗೆ ಶೇ. ೩೩ ರಷ್ಟು ಸೀಟುಗಳನ್ನು ಮೀಸಲಿಡಲು ಅವಕಾಶ ನೀಡುತ್ತಿದೆ. ಈ ಮಸೂದೆಯ ಬಗ್ಗೆ ಇಂದು ಚರ್ಚೆ ನಡೆಯಲಿದೆ. ಈ ಮಸೂದೆ ಅಂಗೀಕರಿಸಿದನಂತರ ಲೋಕಸಭೆಯಲ್ಲಿ ಮಹಿಳೆಯರ ಸಂಖ್ಯೆ ೧೮೧ ಆಗಲಿದೆ. ಪ್ರಸ್ತುತ ಲೋಕಸಭೆಯಲ್ಲಿ ೮೨ ಸಂಸದರಿದ್ದಾರೆ. ಈ ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಿದರೂ ೨೦೨೪ ರ ಚುನಾವಣೆಯಲ್ಲಿ ಇದು ಜಾರಿಗೆ ಬರುವ ಸಾಧ್ಯವಿಲ್ಲವೆಂದು ತಜ್ಞರು ಹೇಳುತ್ತಿದ್ದಾರೆ; ಏಕೆಂದರೆ ಗಡಿರೇಖೆಯ ಪ್ರಕಾರ ಇದನ್ನು ಜಾರಿಗೊಳಿಸಬಹುದು. ಜನಗಣನೆಯ ನಂತರವೇ ಗಡಿರೇಖೆಯನ್ನು ಮಾಡಲಾಗುವುದು. ಈ ಎರಡು ಚುನಾವಣೆಗಳ ಮೊದಲು ಸಾಧ್ಯವಿಲ್ಲ.