ಪಾಕಿಸ್ತಾನಿ ರಾಜಕೀಯ ತಜ್ಞರಿಂದ ವಿರೋಧ ವ್ಯಕ್ತ
ಇಸ್ಲಾಮಾಬಾದ್ (ಪಾಕಿಸ್ತಾನ) – ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವವನು ಮತ್ತು ಭಾರತದಿಂದ ಪರಾರಿಯಾಗಿರುವ ಝಾಕೀರ್ ನಾಯಿಕ್ ಈಗ ಪಾಕಿಸ್ತಾನದ ಪ್ರವಾಸದಲ್ಲಿದ್ದಾನೆ. ಅಲ್ಲಿಯ ಸರಕಾರ ಅವನಿಗೆ ಭವ್ಯವಾಗಿ ಸ್ವಾಗತಿಸಿದೆ. ಅಕ್ಟೋಬರ್ ೨೮ ವರೆಗೆ ಅವನು ಪಾಕಿಸ್ತಾನದಲ್ಲಿ ಇರುವನು. ಅಲ್ಲಿಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವನು ಸಹಭಾಗಿ ಆಗುವನು. ಅವನು ಭಾರತದಲ್ಲಿನ ವಕ್ಫ್ ಬೋರ್ಡ್ ಸುಧಾರಣಾ ವಿಧೇಯಕದ ವಿರುದ್ಧ ಎಲ್ಲಾ ಮುಸಲ್ಮಾನರಿಗೆ ಒಟ್ಟಾಗಿ ಸೇರುವ ಕರೆ ನೀಡಿದ್ದಾನೆ.
ಇನ್ನೊಂದು ಕಡೆ ಪಾಕಿಸ್ತಾನದಲ್ಲಿನ ಪತ್ರಕರ್ತರು ಮತ್ತು ರಾಜಕೀಯ ತಜ್ಞರು ಮಾತ್ರ ಝಾಕೀರನಿಗೆ ಸರಕಾರಿ ಮಟ್ಟದಲ್ಲಿ ನೀಡುತ್ತಿರುವ ಸ್ವಾಗತವನ್ನು ಟೀಕಿಸಿದ್ದಾರೆ. ‘ಝಾಕೀರ್ ಯಾವುದೇ ದೊಡ್ಡ ದೇಶದ ಪ್ರಮುಖ ಅಥವಾ ಅಂತರಾಷ್ಟ್ರೀಯ ಮಟ್ಟದ ಮುಖ್ಯ ವ್ಯಕ್ತಿ ಅಲ್ಲದಿರುವಾಗ ಅವನಿಗೆ ಏಕೆ ಇಷ್ಟು ಮಹತ್ವ ನೀಡಲಾಗುತ್ತಿದೆ ?’, ಎಂದು ಪ್ರಶ್ನೆ ಕೇಳುತ್ತಿದ್ದಾರೆ.
ಪಾಕಿಸ್ತಾನದ ಮುಸ್ಲಿಂ ಲೀಗ್ ನ ನಾಯಕರು ಮತ್ತು ಪ್ರಧಾನಮಂತ್ರಿ ಶಹಾಬಾಜ್ ಶರೀಫ್ ಇವರ ಆಪ್ತರೆಂದು ಗುರುತಿಸಿಕೊಂಡಿರುವ ರಾಣಾ ಮಶಹುದ್, ಧಾರ್ಮಿಕ ವ್ಯವಹಾರ ಹೆಚ್ಚುವರಿ ಸಚಿವಾಲಯದ ಸಚಿವ ಸೈಯದ್ ಅಲಾ ಉರ್ ರೆಹಮಾನ್, ಧಾರ್ಮಿಕ ವ್ಯವಹಾರದ ಸಂಸದೀಯ ಸಚಿವ ಶಮಶೆರ್ ಮಜಾರಿ ಮತ್ತು ಇತರ ಅನೇಕ ನಾಯಕರು ಹಾಗೂ ಅಧಿಕಾರಿಗಳು ಝಾಕೀರನ ಸ್ವಾಗತಕ್ಕಾಗಿ ಇಸ್ಲಾಮಾಬಾದ್‌ನ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು. ಈಗ ಪಾಕಿಸ್ತಾನದಲ್ಲಿನ ಅನೇಕ ದೊಡ್ಡ ನಾಯಕರು ಝಾಕೀರನನ್ನು ಭೇಟಿ ಮಾಡುವುದಕ್ಕಾಗಿ ಸಾಲುಗಟ್ಟಿ ನಿಂತಿರುವುದು ಕಂಡುಬರುತ್ತಿದೆ. ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಮಹಮ್ಮದ್ ಇಶಾಕ ಡಾರ್ ಇವರು ಕೂಡ ಝಾಕೀರನನ್ನು ಭೇಟಿ ಮಾಡಿದರು. ಝಾಕೀರ್ ೨೦೧೬ ರಿಂದ ಮಲೇಶಿಯಾದಲ್ಲಿ ವಾಸಿಸುತ್ತಿದ್ದಾನೆ. ಮಲೇಶಿಯಾ ಸರಕಾರವು ಝಾಕೀರನನ್ನು ಭಾರತಕ್ಕೆ ಪ್ರತ್ಯಾರ್ಪಣೆ ಮಾಡುವುದಕ್ಕಾಗಿ ಭಾರತ ಸರಕಾರ ಪ್ರಯತ್ನ ಮಾಡುತ್ತಿದೆ.
ಸಂಪಾದಕೀಯ ನಿಲುವುಭಾರತದ ಶತ್ರು ನಮ್ಮ ಮಿತ್ರ, ಈ ಅರ್ಥದಿಂದ ಪಾಕಿಸ್ತಾನವು ಝಾಕೀರನಿಗೆ ಸ್ವಾಗತಿಸಿದೆ. ಭಾರತದ ಗಾಯದ ಮೇಲೆ ಬರೆ ಹಾಕುವ ಪಾಕಿಸ್ತಾನಕ್ಕೆ ಶಾಶ್ವತವಾದ ಪಾಠ ಕಲಿಸುವುದಕ್ಕಾಗಿ ಮತ್ತು ಝಕೀರನ ಹೆಡೆಮುರಿ ಕಟ್ಟಲು ಭಾರತ ಸರಕಾರ ಯಾವ ಕ್ರಮ ಕೈಗೊಳ್ಳುವುದು ? |
‘ಭಾರತದಲ್ಲಿ ಕೋಟ್ಯಾಂತರ ಹಿಂದುಗಳು ಗೋಮಾಂಸ ಸೇವಿಸುತ್ತಾರಂತೆ !- ಝಾಕೀರ್ ನಾಯಿಕನ ಸುಳ್ಳುತನ
ಇಸ್ಲಾಮಾಬಾದದಲ್ಲಿನ ಒಂದು ಕಾರ್ಯಕ್ರಮದ ಸಮಯದಲ್ಲಿ ಪ್ರಸಾರ ಮಾಧ್ಯಮದ ಓರ್ವ ಪ್ರತಿನಿಧಿಯು ಜಾಕಿರನಿಗೆ, ‘ಭಾರತದಲ್ಲಿ ಗೋಮಾಂಸದ ಮೇಲೆ ನಿಷೇಧ ಹೇರಲಾಗಿದ್ದು ಅಲ್ಲಿಯ ಮುಸಲ್ಮಾನರು ಈ ನಿಷೇಧವನ್ನು ಪಾಲಿಸಬೇಕೇ ?’, ಎಂದು ಪ್ರಶ್ನೆ ಕೇಳಿದಾಗ ಝಾಕೀರ್, ‘ಇದರ ಕುರಿತು ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ಒಂದು ಇಸ್ಲಾಮಿ ಅಭಿಪ್ರಾಯವಿದೆ. ಇಸ್ಲಾಮಿ ಶರಿಯಾದ ಪ್ರಕಾರ ನೀವು ಯಾವ ದೇಶದಲ್ಲಿ ವಾಸಿಸುತ್ತೀರಾ ಆ ದೇಶದ ಕಾನೂನು ಪಾಲಿಸಬೇಕು; ಆದರೆ ಯಾವ ದೇಶ ಅಲ್ಲಾ ಮತ್ತು ಪೈಗಂಬರನ ನಿಯಮದ ವಿರುದ್ಧ ಇಲ್ಲವಲ್ಲವೇ ಇದನ್ನು ಪರಿಶೀಲಿಸಬೇಕು. ಉದಾಹರಣೆಗಾಗಿ, ಯಾವುದಾದರೂ ದೇಶದಲ್ಲಿ ನಮಾಜವನ್ನು ನಿಷೇಧಿಸಿದರೆ, ಆಗ ಆ ಕಾನೂನು ಒಪ್ಪಲಾಗದು; ಕಾರಣ ಇಸ್ಲಾಂನಲ್ಲಿ ನಮಾಜ ಪಠಣ ಅನಿವಾರ್ಯವಾಗಿದೆ. ಭಾರತದಲ್ಲಿ ಗೋಮಾಂಸದ ಮೇಲೆ ನಿಷೇಧ ಇದು ರಾಜಕೀಯ ಅಂಶವಾಗಿದೆ, ನಿಜವೆಂದರೆ ಭಾರತದಲ್ಲಿ ಕೋಟ್ಯಾಂತರ ಹಿಂದುಗಳು ಗೋಮಾಂಸ ಸೇವಿಸುತ್ತಾರೆ ಎಂದು ಹೇಳಿದ.
ಸಂಪಾದಕೀಯ ನಿಲುವು
|