Gaziabad Conversion : ಗಾಜಿಯಾಬಾದ (ಉತ್ತರ ಪ್ರದೇಶ) ಇಲ್ಲಿ ಹಿಂದೂ ಮಹಿಳೆ ಮೇಲೆ ಮತಾಂತರಕ್ಕೆ ಒತ್ತಡ !

ಘಾಜಿಯಾಬಾದ (ಉತ್ತರ ಪ್ರದೇಶ) – ಜಿಲ್ಲೆಯ ಓರ್ವ ಹಿಂದೂ ಮಹಿಳೆಗೆ ಮತಾಂತರವಾಗಲು ಒತ್ತಡ ಹೇರಿದ ಘಟನೆ ಬಹಿರಂಗವಾಗಿದೆ. ಆ ಮಹಿಳೆಗೆ ಕ್ರೈಸ್ತರಾಗಲು ಆಮಿಷವನ್ನು ಒಡ್ಡಲಾಗುತ್ತಿತ್ತು. ಅವಳಿಗೆ `ನಿನ್ನ ಎಲ್ಲ ದುಃಖ ದೂರವಾಗುವುದು, ಸಾಕಷ್ಟು ಹಣ ಸಿಗುತ್ತದೆ’ ಎಂದು ಹೇಳಲಾಗುತ್ತಿತ್ತು. ಅವಳಿಗೆ ಬೈಬಲ ಓದುವಂತೆ ಒತ್ತಡ ಹೇರಲಾಗಿತ್ತು.

1. ಸೆಪ್ಟೆಂಬರ್ 30 ರಂದು ಸಂತ್ರಸ್ತ ಮಹಿಳೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಅವಳು ಸಾಯನ ವಿಹಾರ್ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ಅವಳ ಮನೆಯ ಹತ್ತಿರ ವಾಸವಿದ್ದ ಪುಷ್ಪಾ ಹೆಸರಿನ ಮಹಿಳೆಯು ಹಲವು ದಿನಗಳಿಂದ ಆಕೆಗೆ ಮತಾಂತರಗೊಳ್ಳಲು ಒತ್ತಡ ಹೇರುತ್ತಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.

2. ಪುಷ್ಪಾಳೊಂದಿಗೆ ಇನ್ನೂ ಕೆಲವು ಸಹಚರರೂ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಪುಷ್ಪಾ ಸಂತ್ರಸ್ತ ಮಹಿಳೆಯನ್ನು ಬಲವಂತವಾಗಿ ಸೋನೂ ಹೆಸರಿನ ಒಬ್ಬ ವ್ಯಕ್ತಿಯ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ಏಸುವಿನ ಪ್ರಾರ್ಥನಾ ಸಭೆ ನಡೆಯುತ್ತಿತ್ತು.

3. ಸಂತ್ರಸ್ತೆಗೆ ಪ್ರಾರ್ಥನಾ ಸಭೆಯಲ್ಲಿ ಬಲವಂತವಾಗಿ ಬೈಬಲ್ ಓದುವಂತೆ ಮಾಡಿದರು. ಆ ಸಮಯದಲ್ಲಿ ಸಂತ್ರಸ್ತೆಯ ಪತಿ ತನ್ನ ಕೆಲವು ಸ್ನೇಹಿತರೊಂದಿಗೆ ಅಲ್ಲಿ ತಲುಪಿ ತನ್ನ ಪತ್ನಿಯನ್ನು ಬಿಡುಗಡೆಗೊಳಿಸಿದನು.

4. ಪುಷ್ಪಾ ಮತ್ತು ಆಕೆಯ ಸಹಚರರು ಈ ಹಿಂದೆಯೂ ಅನೇಕ ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆಯು ಆರೋಪಿಸಿದ್ದಾರೆ.

5. ಗಾಜಿಯಾಬಾದ್ ಪೊಲೀಸ್ ಅಧೀಕ್ಷಕ ಲಿಪಿ ನಾಗಾಯಚ ನೀಡಿರುವ ಮಾಹಿತಿಯನುಸಾರ ಪುಷ್ಪಾ ಸೇರಿದಂತೆ ಇತರೆ ಆರೋಪಿಗಳ ವಿರುದ್ಧ ಅಪರಾಧ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸ ಪಡೆಯನ್ನು ಸಿದ್ಧಗೊಳಿಸಲಾಗಿದೆ ಎಂದು ಹೇಳಿದರು.

 ಸಂಪಾದಕೀಯ ನಿಲುವು

ಕ್ರೈಸ್ತರಿಗೆ ಕಾನೂನಿಗೆ ಭಯವಿಲ್ಲವಿರುವುದರಿಂದಲೇ ಹಿಂದೂಗಳ ಮತಾಂತರ ಮಾಡುತ್ತಿದ್ದಾರೆ. ಇಂತಹವರಿಗೆ ಕಠಿಣ ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳು ನಿಲ್ಲಬಹುದು !