
ನವದೆಹಲಿ – ದೆಹಲಿಯ ಕಾಳಿಂದಿ ಕುಂಜ್‌ನಲ್ಲಿರುವ ಜೈತ್ ಪುರ ಪ್ರದೇಶದಲ್ಲಿನ ನೀಮಾ ಆಸ್ಪತ್ರೆಯಲ್ಲಿ ಓರ್ವ 55 ವರ್ಷದ ವೈದ್ಯನನ್ನು ಇಬ್ಬರು ಅಪ್ರಾಪ್ತ ಹುಡುಗರು ಗುಂಡಿಕ್ಕಿ ಕೊಂದಿದ್ದಾರೆ. ಮೃತರ ಹೆಸರು ಯುನಾನಿ ವೈದ್ಯ ಜಾವೇದ್ ಅಖ್ತರ್ ಎಂದಿದೆ. ಘಟನೆ ಬಳಿಕ ಇಬ್ಬರು ಆರೋಪಿಗಳೂ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.(ಇದು ಪೋಲೀಸ್ ಮತ್ತು ಆಡಳಿತಕ್ಕೆ ಲಜ್ಯಾಸ್ಪದ ! – ಸಂಪಾದಕರು)
ಆಸ್ಪತ್ರೆಯ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿಗಳಿಬ್ಬರ ವಯಸ್ಸು 16-17 ವರ್ಷ ಇರಬಹುದು. ಆರೋಪಿಗಳಲ್ಲಿ ಒಬ್ಬನಿಗೆ ಅಕ್ಟೋಬರ್ 1 ರಂದು ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲಾಗಿತ್ತು. ಅಕ್ಟೋಬರ್ 2 ರಂದು ಅವನು ಆಸ್ಪತ್ರೆಗೆ ರಾತ್ರಿ ತಡವಾಗಿ ಬರುವಾಗ ಮತ್ತೊಬ್ಬ ಹುಡುಗನನ್ನು ಕರೆದುಕೊಂಡು ಬಂದನು. ಆರೋಪಿಗಳಿಬ್ಬರೂ ತಮಗೆ ಪ್ರಿಸ್ಕ್ರಿಪ್ಷನ್ ನ (ವೈದ್ಯರ ಸಲಹಾ ಚೀಟಿಯ) ಅವಶ್ಯಕತೆ ಇದೆ ಎಂದು ಹೇಳಿ ಡಾಕ್ಟರ್ ಜಾವೇದ್ ಅವರನ್ನು ಭೇಟಿಯಾಗಲು ಅವರ ಕ್ಯಾಬಿನ್ ಒಳಗೆ ಹೋದರು. ಅಲ್ಲಿ ವೈದ್ಯರ ಮೇಲೆ ಗುಂಡು ಹಾರಿಸಿ ಆರೋಪಿಗಳು ಓಡಿ ಹೋದರು. ಈ ಘಟನೆಯ ಮಾಹಿತಿ ಸಿಕ್ಕಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹವರನ್ನು ಅಪ್ರಾಪ್ತರೆಂದು ಕರೆಯಬಹುದೇ ? ಇಂತಹ ಹುಡುಗರಿಗೆ ದೊಡ್ಡವರಿಗೆ ನೀಡುವಷ್ಟೇ ಶಿಕ್ಷೆ ನೀಡುವುದು ಅವಶ್ಯಕ ! |
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!
ರಾಜಸ್ಥಾನದಲ್ಲಿ ೧೯೯೬ ರಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಛ ನ್ಯಾಯಾಲಯ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation