ಜಾರ್ಖಂಡದಲ್ಲಿ ರೈಲು ಹಳಿಗಳನ್ನು ಸ್ಪೋಟಿಸಿದ ಕಿಡಿಗೇಡಿಗಳು !

ಕಾನಪುರದಲ್ಲಿ ರೈಲು ಹಳಿಯ ಮೇಲೆ ಮತ್ತೆ ಸಿಲಿಂಡರ್ ಪತ್ತೆ

ಸಾಹಿಬಗಂಜ (ಜಾರ್ಖಂಡ್) – ಉತ್ತರಪ್ರದೇಶದ ಕಾನಪುರದಲ್ಲಿ ರೈಲು ಹಳಿಗಳ ಮೇಲೆ ಅಗ್ನಿಶಾಮಕ ಸಿಲಿಂಡರ ಇಟ್ಟಿರುವುದು ಕಂಡು ಬಂದಿದೆ. ಅದೇ ಸಮಯದಲ್ಲಿ ಜಾರ್ಖಂಡದಲ್ಲಿನ ಸಾಹಿಬಗಂಜ ಇಲ್ಲಿಯ ರೈಲು ಹಳಿ ಬಾಂಬ್ ಸ್ಪೋಟದ ಮೂಲಕ ಧ್ವಂಸ ಮಾಡಲಾಗಿದೆ. ಪೊಲೀಸರು ಎರಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಸಪ್ಟೆಂಬರ್ ೨೨ ರಂದು ಕಾನಪುರದಲ್ಲಿನ ರೈಲು ಹಳಿಯ ಮೇಲೆ ಒಂದು ಗ್ಯಾಸ್ ಸಿಲೆಂಡರ್ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಲಾಗಿಲ್ಲ.

೧. ಕಾನಪುರದಲ್ಲಿ ಅಕ್ಟೋಬರ್ ೨ ರಂದು ಬೆಳಿಗ್ಗೆ ೮ ರ ಸುಮಾರಿಗೆ ಒಂದು ಗೂಡ್ಸ್ ಗಾಡಿ ಅಂಬಿಯಾಪುರದಿಂದ ಹೋಗುತ್ತಿತ್ತು. ಆಗ ಲೋಕೋ ಪೈಲೆಟ್ ಗೆ (ಚಾಲಕನಿಗೆ) ಹಾವಡ-ದೆಹಲಿ ಮಾರ್ಗದಲ್ಲಿ ಅಗ್ನಿಶಾಮಕ ಯಂತ್ರ ಬಿದ್ದಿರುವುದು ಕಂಡಿತು.

೨. ಗೂಡ್ಸ್ ಗಾಡಿಯ ಚಾಲಕನು ರೈಲುಗಾಡಿ ನಿಲ್ಲಿಸಿ ನಿಯಂತ್ರಣ ಕಕ್ಷೆಗೆ ಮಾಹಿತಿ ನೀಡಿದನು. ರೈಲ್ವೆ ಪೊಲೀಸ್ ತಂಡ ತುರ್ತಾಗಿ ಘಟನಾಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು. ದೊರೆತಿರುವ ಅಗ್ನಿಶಾಮಕ ಯಂತ್ರ ಬಹಳ ಹಳೆಯದಾಗಿತ್ತು. ಪೊಲೀಸರು ಪ್ರಾಥಮಿಕವಾಗಿ ಇದು ಯಾರದೋ ಕಿಡಿಗೇಡಿ ಕೆಲಸ ಎಂದು ಹೇಳಿದೆ. (ಭಾರತಾದ್ಯಂತ ಇಂತಹ ಘಟನೆ ಘಟಿಸುತ್ತಿದ್ದರು ಕಿಡಿಗೇಡಿತನ ಎಂದು ತಿಳಿದು ಈ ಅಂಶವನ್ನು ಪೊಲೀಸರು ಮರೆಮಾಚಬಾರದು. ಇದು ರೈಲು ಜಿಹಾದ್ ಇರಬಹುದು ಎಂದು, ಅದೇ ದೃಷ್ಟಿಯಿಂದ ಪೊಲೀಸರು ಪ್ರಯತ್ನ ಮಾಡುವುದು ಅಪೇಕ್ಷಿತವಾಗಿದೆ ! – ಸಂಪಾದಕರು)

೩. ಜಾರ್ಖಂಡದಲ್ಲಿನ ಸಾಹಿಬಗಂಜದಲ್ಲಿನ ರಾಂಗಾ ಗ್ರಾಮದ ಹತ್ತಿರ ರೈಲ್ವೆ ಹಳಿ ಅಕ್ಟೋಬರ್ ೧ ರಾತ್ರಿ ಬಾಂಬ್ ಸ್ಫೋಟೋದ ಮೂಲಕ ಧ್ವಂಸಗೊಳಿಸಲಾಗಿದೆ. ಈ ಶಕ್ತಿಯುತ ಸ್ಪೋಟದಿಂದ ರೈಲು ಹಳಿಯ ೪೭೦ ಸೆಂಟಿಮೀಟರ್ ನ ತುಂಡು ೩೯ ಮೀಟರ್ ದೂರದಲ್ಲಿ ಬಿದ್ದಿತ್ತು. ಯಾವ ಸ್ಥಳದಲ್ಲಿ ಸ್ಪೋಟ ನಡೆದಿದೆ ಅಲ್ಲಿ ೩ ಅಡಿ ಆಳದ ತೆಗ್ಗು ಆಗಿದೆ.

ಸಂಪಾದಕೀಯ ನಿಲುವು

ಈ ರೀತಿಯ ಘಟನೆ ದೇಶದಲ್ಲಿ ಒಂದರ ಹಿಂದೆ ಒಂದರಂತೆ ಘಟಿಸುತ್ತಲಿರುವಾಗ ‘ಇದು ರೈಲು ಜಿಹಾದ್ ಆಗಿದೆಯೇ ?’ ಇದನ್ನು ಸಮೀಕ್ಷಾ ವ್ಯವಸ್ಥೆಯು ಇಲ್ಲಿಯವರೆಗೆ ತನಿಖೆ ನಡೆಸಬೇಕಿತ್ತು. ಇದೇನಾದರೂ ನಿಲ್ಲಿಸದಿದ್ದರೆ, ದೊಡ್ಡ ನಷ್ಟ ಆಗುವುದು ನಿಶ್ಚಿತ !