ಕಾಮುಕ ಅರ್ಚಕ’ ಎನ್ನುವ ಶಬ್ದದ ಉಪಯೋಗವೇಕೆ? ಕಾಮುಕ ಪಾದ್ರಿ ಅಥವಾ ಮೌಲಾನಾ ಎಂದು ಏಕಿಲ್ಲ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

(ಮೌಲಾನಾ ಎಂದರೆ ಇಸ್ಲಾಂನ ಅಭ್ಯಾಸಕರು)

ಛತರಪುರ (ಮಧ್ಯಪ್ರದೇಶ) – ಬಾಗೇಶ್ವರ ಧಾಮದ ಮುಖ್ಯಸ್ಥ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ‘ಕಾಮುಕ ಅರ್ಚಕ’, ಎಂದು ಏಕೆ ಹೇಳಲಾಗುತ್ತದೆ ? ಕಾಮುಕ ಪಾದ್ರಿ ಅಥವಾ ಮೌಲಾನಾ ಎಂದು ಏಕೆ ಹೇಳುವುದಿಲ್ಲ?’ ಎಂದು ಹೇಳಿಕೆ ನೀಡದರು. ಈ ಹೇಳಿಕೆಯ ಬಳಿಕ ಅವರ ಮೇಲೆ ಕೆಲವು ಜಾತ್ಯತೀತವಾದಿಗಳು ಟೀಕಿಸಿದ್ದರು.

ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿಯವರು,

1. ಸನಾತನ ಧರ್ಮದಲ್ಲಿ ಅರ್ಚಕರ ಸ್ಥಾನ ಅತ್ಯಂತ ಮಹತ್ವದ್ದಾಗಿದೆ. ಅವರನ್ನು `ಕಾಮುಕ ಅರ್ಚಕ’ ಎಂದು ಬಣ್ಣ ಬಳಿದು ಗುರಿ ಮಾಡಲಾಗುತ್ತಿದೆ.

2. ಹಿಂದೂಗಳು ತಮ್ಮ ಧರ್ಮದ ಪದ್ಧತಿ, ಸಂಪ್ರದಾಯಗಳನ್ನು ಅಪಹಾಸ್ಯ ಮಾಡುತ್ತಾರೆ; ಆದರೆ ಇತರೆ ಧರ್ಮದವರು ಹೀಗೆ ಮಾಡುತ್ತಿರುವುದು ಕಂಡು ಬರುವುದಿಲ್ಲ. `ಮುಸಲ್ಮಾನರು ಯಾವತ್ತೂ ತಮ್ಮ ಮೌಲ್ವಿಯ ಅಪಮಾನ ಮಾಡುವುದಿಲ್ಲ. ಹಿಂದೂಗಳು ಮಾತ್ರ ಸಂತರು ಮತ್ತು ತೀರ್ಥಕ್ಷೇತ್ರಗಳ ಅಪಮಾನ ಮಾಡುತ್ತಾರೆ.

3. ಬಹಳಷ್ಟು ಹಿಂದೂಗಳು ಹಿಂದೂ ಧರ್ಮದ ಧರ್ಮಗುರುಗಳಿಂದ ನಡೆಸುವ ಪಂಥಗಳು ಅಥವಾ ದೇವಸ್ಥಾನಗಳನ್ನು ‘ಬೂಟಾಟಿಕೆಗಳ ಅಂಗಡಿಗಳು’ ಎಂದು ಅಪಹಾಸ್ಯ ಮಾಡುತ್ತಾರೆ.

4. ನಮ್ಮ ಧರ್ಮದಲ್ಲಿ ಹೇಳಿರುವ ಪರಂಪರೆಯನ್ನು ನಾವು ಅನುಸರಿಸಬೇಕು. ಈ ಪರಂಪರೆಯೇ ನಮ್ಮ ಗುರುತಾಗಿದೆ. ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ.

5. ನಾನು ಯಾವುದೇ ಧರ್ಮವನ್ನು ಉದ್ದೇಶಿಸಿ ಏನನ್ನೂ ಹೇಳಿಲ್ಲ. `ಕಾಮುಕ ಮೌಲ್ವಿ ಎಂದು ಏಕೆ ಹೇಳುವುದಿಲ್ಲ’ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಓರ್ವ ಮೌಲ್ವಿಯು ಆಕ್ಷೇಪಿಸಿದ್ದರು. ಆಗ ನಾನು ಅವರಿಗೆ ಪ್ರತ್ಯುತ್ತರವನ್ನು ನೀಡಿದ್ದೆನು. ಎಲ್ಲ ಅರ್ಚಕರೂ ಕೆಟ್ಟವರಾಗಿರುವುದಿಲ್ಲ. ಹೀಗಿರುವಾಗ ಎಲ್ಲರನ್ನೂ ಏಕೆ ಗುರಿ ಮಾಡಲಾಗುತ್ತದೆ ?

ಧೀರೇಂದ್ರ ಶಾಸ್ತ್ರಿಯವರಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಛತರಪುರದಲ್ಲಿ ಸರ್ವಪಿತ್ರಿ ಅಮಾವಾಸ್ಯೆಯ ಮುಹೂರ್ತದಲ್ಲಿ ಸಿದ್ಧ ಕ್ಷೇತ್ರ ಬಾಗೇಶ್ವರ ಧಾಮದಲ್ಲಿ ಸ್ವಚ್ಛತೆಯ ಅಭಿಯಾನವನ್ನು ಕೈಕೊಂಡರು. ಈ ಅಭಿಯಾನದ ಅಂಗವಾಗಿ ಸಂಪೂರ್ಣ ಪ್ರದೇಶದ ಸ್ವಚ್ಛತೆ ಮಾಡುವಾಗ ಸ್ವಚ್ಛವಾಗಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ ಎನ್ನುವ ಸಂದೇಶವನ್ನು ನೀಡಲಾಯಿತು. ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಕೈಯಲ್ಲಿ ಪೊರಕೆಯನ್ನು ಹಿಡಿದುಕೊಂಡು ಸ್ವಚ್ಛತಾ ಅಭಿಯಾನ ಆರಂಭಿಸಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಚಲನಚಿತ್ರ, ಪ್ರಸಾರ ಮಾಧ್ಯಮಗಳು ಹಾಗೂ ಇತರ ಮಾಧ್ಯಮಗಳ ಮೂಲಕ ಹಿಂದೂ ಸಂತರು, ಮಹಂತರು, ಧರ್ಮಗುರುಗಳು ಮತ್ತು ಅರ್ಚಕರ ಮೇಲೆ ಅತ್ಯಂತ ಕೀಳಾಗಿ ಟೀಕೆ ಮಾಡಲಾಗುತ್ತದೆ. ಇದರ ವಿರುದ್ಧ ಅನೇಕ ಕಾಮುಕ ಕೃತ್ಯದಲ್ಲಿ ಸಿಲುಕಿರುವ ಮೌಲಾನಾ ಅಥವಾ ಪಾದ್ರಿಯವರ ವಿಷಯದಲ್ಲಿ ಏನನ್ನೂ ಮಾತನಾಡುವುದಿಲ್ಲ. ಹಿಂದೂ ಸಂತರ ಅಪಮಾನ ತಡೆಯಲು ಪರಿಣಾಮಕಾರಿ ಹಿಂದೂ ಸಂಘಟನೆಯ ಆವಶ್ಯಕತೆ !