ವಾರಣಾಸಿಯ ಒಂದು ಪೊಲೀಸ ಠಾಣೆಯಲ್ಲಿ ಬಾಬಾ ಕಾಲಭೈರವರೇ ಅಧಿಕಾರಿ !

ಕಾಲಭೈರವರಿಗಾಗಿ ಮುಖ್ಯ ಕುರ್ಚಿ ಹಾಗೂ ಪಕ್ಕದಲ್ಲಿರುವ ಕುರ್ಚಿಯಲ್ಲಿ ಪೊಲೀಸ ಅಧಿಕಾರಿಗಳು ಕುಳಿತು ಕೆಲಸ ಮಾಡುತ್ತಿದ್ದಾರೆ !

ವಾರಾಣಸಿ (ಉತ್ತರಪ್ರದೇಶ) – ಜ್ಞಾನವಾಪಿಯ ನ್ಯಾಯಾಲಯದ ಪ್ರಕರಣದಿಂದಾಗಿ ಸಮಸ್ತ ಭಾರತೀಯರ ಗಮನವು ಪ್ರಾಚೀನ ನಗರವಾದ ವಾರಾಣಸಿಯ ಕಡೆಗೆ ಹೊರಳಿದ್ದು ಇಲ್ಲಿ ಕಾಶಿ ವಿಶ್ವನಾಥನ ರೂಪವಾಗಿರುವ ಬಾಬಾ ಕಾಲಭೈರವನನ್ನು `ಕೊತವಾಲ’ ಎಂದು ಕರೆಯಲಾಗುತ್ತದೆ. ಜನರಲ್ಲಿ ಬಾಬಾ ಕಾಲಭೈರವರು ಇಲ್ಲಿನ ಒಂದು ಪೊಲೀಸ ಠಾಣೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಶ್ರದ್ಧೆಯಿದೆ. ಅವರಿಗಾಗಿ ಅಲ್ಲಿ ಮುಖ್ಯ ಕುರ್ಚಿ, ಮೇಜು ಹಾಗೂ ಟೊಪ್ಪಿಯನ್ನೂ ಇಡಲಾಗಿದೆ. ಹಾಗೆಯೇ ಠಾಣೆಯ ಸರಕಾರಿ ಪೊಲೀಸ ಅಧಿಕಾರಿಗಳು ಹತ್ತಿರದ ಕುರ್ಚಿಯಲ್ಲಿ ಕುಳಿತು ಠಾಣೆಯ ಕೆಲಸ ಮಾಡುತ್ತಾರೆ. ಅವರು ಪ್ರತಿದಿನ ಬಾಬಾ ಕಾಲಭೈರವರ ಆಶೀರ್ವಾದವನ್ನು ಪಡೆದು ಕೆಲಸವನ್ನು ಆರಂಭಿಸುತ್ತಾರೆ. ಬಾಬಾ ವಿಶ್ವನಾಥರೇ ಇಲ್ಲಿ ಬಾಬಾ ಕಾಲಭೈರವರ ನಿಯುಕ್ತಿ ಮಾಡಿದ್ದರು, ಎಂಬುದು ಇಲ್ಲಿನ ಹಿಂದೂಗಳ ಶ್ರದ್ಧೆಯಾಗಿದೆ.

ವಾರಾಣಸಿಯಲ್ಲಿ ಬಾಜಿರಾವ ಪೇಶ್ವೇಯವರು ೧೮೧೫ರಲ್ಲಿ ಬಾಬಾ ಕಾಲಭೈರವರ ದೇವಸ್ಥಾನವನ್ನು ನಿರ್ಮಿಸಿದ್ದರು. ಇಲ್ಲೇ ಇರುವ ಪೊಲೀಸ ಠಾಣೆಯಲ್ಲಿ ಹೊಸ ಪೊಲೀಸ ಅಧಿಕಾರಿಯನ್ನು ನೇಮಿಸಿದಾಗ ಅವರಿಗೆ ಬಾಬಾರವರ ದರಬಾರಿನಲ್ಲಿ ಹಾಜರರಿರಬೇಕಾಗುತ್ತದೆ. ಆನಂತರವೇ ಅವರು ಠಾಣೆಯ ಜವಾಬ್ದಾರಿಯನ್ನು ವಹಿಸುತ್ತಾರೆ.

(ಸೌಜನ್ಯ – Bharat Adda India)

ಸಂಪಾದಕೀಯ ನಿಲುವು

ಹಿಂದೂಗಳ ಹೃದಯದಲ್ಲಿರುವ ಅದ್ವಿತೀಯ ಶ್ರದ್ಧೆಯೇ ಹಿಂದೂ ಧರ್ಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಆಧಾರವಾಗಿದೆ. ಈ ಉದಾಹರಣೆಯು ಇದರ ಪ್ರತೀಕ !