ಅಯೋಧ್ಯಯಲ್ಲಿಯ ಶ್ರೀರಾಮಮಂದಿರದ ಅಡಿಪಾಯ ಕೆಲಸ ಅಂತಿಮ ಹಂತದಲ್ಲಿ !

ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಶ್ರೀರಾಮಜನ್ಮಭೂಮಿಯ ಮೇಲೆ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮಮಂದಿರದ ಕೆಲವು ಛಾಯಚಿತ್ರಗಳನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸಾದ ಪ್ರಧಾನ ಕಾರ್ಯದರ್ಶಿ ಶ್ರೀ ಚಂಪತ ರಾಯರವರು ಪ್ರಸಾರ ಮಾಡಿದ್ದಾರೆ. ಇದರಲ್ಲಿ ದೇವಸ್ಥಾನದ ನೆಲ ಅಂತಸ್ತಿನ ಗರ್ಭಗುಡಿಯ ಮುಖ್ಯ ಬಾಗಿಲಿನ ಛಾಯಚಿತ್ರವಿದೆ. ಈ ಬಾಗಿಲು ೧೫ ಅಡಿ ಎತ್ತರ ಹಾಗೂ ೧೦ ಅಡಿ ಅಗಲವಿದೆ. ಬಾಗಿಲಿನ ಕೆಳಗೆ ಕಮಲದ ಹೂವು. ಮಧ್ಯದಲ್ಲಿ ಸೊಂಡಿಲು ಏರಿರಿಸಿದ ಆನೆ ಮತ್ತು ಮೇಲಿನ ಭಾಗದಲ್ಲಿ ಸ್ವಾಗತ ಕೋರುವ ಮಹಿಳೆಯ ಕೆತ್ತನೆಯನ್ನು ಕೆತ್ತಲಾಗಿದೆ. ೩ ಅಂತಸ್ತಿನ ಶ್ರೀರಾಮಮಂದಿರದ ನೆಲ ಅಂತಸ್ತು ಪೂರ್ಣಗೊಂಡಿದೆ. ನೆಲ ಅಂತಸ್ತು ೧೭೦ ಕಂಬಗಳ ಮೇಲೆ ನಿಂತಿದೆ.ಈ ಅಂತಸ್ತಿನ ಎಲ್ಲಾ ೧೪ ಬಾಗಿಲುಗಳು ಸಿದ್ದಗೊಂಡಿವೆ. ನ್ಯಾಸದ ಹೇಳಿಕೆ ಪ್ರಕಾರ ಎಲ್ಲಾ ಕಂಭಗಳ ಮೇಲೆ ಮೂರ್ತಿಯ ವಿಗ್ರಹ ಕೆತ್ತಲಾಗುತ್ತಿದೆ. ನೆಲ ಅಂತಸ್ತಿನ ಎಲ್ಲಾ ಕೆಲಸಗಳನ್ನು ನವೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.

ಮೊದಲ ಮಹಡಿಯ ಕೆಲಸ ಶೇ ೫೦ ರಷ್ಟು ಪೂರ್ಣ

ನ್ಯಾಸದ ಪ್ರಕಾರ ಮೊದಲ ಮಹಡಿಯ ಕೆಲಸ ಶೇ. ೫೦ ರಷ್ಟು ಪೂರ್ಣಗೊಂಡಿದೆ. ಡಿಸೆಂಬರ್ ವೇಳೆಗೆ ಈ ಮಹಡಿ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಿದೆ. ದೇವಸ್ತಾನದ ಬಾಗಿಲಿಗೆ ಬೇಕಾಗುವ ಕಟ್ಟಿಗೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಿಂದ ತರಲಾಗಿದೆ.