ಔರಂಗಾಬಾದ ಜಿಲ್ಲೆಗೆ ‘ಛತ್ರಪತಿ ಸಂಭಾಜಿ ನಗರ’ ಹಾಗೂ ಉಸ್ಮಾನಾಬಾದ ಜಿಲ್ಲೆ ‘ಧಾರಾಶಿವ’ ಎಂದು ನಾಮಕರಣ !

ಸರಕಾರದಿಂದ ರಾಜಪತ್ರದ ಪ್ರಕಾಶನ !

ಛತ್ರಪತಿ ಸಂಭಾಜಿನಗರ – ‘ಛತ್ರಪತಿ ಶಿವಾಜಿ ಮಹಾರಾಜರಿಗೆ ಜಯವಾಗಲಿ’, ‘ಛತ್ರಪತಿ ಸಂಭಾಜಿ ಮಹಾರಾಜರಿಗೆ ಜಯವಾಗಲಿ’ ಎಂದು ಘೋಷಣೆಯನ್ನು ಮೊಳಗಿಸುತ್ತ ‘ಛತ್ರಪತಿ ಸಂಭಾಜಿನಗರ’ ಕಂದಾಯ ಇಲಾಖೆ ಮತ್ತು ‘ಧಾರಾಶಿವ’ ಜಿಲ್ಲೆಯ ನಾಮಕರಣ ಫಲಕಗಳ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ ಮತ್ತು ಉಪ ಮುಖ್ಯಮಂತ್ರಿ ಅಜಿತ ಪವಾರ ಇವರ ಹಸ್ತದಿಂದ ಸಪ್ಟೆಂಬರ ೧೬ ರಂದು ಉದ್ಘಾಟನೆ ಮಾಡಲಾಯಿತು. ‘ಔರಂಗಾಬಾದ’ ನಗರದ ಹೆಸರನ್ನು ಬದಲಾಯಿಸಿದನಂತರ ಈಗ ಔರಂಗಾಬಾದ ಜಿಲ್ಲೆಯ ಹೆಸರನ್ನೂ ‘ಛತ್ರಪತಿ ಸಂಭಾಜಿನಗರ’ ಜಿಲ್ಲೆ ಎಂದು ಮಾಡಲಾಗಿದೆ. ‘ಮರಾಠವಾಡಾ ಮುಕ್ತಿಸಂಗ್ರಾಮ್‌ ದಿನ’ ದ ಹಿಂದಿನ ದಿನ, ಹಾಗೆಯೇ ಛತ್ರಪತಿ ಸಂಭಾಜಿನಗರದಲ್ಲಿ ಸಚಿವ ಸಂಪುಟದ ಸಭೆಯ ಮೊದಲು ರಾಜ್ಯ ಸರಕಾರದ ವತಿಯಿಂದ ರಾಜಪತ್ರದ ಪ್ರಕಾಶನ ಮಾಡಲಾಗಿದೆ. ‘ಉಸ್ಮಾನಾಬಾದ’ ನಗರದ ನಂತರ ಈಗ ಉಸ್ಮಾನಾಬಾದ ಜಿಲ್ಲೆಯ ಹೆಸರು ‘ಧಾರಾಶಿವ’ ಮಾಡಲಾಗಿದೆ. ಕಳೆದ ಅನೇಕ ವರ್ಷಗಳಿಂದ ಈ ಜಿಲ್ಲೆಗಳ ನಾಮಾತಂರ ಮಾಡುವ ಬೇಡಿಕೆ ಮಾಡಲಾಗುತ್ತಿತ್ತು. ಅದಕ್ಕಾಗಿ ಶಿವಸೇನೆ ಮತ್ತು ಭಾಜಪದಿಂದ ಹಲವಾರುಬಾರಿ ಪ್ರತಿಭಟನೆಗಳನ್ನು ಸಹ ಮಾಡಲಾಗಿತ್ತು. ಅನಂತರದ ಕಾಲಾವಧಿಯಲ್ಲಿ ಮನಸೆ ಕೂಡ ಆಂದೋಲನ ಮಾಡಿತ್ತು; ಆದರೆ ಎಮ್.ಐ.ಎಮ್‌. ಮತ್ತು ಕಾಂಗ್ರೆಸ್‌ ಇವರ ಕೆಲವು ಮುಖಂಡರು ಈ ಹೆಸರು ಬದಲಾವಣೆಗೆ ವಿರೋಧಿಸಿದ್ದರು.

(ಸೌಜನ್ಯ – News Hawkers)

ಆನಂತರ ಮುಖ್ಯಮಂತ್ರಿ ಏಕನಾಥ ಶಿಂದೆಯವರ ಸಚಿವ ಸಂಪುಟವು ಈ ನಗರದ ಹೆಸರನ್ನು ಬದಲಾಯಿಸುವ ನಿರ್ಣಯ ಕೈಗೊಂಡಿತ್ತು. ವಾಸ್ತವದಲ್ಲಿ ಈ ನಾಮಾಂತರದ ವಿರುದ್ಧ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಆಲಿಕೆ ನಡೆಯುತ್ತಿತ್ತು. ಆ ಸಮಯಕ್ಕೆ ರಾಜ್ಯ ಸರಕಾರದ ವತಿಯಿಂದ ಆಕ್ಷೇಪಣೆಗಳ ಪರಿಶೀಲನೆ ಆಗಿಲ್ಲ ಎಂದು ಹೇಳಲಾಗಿತ್ತು. ಆದ್ದರಿಂದ ಇಷ್ಟು ಬೇಗನೆ ರಾಜ್ಯ ಸರಕಾರ ಹೀಗೆ ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಅನಿಸಿತ್ತು; ಆದರೆ ಈಗ ರಾಜ್ಯ ಸರಕಾರದ ವತಿಯಿಂದ ರಾಜಪತ್ರದ ಪ್ರಕಾಶನ ಮಾಡಲಾಗಿದೆ.

ಈ ಹಿಂದೆ ಔರಂಗಾಬಾದ ನಗರದ ಹೆಸರು ‘ಛತ್ರಪತಿ ಸಂಭಾಜಿನಗರ’ ಮತ್ತು ಉಸ್ಮಾನಾಬಾದ ನಗರದ ಹೆಸರು ‘ಧಾರಾಶಿವ’ ಎಂದು ಮಾಡುವುದಾಗಿ ನಿರ್ಧರಿಸಲಾಗಿತ್ತು; ಆದರೆ ಇದರಲ್ಲಿ ಔರಂಗಾಬಾದ ವಿಭಾಗ, ಜಿಲ್ಲೆ, ಉಪ ವಿಭಾಗ, ತಾಲೂಕು ಮತ್ತು ಗ್ರಾಮ ಹಾಗೆಯೇ ಉಸ್ಮಾನಾಬಾದ ಜಿಲ್ಲೆ, ಉಪವಿಭಾಗ, ತಾಲೂಕು ಮತ್ತು ಗ್ರಾಮ ಇವುಗಳ ಹೆಸರುಗಳನ್ನು ಬದಲಾಯಿಸಿರಲಿಲ್ಲ. ಅವುಗಳನ್ನು ಈಗ ರಾಜಪತ್ರದ ಪ್ರಕಾಶನ ಮಾಡಿ ಬದಲಾಯಿಸಲಾಗಿದೆ.