ಕಾನಪುರ (ಉತ್ತರ ಪ್ರದೇಶ) ಇಲ್ಲಿ ಚರ್ಚ್ ದಿಂದ ಅಪ್ರಾಪ್ತ ಹಿಂದೂ ಹುಡುಗನಿಗೆ ಮತಾಂತರಕ್ಕಾಗಿ ಆಮಿಷ !

ಸಂಪೂರ್ಣ ಕುಟುಂಬ ಮತಾಂತರವಾದರೆ ಒಂದು ಮನೆ ನೀಡುವ ಆಮಿಷ !

ಕಾನಪುರ (ಉತ್ತರಪ್ರದೇಶ) – ಇಲ್ಲಿಯ ಒಂದು ಚರ್ಚನಲ್ಲಿ ಅಪ್ರಾಪ್ತ ಹಿಂದೂ ಹುಡುಗನ ಮತಾಂತರ ಮಾಡಲು ಪ್ರಯತ್ನಿಸಿದ ಆರೋಪದ ನಂತರ ಬಜರಂಗದಳ ಚರ್ಚ್ ಹೊರಗೆ ಪ್ರತಿಭಟನೆ ನಡೆಸಿತು. ಈ ಸಮಯದಲ್ಲಿ ಪೊಲೀಸರು ಅಲ್ಲಿಗೆ ಬಂದು ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಚರ್ಚ್ ಮತ್ತು ಬಜರಂಗದಳ ಪರಸ್ಪರರ ವಿರೋಧದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ಸಪ್ಟೆಂಬರ್ ೧೦ ರಂದು ನಡೆದಿದೆ. ಸಂತ್ರಸ್ತ ಅಪ್ರಾಪ್ತ ಹುಡುಗ, ಕೆಲವು ದಿನಗಳ ಹಿಂದೆ ಚರ್ಚ್ ನ ಪಾದ್ರಿ ಆನಂದ ಡೇನಿಯಲ್ ಇವನು ಅವನನ್ನು ಮತಾಂತರಗೊಳಿಸುವುದಕ್ಕಾಗಿ ೫೦ ಸಾವಿರ ರೂಪಾಯಿ ಆಮಿಷ ನೀಡಿದ್ದನು. ಹಾಗೂ ‘ಸಂಪೂರ್ಣ ಕುಟುಂಬ ಮತಂತರಗೊಂಡರೆ ಒಂದು ಮನೆ ನೀಡುವೆ’ ಎಂದು ಹೇಳಿದ್ದನು. ಹುಡುಗನು ಮತಾಂತರಕ್ಕಾಗಿ ನಿರಾಕರಿಸಿದ ನಂತರ ಕೂಡ ಅವನ ಮೇಲೆ ಡೇನಿಯಲ್ ಒತ್ತಡ ಹೇರುತ್ತಿದ್ದನು.

ಸಂಪಾದಕೀಯ ನಿಲುವು

ಮತಾಂತರದ ವಿರೋಧದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಶನರಿಗಳು ಚಿಗುರುತ್ತಿವೆ, ಇದು ಇಲ್ಲಿಯವರೆಗೆ ಮುಂದುವರೆದಿದೆ. ಇದಕ್ಕಾಗಿ ಭಾಜಪ ಸರಕಾರದಿಂದ ಕಠಿಣ ಕಾನೂನು ರೂಪಿಸುವುದು ಆವಶ್ಯಕವಾಗಿದೆ, ಎಂದು ಹಿಂದೂಗಳ ಆಗ್ರಹವಾಗಿದೆ !