ಪಂಜಾಬ್ ನ ಅಟಾರಿ ಗಡಿಯಲ್ಲಿ ಭಾರತವು ಪಾಕಿಸ್ತಾನದ ರಾಷ್ಟ್ರ ಧ್ವಜದ ಕಂಬಕ್ಕಿಂತ 18 ಅಡಿ ಎತ್ತರದ ಕಂಬವನ್ನು ನಿಲ್ಲಿಸಿತು !

ಅಮೃತಸರ (ಪಂಜಾಬ್) – ಭಾರತವು ಅಟಾರಿ ಗಡಿಯಲ್ಲಿ ಇರಿಸಿದ ರಾಷ್ಟ್ರಧ್ವಜದ ಕಂಬದ ಎತ್ತರವನ್ನು ಪಕ್ಕದ ದೇಶ ಪಾಕಿಸ್ತಾನದ ರಾಷ್ಟ್ರಧ್ವಜದ ಕಂಬಕ್ಕಿಂತಲೂ 18 ಅಡಿಗಳಷ್ಟು ಹೆಚ್ಚಿಸಿದೆ. ಸದ್ಯ ಭಾರತದ ತ್ರಿವರ್ಣ ಧ್ವಜದ ಎತ್ತರ 360 ಅಡಿಗಳಾಗಿತ್ತು, ಪಾಕಿಸ್ತಾನ ಧ್ವಜದ ಕಂಬದ ಎತ್ತರವನ್ನು 418 ಅಡಿಗಳಲ್ಲಿ ಇರಿಸಲಾಗಿದೆ. ಈ ಧ್ವಜಸ್ತಂಭದ ಉದ್ಘಾಟನೆ ಕೆಲವೇ ದಿನಗಳಲ್ಲಿ ಆಗಲಿತ್ತು; ಆದರೆ ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿದೆ; ಆದರೆ ಶೀಘ್ರದಲ್ಲೇ ಈ 418 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡುವುದನ್ನು ಕಾಣಬಹುದು. ಈ ಧ್ವಜ ಸ್ತಂಭವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಅದರ ಮೇಲೆ ಹಾರುವ ರಾಷ್ಟ್ರಧ್ವಜ 90 ಕೆ.ಜಿ. ಇರುವುದು ಇದರ ಉದ್ದ ಮತ್ತು ಅಗಲ 120×80 ಅಡಿ ಇದೆ.

(ಸೌಜನ್ಯ – Janta Ki Awaz News Channel)

ಪಾಕಿಸ್ತಾನದ ಧ್ವಜ ಸ್ತಂಭದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಎಂದು ಹೇಳಲಾಗುತ್ತದೆ, ಇದರಿಂದ ಪಾಕಿಸ್ತಾನವು ಭಾರತದ ಗಡಿಯೊಳಗೆ ಹಲವಾರು ಕಿಲೋಮೀಟರ್‌ಗಳವರೆಗೆ ಗಮನವಿಡಬಹುದು.