ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ೩೦ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ

ಲಕ್ಷ್ಮಣಪುರಿ – ಸಮಾಜವಾದಿ ಪಕ್ಷದ ನೇತಾರ ಆಝಮ್ ಖಾನ್ ಇವರ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ೩೦ ಕ್ಕಿಂತಲೂ ಹೆಚ್ಚು ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ಮಾಡಿತು. ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯು ಆಝಮ್ ಖಾನ್ ಮತ್ತು ಅವರ ಕುಟುಂಬದವರಿಂದ ನಡೆಸಲಾಗುವ ಕೆಲವು ವಿಶ್ವಸ್ಥ ಮಂಡಳಗಳಿಗೆ(ಟ್ರಸ್ಟ್ ಗಳಿಗೆ) ಸಂಬಂಧಿಸಿವೆ. ಈ ವಿಶ್ವಸ್ಥ ಮಂಡಳಗಳು(ಟ್ರಸ್ಟ್‌ಗಳು) ತೆರಿಗೆ ವಂಚನೆ ಆರೋಪವನ್ನು ಎದುರಿಸುತ್ತಿವೆ. ಆಝಮ್ ಖಾನ್ ವಿರುದ್ಧ ಅನೇಕ ಖಟ್ಲೆಗಳು ಬಾಕಿ ಇವೆ. ೨೦೧೯ ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಧಾಮೋರಾದಲ್ಲಿ ದ್ವೇಷದ ಭಾಷಣ ಮಾಡಿದ ಆರೋಪ ಇದೆ. ಈ ಪ್ರಕರಣದಲ್ಲಿ ರಾಮಪುರದ ನ್ಯಾಯಾಲಯವು ಅವರಿಗೆ ೨ ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. (ಇಂತಹ ಅಪರಾಧಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಶಾಶ್ವತವಾಗಿ ನಿಷೇಧಿಸಬೇಕು ! – ಸಂಪಾದಕರು)