‘ಮೇಕ ಇನ್ ಇಂಡಿಯಾ’ಗೆ ಪ್ರೋತ್ಸಾಹ ನೀಡಲು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ! – ರಾಷ್ಟ್ರಾಧ್ಯಕ್ಷ ಪುತಿನ್

ಪ್ರಧಾನಮಂತ್ರಿ ಮೋದಿ ಅವರನ್ನು ಶ್ಲಾಘಿಸಿದ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ !

ಮಾಸ್ಕೊ (ರಷ್ಯಾ) – ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ ಪುತಿನ ಇವರು ಭಾರತದ ಪ್ರಧಾನಿ ನರೇಂದ್ರ ಮೋದಿ ಇವರನ್ನು ಶ್ಲಾಘಿಸಿದರು. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಪುತಿನ ಮಾತು ಮುಂದುವರೆಸಿ,

೧. ಹಿಂದೆ ನಮ್ಮ ದೇಶದಲ್ಲಿ ಕಾರು ತಯಾರಿಸುತ್ತಿರಲಿಲ್ಲ; ಆದರೆ ಈಗ ನಾವು ಅದನ್ನು ತಯಾರಿಸುತ್ತೇವೆ. ನಿಜವೆಂದರೆ ಅವು ‘ಆಡಿ’ ಮತ್ತು ‘ಮರ್ಸಿಡಿಜ್’ ಈ ವಾಹನಗಳಕ್ಕಿಂತಲೂ ಕಡಿಮೆ ಗುಣಮಟ್ಟದಾಗಿದೆ; ಆದರೆ ಅದು ಸಮಸ್ಯೆ ಅಲ್ಲ. ನಾವು ರಷ್ಯಿನ್ ವಾಹನಗಳನ್ನು ಉಪಯೋಗಿಸಬೇಕು.

೨. ನಾವು ನಮ್ಮ ಮಿತ್ರ ದೇಶ ಭಾರತದ ಅನುಕರಣೆ ಮಾಡಬೇಕು. ಅವರು ದೇಶದಲ್ಲಿ ವಾಹನಗಳನ್ನು ತಯಾರಿಸುತ್ತಾರೆ ಮತ್ತು ಉಪಯೋಗಿಸುತ್ತಾರೆ. ಯಾವ ವರ್ಗದ ಅಧಿಕಾರಿ ಯಾವ ವಾಹನಗಳನ್ನು ಉಪಯೋಗಿಸಬೇಕು ಇದನ್ನು ನಾವು ನಿರ್ಧರಿಸಬೇಕು. ಇದರಿಂದ ದೇಶದ ಅಂತರ್ಗತ ವಾಹನ ಉಪಯೋಗಿಸಬೇಕು.

ಅಂತರಾಷ್ಟ್ರೀಯ ಆರ್ಥಿಕ ಹೆದ್ದಾರಿಯಿಂದ ರಷ್ಯಾಗೆ ಲಾಭವಾಗುವುದು ! – ಪುತಿನ

ಅಮೇರಿಕಾಗೆ ಇದರಿಂದ ಹೆಚ್ಚು ಲಾಭವಾಗಲಿಕ್ಕಿಲ್ಲ ಎಂದು ದಾವೆ !

‘ಜಿ-20’ ಶೃಂಗ ಸಭೆಯಲ್ಲಿ ಭಾರತ, ಅಮೇರಿಕಾ, ಸೌದಿ ಅರೇಬಿಯಾ, ಯುರೋಪಿಯನ್ ಯೂನಿಯನ್, ಮುಂತಾದವರಿಂದ ಅಂತರಾಷ್ಟ್ರೀಯ ಆರ್ಥಿಕ ಹೆದ್ದಾರಿ ನಿರ್ಮಾಣದ ನಿರ್ಧಾರ ಕೈಗೊಳ್ಳಲಾಯಿತು. ಇದರ ಬಗ್ಗೆ ಕೂಡ ಪುತಿನ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಪುತಿನ, ಪ್ರಾಸ್ತಾವಿಕ ಭಾರತ ಮಧ್ಯ ಪೂರ್ವ ಯುರೋಪ್ ಅಮೆರಿಕ ಈ ಆರ್ಥಿಕ ಹೆದ್ದಾರಿಯಿಂದ ರಷ್ಯಾಗೆ ಯಾವುದೇ ನಷ್ಟವಾಗುವುದಿಲ್ಲ, ಆದರೆ ಲಾಭವೇ ಆಗುವುದು. ಈ ಹೆದ್ದಾರಿಯಿಂದ ರಷ್ಯಾದ ಸುಖ ಸೌಲಭ್ಯಗಳು ಅಭಿರ್ವದ್ಧಿಗೊಳ್ಳಲು ಸಹಾಯವಾಗುವುದು. ಈ ಯೋಜನೆಯ ಚರ್ಚೆ ಬಹಳ ಸಮಯ ನಡೆಯಿತು. ಅಮೇರಿಕಾ ಕೊನೆಯ ಕ್ಷಣದಲ್ಲಿ ಈ ಒಪ್ಪಂದದಲ್ಲಿ ಪಾಲ್ಗೊಂಡಿತು; ಆದರೆ ನನ್ನ ಅಭಿಪ್ರಾಯದ ಪ್ರಕಾರ ಅಮೆರಿಕಾಗೆ ಈ ಯೋಜನೆಯಿಂದ ಹೆಚ್ಚೆನು ಲಾಭವಿಲ್ಲ ಎಂದು ಹೇಳಿದರು.