ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಧಾರನ ಭೋಜಶಾಲಾದಲ್ಲಿ ರಾತ್ರಿಯ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ದೇವತೆಯ ಮೂರ್ತಿಯನ್ನು ಸ್ಥಾಪಿಸಿದರು. ನಂತರ ಪೊಲೀಸರು ಆ ಮೂರ್ತಿಯನ್ನು ಅಲ್ಲಿಂದ ತೆಗೆದರು. ಇದು 11 ನೇ ಶತಮಾನದ ಮೂರ್ತಿಯಾಗಿತ್ತು. ಮೂರ್ತಿಯನ್ನು ಇಟ್ಟಿರುವ ಘಟನೆಯ ನಂತರ ಭೋಜಶಾಲಾ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆಯು ಈ ವಾಸ್ತು ಸಂರಕ್ಷಿತಪ್ರದೇಶ ಎಂದು ಘೋಷಿಸಿದೆ.
ಭೋಜಶಾಲಾವನ್ನು ರಾಜ ಭೋಜನು ನಿರ್ಮಿಸಿದ್ದನು. ಇದು ಮೊಘಲರ ಕಾಲದಲ್ಲಿ ಆಕ್ರಮಣಕ್ಕೆ ಒಳಗಾಗಿ, ಅದನ್ನು ಮುಸಲ್ಮಾನರು ವಶ ಪಡಿಸಿಕೊಂಡರು. ಅಂದಿನಿಂದ ಅದು ಅವರ ವಶದಲ್ಲಿದೆ. ಈ ಭೋಜಶಾಲಾ ‘ಶ್ರೀ ವಾಗ್ದೇವಿಯ (ಶ್ರೀ ಸರಸ್ವತಿ ದೇವಿ) ದೇವಾಲಯವೆಂದು’ ಹಿಂದೂಗಳು ನಂಬುತ್ತಾರೆ, ಆದರೆ ಮುಸ್ಲಿಮರು ಇದನ್ನು ಕಮಾಲ್ ಮೌಲಾ ಮಸೀದಿ ಎಂದು ಪರಿಗಣಿಸುತ್ತಾರೆ. ಹಿಂದೂಗಳು ಭೋಜಶಾಲಾವನ್ನು ಅತಿಕ್ರಮಣ ಮುಕ್ತಗೊಳಿಸಲು ಹಲವು ವರ್ಷಗಳಿಂದ ಆಂದೋಲನ ನಡೆಸುತ್ತಿದ್ದಾರೆ. ಅದರಲ್ಲಿಯೇ ಈ ಘಟನೆ ನಡೆದಿದೆಯೆಂದು ಹೇಳಲಾಗುತ್ತಿದೆ. ಈ ಭೋಜಶಾಲಾದಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಯಿತ್ತು. ಅದನ್ನು ವಿದೇಶಕ್ಕೆ ಒಯ್ಯಲಾಗಿದೆ. ಹಿಂದೂಗಳು ಈ ಮೂರ್ತಿಯನ್ನು ಮರಳಿ ತರುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
मध्यप्रदेश
▶️ भोजशाला आज के लिए की गई बंद।
▶️ मां वाग्देवी की प्रतिमा रखने के विवाद के बाद फैसला#Dhar | #MadhyaPradesh | #MPNews pic.twitter.com/a3KOoa2gV2
— IBC24 News (@IBC24News) September 10, 2023
ಸಂಪಾದಕರ ನಿಲುವು* ಭೋಜಶಾಲಾ ಶ್ರೀ ಸರಸ್ವತಿ ದೇವಿಯ ಪುರಾತನ ದೇವಸ್ಥಾನವಾಗಿರುವುದರಿಂದ ಅದನ್ನು ಹಿಂದೂಗಳ ವಶಕ್ಕೆ ಒಪ್ಪಿಸುವುದು ಆವಶ್ಯಕವಾಗಿದೆ. ಅಲ್ಲಿರುವ ಮುಸ್ಲಿಮರ ಮಸೀದಿಯನ್ನು ತೆಗೆದುಹಾಕಲು ಕೇಂದ್ರ ಮತ್ತು ರಾಜ್ಯದ ಭಾಜಪ ಸರಕಾರ ಪ್ರಯತ್ನಿಸಬೇಕೆಂದು, ಹಿಂದೂಗಳಿಗೆ ಅನಿಸುತ್ತದೆ ! |