ಜಿ-20 ಶೃಂಗಸಭೆಯ ಸಮಾರೋಪ
ನವ ದೆಹಲಿ – ಇಲ್ಲಿನ ಪ್ರಗತಿ ಮೈದಾನದಲ್ಲಿ ನಿರ್ಮಿಸಲಾಗಿರುವ ‘ಭಾರತ್ ಮಂಡಪಮ್’ ಸಭಾಂಗಣದಲ್ಲಿ ನಡೆದ 2 ದಿನಗಳ ಜಿ-20 ಶೃಂಗಸಭೆಯು ಸೆಪ್ಟೆಂಬರ್ 10 ರಂದು ಮುಕ್ತಾಯಗೊಂಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಿದವರಿಗೆ ಮತ್ತು ಈ ಸಭೆಯನ್ನು ನೆರವೇರಿಸಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಈ ಸಮಯದಲ್ಲಿ ಅವರು ಜಿ-20ಯ ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಅಧ್ಯಕ್ಷ ಲುಲಾ ದಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು. ಈ ಹಿಂದೆ ಇಲ್ಲಿ ‘ವನ್ ಫ್ಯೂಚರ್’(ಒಂದು ಭವಿಷ್ಯ) ಎಂಬ ಅಧಿವೇಶನ ನಡೆದಿತ್ತು. ಇದಕ್ಕೂ ಮುನ್ನ ಬೆಳಗ್ಗೆ ಜಿ-20 ಯಲ್ಲಿ ಭಾಗವಹಿಸುವ ರಾಷ್ಟ್ರಗಳ ಮುಖ್ಯಸ್ಥರು ರಾಜ್‌ಘಾಟ್‌ಗೆ ತೆರಳಿ ಮ. ಗಾಂಧಿ ಸಮಾಧಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಎಲ್ಲ ಮುಖಂಡರಿಗೆ ಖಾದಿಯ ಶಾಲು ಹೊದಿಸಿ ಸ್ವಾಗತಿಸಿದರು.
G20: PM मोदी ने ब्राजील को जी20 की अध्यक्षता सौंपी; संयुक्त राष्ट्र जैसे वैश्विक निकायों में सुधार की मांग की#G20SummitDelhi #G20India2023 #G20 #PMModi #Brazil https://t.co/NBqOgHqBS2
— Amar Ujala (@AmarUjalaNews) September 10, 2023