ಸಲಿಂಗಕಾಮಿ ಸಂಬಂಧ ಹೊಂದಿದ್ದ ಮುಸಲ್ಮಾನ್ ಶಿಕ್ಷಕನನ್ನು ಅಪ್ರಾಪ್ತ ವಿದ್ಯಾರ್ಥಿಯಿಂದ ಕತ್ತು ಸೀಳಿ ಹತ್ಯೆ!

ನವ ದೆಹಲಿ – ಇಲ್ಲಿನ ಓರ್ವ ಅಪ್ರಾಪ್ತ ವಯಸ್ಸಿನ ಹುಡುಗನು ಕಲಿಕೆಯ ತರಗತಿಯಲ್ಲಿ ಕಲಿಸುತ್ತಿದ್ದ ಮಹಮದ್ ವಾಸಿಮ್ ಎಂಬ ಶಿಕ್ಷಕನ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ. 16 ವರ್ಷದ ಹುಡುಗನು ಪೊಲೀಸರಿಗೆ, ‘ಮಹಮ್ಮದ್ ವಾಸಿಮ್ ಸಲಿಂಗಕಾಮಿಯಾಗಿದ್ದ, ಆತ ಎರಡು ತಿಂಗಳಿಂದ ನನ್ನ ಮೇಲೆ ಸತತ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು ಹಾಗೂ ಅದರ ವಿಡಿಯೋ ಮಾಡಿ ನನ್ನನ್ನು ‘ಬ್ಲಾಕ್ ಮೇಲ್’ ಮಾಡುತ್ತಿದ್ದನು. ಅವನ ಲೈಂಗಿಕ ಕಿರುಕಳದಿಂದ ನನಗೆ ಜಿಗುಪ್ಸೆಯಾಗಿತ್ತು ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಮದರಸಾಗಳಲ್ಲಿಯೂ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಈ ಹಿಂದೆಯೂ ಬೆಳಕಿಗೆ ಬಂದಿವೆ. ಸರಕಾರವು ‘ಇಂತಹ ಘಟನೆಗಳು ನಡೆಯುತ್ತಿವೆಯೇ ?’, ಎಂದು ಪೊಲೀಸರ ಮೂಲಕ ಮೊದಲೇ ತನಿಖೆ ನಡೆಸಿದರೆ ಇಂತಹ ಘಟನೆಗಳನ್ನು ಆದಷ್ಟು ತಪ್ಪಿಸಬಹುದು.