ಉತ್ತರಾಖಂಡದಲ್ಲಿ ಇಬ್ಬರು ಮುಸಲ್ಮಾನ ಸಹೋದರರಿಂದ ಹಿಂದೂ ಧರ್ಮ ಸ್ವೀಕಾರ !

ಡೆಹರಾಡೂನ (ಉತ್ತರಪ್ರದೇಶ) – ಉತ್ತರಾಖಂಡದಲ್ಲಿಯ ಪೌಡಿ ಜಿಲ್ಲೆಯಲ್ಲಿ ಅರಮಾನ್ ಮತ್ತು ಇಸ್ಮಾಯಿಲ್ ಈ ಇಬ್ಬರು ಮುಸಲ್ಮಾನ ಬಂಧುಗಳು ’ಘರ್ ವಾಪ್ಸಿ’ ಆದರು. ಸೆಪ್ಟಂಬರ್ ೩ ರಂದು ಇಬ್ಬರೂ ಆರ್ಯಸಮಾಜದ ದೇವಸ್ಥಾನದಲ್ಲಿ ವ್ಯೆದಿಕ ಮಂತ್ರೊಚ್ಛಾರದ ಮೂಲಕ ಹಿಂದೂ ಧರ್ಮ ಸ್ವೀಕರಿಸಿದರು. ಅರಮಾನ್ ಮತ್ತು ಇಸ್ಮಾಯಿಲ್ ಅವರ ತಾಯಿ ಹಿಂದೂ ಆಗಿದ್ದರು. ‘ನನ್ನ ಇಬ್ಬರು ಮಕ್ಕಳನ್ನು ಎಂದಿಗೂ ಮಸೀದಿಗೆ ಕಳುಹಿಸಿರಲಿಲ್ಲ’, ಎಂದು ಹೇಳಿದರು. ‘ನಾವು ಹುಟ್ಟಿನಿಂದಲೇ ಮನಸ್ಸಿನಿಂದ ಹಿಂದೂಗಳಾಗಿದ್ದೇವೆ. ನನ್ನ ಇಬ್ಬರು ಸಹೋದರಿಯರು ಹಿಂದು ಹುಡುಗರನ್ನು ಮದುವೆಯಾಗಿದ್ದಾರೆ’, ಎಂದು ಅರಮಾನ್ ಹೇಳಿದ್ದಾರೆ. ಈ ಸಂಧರ್ಭದಲ್ಲಿ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಬ್ಬರು ಸಹೋದರರು ಸನಾತನ ಧರ್ಮ ಪ್ರವೇಶಿಸಿದ ನಂತರ ಆನಂದ ವ್ಯಕ್ತಪಡಿಸಿದರು. ಅರಮಾನ್ ಮತ್ತು ಇಸ್ಮಾಯಿಲ್ ಇವರು ಜಹರಿಖಾಲ್ ಪ್ರದೇಶದಲ್ಲಿ ಬಟ್ಟೆಯ ಅಂಗಡಿ ಇಟ್ಟುಕೊಂಡಿದ್ದಾರೆ. ಅರಮಾನ್, ‘ನನ್ನ ತಾಯಿಯ ಹೆಸರು ಸೀತಾದೇವಿಯಾಗಿದ್ದೂ ಅವರು ೩೦ ವರ್ಷಗಳ ಹಿಂದೆ ನನ್ನ ತಂದೆ ಶಮ್ಮಿ ಅವರನ್ನು ವಿವಾಹವಾದರು. ಮದುವೆಯ ನಂತರ ಅವರಿಗೆ ೨ ಗಂಡು ಮತ್ತು ೨ ಹೆಣ್ಣು ಮಕ್ಕಳು ಆದರು. ಆನಂತರ ನನ್ನ ತಂದೆ ತೀರಿಕೊಂಡರು, ನನ್ನ ತಾಯಿ ಬಟ್ಟೆ ವ್ಯಪಾರ ಮಾಡುತ್ತಾ ನಮ್ಮನ್ನು ಸಾಕಿದರು.’ ಎಂದು ಹೇಳಿದರು.