ಉತ್ತರ ಪ್ರದೇಶದ 8 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ದಾಳಿ

ನಕ್ಸಲೀಯರಿಗೆ ನಿಧಿ ಒದಗಿಸಿದ ಪ್ರಕರಣ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ನಕ್ಸಲೀಯರಿಗೆ ನಿಧಿ ಒದಗಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್‌.ಐ.ಎ) 8 ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿದೆ. ಅಝಮಗಢ, ದೇವರಿಯಾ, ವಾರಣಾಸಿ, ಪ್ರಯಾಗರಾಜ ಮತ್ತು ಚಂದೋಲಿಯಲ್ಲಿ ಎನ್‌.ಐ.ಎ.ಯು ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ರಾಷ್ಟ್ರೀಯ ತನಿಖಾ ದಳವು ಮಂಗಳವಾರ ವಾರಣಾಸಿಯ ಮಹಾಮಾನಪುರಿ ಓಣಿಯಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದೆ. ಮನೆಯಲ್ಲಿದ್ದ ವಿದ್ಯಾರ್ಥಿ ಸಂಘದ ಇಬ್ಬರು ಹುಡುಗಿಯರನ್ನು ಎನ್‌.ಐ.ಎ ತಂಡವು ವಿಚಾರಣೆಗೆ ಒಳಪಡಿಸಿದೆ. ಈ ತಂಡವು ದೆವರಿಯಾ ನಗರದ ಉಮಾನಗರ ಪ್ರದೇಶದ ಮೇಲೂ ದಾಳಿ ನಡೆಸಿದೆ. ಜನವಾದಿ ಕ್ರಾಂತಿ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಮನಾಥ್ ಚೌಹಾಣ್ ಅವರ ಮನೆ ಮುಂದೆ ಬೃಹತ್ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲಿವು

ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಭಯವಿಲ್ಲದೆ ಇಂತಹ ದೇಶವಿರೋಧಿ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುತ್ತಾರೆ ಎಂದು ಸರಕಾರಿ ವ್ಯವಸ್ಥೆಗಳಿಗೆ ಯಾವಾಗ ತಿಳಿಯುವುದು ?