ದೇವೇಂದ್ರ ಫಡ್ನವಿಸ್ ಇವರ ವಿರುದ್ಧದ ಅರ್ಜಿಯ ಕುರಿತು ಸೆಪ್ಟೆಂಬರ್ 8 ರಂದು ತೀರ್ಪು!
ನಾಗಪುರ – ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ 2014 ರ ಚುನಾವಣಾ ಪ್ರಮಾಣಪತ್ರದಲ್ಲಿ 2 ಅಪರಾಧಗಳನ್ನು ದಾಖಲಿಸದೇ ಇರುವ ಪ್ರಕರಣದ ತೀರ್ಪು ಸೆಪ್ಟೆಂಬರ್ 5 ರಂದು ನಡೆಯಬೇಕಿತ್ತು; ಆದರೆ ನ್ಯಾಯಾಲಯ ತೀರ್ಪಿನ ದಿನಾಂಕವನ್ನು ಸೆಪ್ಟೆಂಬರ್ 8 ಎಂದು ನಿಗದಿಪಡಿಸಿದೆ. ನ್ಯಾಯವಾದಿ ಸತೀಶ್ ಉಕೆ ಇವರು ಫಡ್ನವಿಸ್ ವಿರುದ್ಧ ದೂರು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಎರಡೂ ಪಕ್ಷದವರ ವಾದ ಪ್ರತಿವಾದ ಮುಕ್ತಾಯಗೊಂಡಿದೆ.
1. ದೇವೇಂದ್ರ ಫಡ್ನವೀಸ್ ಇವರ ವಿರುದ್ಧದ ಮೊದಲ ದೂರು ಮಾನಹಾನಿ ಮಾಡಿರುವ (ಕ್ರಿಮಿನಲ್ ಡಿಫೆಮೆಶನ) ಸಂದರ್ಭದ ಪ್ರಕರಣವಾಗಿದೆ. ಫಡ್ನವಿಸ್ ನಗರಸೇವಕರಾಗಿದ್ದಾಗ ಅವರು ಸರಕಾರಿ ವಕೀಲರೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ‘ಅವರನ್ನು ಪ್ರಕರಣದಿಂದ ವಜಾಗೊಳಿಸಬೇಕು’, ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಅದರ ಮೇಲೆ ನ್ಯಾಯವಾದಿ `ಮಾನನಷ್ಟ ಮೊಕದ್ದಮೆ’ ದಾಖಲಿಸಿದ್ದರು. ನಂತರ ಅದನ್ನು ಹಿಂಪಡೆದಿದ್ದರು
2. ಇನ್ನೊಂದು ಪ್ರಕರಣದಲ್ಲಿ ಕೊಳಗೇರಿ ವಾಸಿಗಳಿಗಾಗಿ ಆಂದೋಲನ ನಡೆಸುತ್ತಿರುವ ಸಂದರ್ಭದ್ದಾಗಿದೆ. ‘ಒಂದು ಭೂಮಿಯಲ್ಲಿನ ಕೊಳೆಗೇರಿಗೆ ‘ಆಸ್ತಿ ತೆರಿಗೆ’ ವಿಧಿಸಬೇಕು’, ಎಂದು ಅಂದಿನ ನಗರಸೇವಕ ಫಡ್ನವೀಸ್ ಅವರು ಮಹಾನಗರ ಪಾಲಿಕೆಗೆ ಪತ್ರ ನೀಡಿದ್ದರು. ಅದರಂತೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬ ‘ಆ ಜಮೀನು ಖಾಸಗಿಯಾಗಿದ್ದು, ನನ್ನ ಮಾಲೀಕತ್ವದ್ದಾಗಿದೆ’, ಎಂದು ದೂರು ದಾಖಲಿಸಿದ್ದರು. ಬಳಿಕ ಈ ದೂರನ್ನು ಉಚ್ಚನ್ಯಾಯಾಲಯ ವಜಾಗೊಳಿಸಿತ್ತು.