10 ಕೋಟಿ ರೂಪಾಯಿ ಎಣಿಸುವ ಬದಲು 10 ರೂಪಾಯಿ ಬಾಚಣಿಗೆ ಕೊಡಿ, ನಾನು ನನ್ನ ಕೂದಲನ್ನು ಬಾಚಿಕೊಳ್ಳುತ್ತೇನೆ ! – ಉದಯನಿಧಿ ಸ್ಟಾಲಿನ್

  • ಉದಯನಿಧಿ ಸನಾತನ ಧರ್ಮವನ್ನು ಮುಗಿಸುವ ಹೇಳಿಕೆ ನೀಡಿದ ಪ್ರಕರಣ

  • ಶಿರಚ್ಛೇದಗೊಳಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯರ ವಿರುದ್ಧ ಉದಯನಿಧಿಯವರ ಟೀಕೆ !

ಚೆನ್ನೈ (ತಮಿಳುನಾಡು) – ಸನಾತನ ಧರ್ಮವನ್ನು ಮುಗಿಸುವ ಹೇಳಿಕೆ ನೀಡಿರುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಅಯೋಧ್ಯೆಯ ತಪಸ್ವಿ ಛಾವಣಿಯ ಪರಮಹಂಸ ಆಚಾರ್ಯರು ಘೋಷಿಸಿದರು. ‘ಉದಯನಿಧಿಯವರ ಶಿರಚ್ಛೇದ ಮಾಡಲು ಯಾರೂ ಮುಂದೆ ಬರದಿದ್ದರೆ ನಾನೇ ಉದಯನಿಧಿಯನ್ನು ಹುಡುಕಿ ತಲೆ ಕಡಿಯುತ್ತೇನೆ’, ಎಂದೂ ಅವರು ಹೇಳಿದ್ದರು. ಅದಕ್ಕೆ ಉದಯನಿಧಿ ಪ್ರತ್ಯುತ್ತರ ನೀಡುತ್ತಾ, ‘ಇಂದು ಸ್ವಾಮಿಯೊಬ್ಬರು ನನ್ನ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅವರು ನಿಜವಾದ ಸಂತರೇ ಅಥವಾ ನಕಲಿಯೇ ? ನಿಮಗೇಕೆ ನನ್ನ ತಲೆ ಇಷ್ಟ ? ಇಷ್ಟು ಹಣ ಎಲ್ಲಿಂದ ತರುತ್ತೀರಿ ? ನನ್ನ ರತಲೆಗಾಗಿ 10 ಕೋಟಿ ರೂಪಾಯಿ ಏಕೆ ಎಣಿಸುತ್ತೀರಿ ? ಬದಲಾಗಿ 10 ರೂಪಾಯಿ ಬಾಚಣಿಗೆ ಕೊಡಿ, ನಾನೇ ನನ್ನ ಕೂದಲನ್ನು ಬಾಚಿಕೊಳ್ಳುತ್ತೇನೆ’ ಎಂದು ಹೇಳಿದರು.

ಭಾಜಪದಿಂದ ತಮಿಳುನಾಡು ರಾಜ್ಯದ ಆಯುಕ್ತರಿಗೆ ಪ್ರತಿಭಟನೆಯ ಪತ್ರ !

ಮತ್ತೊಂದೆಡೆ, ದೆಹಲಿಯ ಭಾಜಪದ ನಿಯೋಗವು ತಮಿಳುನಾಡು ಸದನಕ್ಕೆ ಭೇಟಿ ನೀಡಿ ತಮಿಳುನಾಡು ರಾಜ್ಯ ಆಯುಕ್ತರಿಗೆ ಪ್ರತಿಭಟನಾ ಪತ್ರವನ್ನು ನೀಡಿತು ಮತ್ತು ‘ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆಯವರ ಟೀಕೆ !

ನಿಮಗೂ ಮತ್ತು ಕಟ್ಟರವಾದಿಗಳ ನಡುವೆ ಏನು ವ್ಯತ್ಯಾಸ ? – ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು – ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ; ಆದರೂ ಜನರ ಭಾವನೆಗಳನ್ನು ಗಮನಿಸುವುದು ಅವಶ್ಯಕ. ಒಂದು ವೇಳೆ ನೀವು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ 10 ಕೋಟಿ ರೂಪಾಯಿಗಳ ಬಹುಮಾನ ಘೋಷಿಸುತ್ತಿದ್ದರೆ ನಿಮಗೂ ಮತ್ತು ಕಟ್ಟರವಾದಿಗಳಿಗೂ ಏನು ವ್ಯತ್ಯಾಸ ? ನಾನು ಅವರಿಗೆ (ಪರಮಹಂಸ ಆಚಾರ್ಯ) ಹೇಳಬಯಸುವುದೇನೆಂದರೆ, ಅವರ ಧರ್ಮ ಕರುಣೆ ಮತ್ತು ಸಮಾನತೆಯನ್ನು ಬೋಧಿಸುವುದಿಲ್ಲವೇ ?

(ಸನಾತನ ಧರ್ಮವು ಕರುಣೆ ಮತ್ತು ಸಮಾನತೆಯನ್ನು ಕಲಿಸುತ್ತದೆ, ಆದ್ದರಿಂದ ಅದನ್ನು ಯಾರಾದರೂ ಉಲ್ಲಂಘಿಸುತ್ತಿದ್ದರೆ, ಅವರನ್ನು ವಿರೋಧಿಸಲೇಬೇಕು; ಆದರೆ ಯಾವ ಧರ್ಮ ಕರುಣೆ ಮತ್ತು ಸಮಾನತೆಯನ್ನು ಕಲಿಸುವುದಿಲ್ಲವೋ ಅವರ ಧರ್ಮಗ್ರಂಥಗಳಲ್ಲಿಯೇ ಮೂರ್ತಿಪೂಜಕರನ್ನು ಹತ್ಯೆ ಮಾಡುವಂತೆ ಹೇಳಿದೆ, ಅವರ ವಿಷಯದಲ್ಲಿ ಖರ್ಗೆ ಎಂದಿಗೂ ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕು.- ಸಂಪಾದಕರ)

ಸಂಪಾದಕೀಯ ನಿಲುವು

ಯಾರನ್ನಾದರೂ ಹತ್ಯೆ ಮಾಡಲು ಪ್ರಚೋದಿಸುವುದು ತಪ್ಪಾಗಿದೆ. ಸನಾತನ ಧರ್ಮ ಇದನ್ನು ಅನುಮತಿಸುವುದಿಲ್ಲ; ಆದರೆ ಪ್ರಿಯಾಂಕ್ ಖರ್ಗೆಯಂತಹವರು ‘ಸರ್ ತನ್ ಸೆ ಜುದಾ’ (ಶಿರಚ್ಛೇದಗೊಳಿಸುವುದು) ಎಂದು ಘೋಷಿಸುವ ಮತ್ತು ಅದನ್ನು ನಿಜವಾಗಿ ಮಾಡುವ ಮತಾಂಧರ ವಿರುದ್ಧ ಎಂದಿಗೂ ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಬೇಕು !