ಪ್ರಧಾನಮಂತ್ರಿ ಮೋದಿ ಕೂಡ ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಹೇಳುತ್ತಾರೆ, ಆಗ ‘ಯಾರನ್ನು ನಾಶ ಮಾಡುವುದು’, ಹೀಗೆ ಇರುವುದಿಲ್ಲ !

ಸನಾತನ ಧರ್ಮ ಮುಗಿಸುವ ಬಗ್ಗೆ ಹೇಳಿಕೆ ನೀಡಿರುವ ದ್ರಮುಕದ ನಾಯಕ ಹಾಗೂ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ದೃಢ ನಿಲುವು !

ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯ ನಿಧಿ ಸ್ಟಾಲಿನ್

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಇವರ ಪುತ್ರ ಉದಯ ನಿಧಿ ಸ್ಟಾಲಿನ್ ಇವರು ಸನಾತನ ಧರ್ಮ ನಾಶ ಮಾಡುವುದರ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಇಲ್ಲಿಯವರೆಗೆ ದೃಢವಾಗಿದ್ದಾರೆ. ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ‘ಕಾಂಗ್ರೆಸ್ ಮುಕ್ತ ಭಾರತ’ದ ಚರ್ಚೆ ಮಾಡುತ್ತಾರೆ, ಎಂದರೆ ಕಾಂಗ್ರೆಸ್ಸಿಗರನ್ನು ಮುಗಿಸುವುದೇ ? ಭಾಜಪಾಗೆ ‘ಇಂಡಿಯಾ’ ಮೈತ್ರಿಕೂಟದ ಭಯ ಇದೆ ಮತ್ತು ಅದನ್ನು ದಾರಿ ತಪ್ಪಿಸುವುದಕ್ಕಾಗಿ ಅವರು ಇದೆಲ್ಲಾ ಮಾತನಾಡುತ್ತಿದ್ದಾರೆ. ದ್ರಮುಕದ ನೀತಿ ‘ಒಂದು ಕುಲ ಒಂದು ದೇವರು’ ಹೀಗಿದೆ ಎಂದು ಹೇಳಿದರು.

(ಸೌಜನ್ಯ : India Today)

‘ಸನಾತನ ಧರ್ಮ ನಾಶವಾಗಬೇಕು’ ಹೀಗೆ ನಾನು ನಿರಂತರ ಹೇಳುತ್ತೇನೆ ! (ಅಂತೆ)

ಉದಯನಿಧಿ ಮಾತು ಮುಂದುವರೆಸುತ್ತಾ, ನಾನು ಕೇವಲ ಸನಾತನ ಧರ್ಮದ ಬಗ್ಗೆ ಟೀಕಿಸಿದ್ದೇನೆ, ಸನಾತನ ಧರ್ಮ ನಾಶವಾಗಬೇಕು ಎಂದು ನಾನು ನಿರಂತರ ಹೇಳುತ್ತೇನೆ. ಕೆಲವು ಜನರು ಬಾಲಿಶುತನದಿಂದ ವರ್ತಿಸುತ್ತಾರೆ ಮತ್ತು ನಾನು ನರಸಂಹಾರಕ್ಕೆ ಪ್ರಚೋದನೆ ನೀಡಿರುವುದು ಎಂದು ಹೇಳುತ್ತಿದ್ದಾರೆ. ಕೆಲವು ಜನರು ದ್ರವಿಡರ ವಿಚಾರಧಾರೆ ಬೇಡ ಎಂದು ಕೂಡ ಮಾತನಾಡುತ್ತಾರೆ. ಇದರ ಅರ್ಥ ದ್ರಮುಕದ ಜನರನ್ನು ಕೂಡ ನಾಶ ಮಾಡಬೇಕೇ ? ಸನಾತನ ಎಂದರೆ ಏನು ? ‘ಸನಾತನ ಎಂದರೆ ಎಂದಿಗೂ ಬದಲಾಗದೇ ಇರುವುದು ಮತ್ತು ಎಲ್ಲವೂ ಶಾಶ್ವತವಾಗಿರುವುದು;’ ಹಾಗಾದರೆ ದ್ರವಿಡರ ವಿಚಾರಧಾರೆ ಬದಲಾಯಿಸುವ ಒತ್ತಾಯ ಏಕೆ ಮಾಡಲಾಗುತ್ತಿದೆ ಮತ್ತು ‘ಪ್ರತಿಯೊಬ್ಬರು ಸಮಾನವಾಗಿರುವುದು’, ಎಂಬ ಅಭಿಪ್ರಾಯ ಮಂಡಿಸಲಾಗುತ್ತಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಉದಯನಿಧಿ ಇವರಿಗೆ, ಯಾರನ್ನಾದರೂ ಮುಗಿಸುವುದು ಎಂದರೆ ನಾಶ ಮಾಡುವುದು, ಹಾಗೆ ಆಗುವುದಿಲ್ಲ, ಬದಲಾಗಿ ಅವರು ಜಗತ್ತಿನಲ್ಲಿನ ಜಿಹಾದಿ ಭಯೋತ್ಪಾದಕರು ಏನೆಲ್ಲಾ ನಾಶ ಮಾಡುತ್ತಿದ್ದಾರೆ, ಅದು ಯಾವ ಧರ್ಮದಿಂದ ಆಗುತ್ತಿದೆ, ಅದನ್ನು ನಾಶ ಮಾಡುವುದರ ಬಗ್ಗೆ ಅವರು ಏಕೆ ಮಾತನಾಡುವುದಿಲ್ಲ ?

* ಸನಾತನ ಧರ್ಮವು ಎಂದಿಗೂ ಭಯೋತ್ಪಾದನೆ ನಡೆಸಲು ಹೇಳಿಲ್ಲ, ಅಥವಾ ಸನಾತನದ ಲಕ್ಷಾಂತರ ವರ್ಷದ ಇತಿಹಾಸದಲ್ಲಿ ಸನಾತನ ಧರ್ಮದವರು ಹೀಗೆ ಎಂದು ವರ್ತಿಸಿಲ್ಲ; ಹಾಗಾದರೆ ಸ್ಟಾಲಿನ್ ಇವರಿಗೆ ಈ ಧರ್ಮ ಮುಗಿಸಬೇಕು ಎಂದು ಏಕೆ ಅನಿಸುತ್ತದೆ ? ಇದು ಅವರು ಜನರಿಗೆ ವಿಸ್ತಾರವಾಗಿ ಹೇಳಬೇಕು !