‘ದೆಹಲಿಯಲ್ಲಿ ನಿರ್ಮಿಸಿದ ಕಾರಂಜಿ ಶೀವಲಿಂಗವಲ್ಲ, ಅದು ಕಲಾಕೃತಿ (ಅಂತೆ) !’ – ಉಪರಾಜ್ಯಪಾಲ ವಿ.ಕೆ.ಸಕ್ಸೇನಾ

ಈ ಕಲಾಕೃತಿ ಶಿವಲಿಂಗದ ಆಕಾರದಲ್ಲಿರುವುದು ತಪ್ಪು. ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಆದ್ದರಿಂದ ಇದಕ್ಕೆ ಕಾರಣರಾದವರ ವಿರುಧ್ದ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು !

ನವ ದೆಹಲಿ – ದೆಹಲಿಯಲ್ಲಿ ಸೆಪ್ಟಂಬರ್ ೯ ಮತ್ತು ೧೦ ರಂದು ಜಿ-೨೦ ಶೃಂಗ ಸಭೆಯ ಹಿನ್ನಲೆಯಲ್ಲಿ ನಿರ್ಮಿಸಲಾದ ಕಾರಂಜಿ ಶಿವಲಿಂಗವಲ್ಲ, ಇದು ಕಲಾಕೃತಿ ಇದೆ, ಎಂದು ಖುಲಾಸ ಉಪರಾಜ್ಯಪಾಲ ವಿ. ಸಕ್ಸೇನ ಇವರು ಹೇಳಿದರು.

ಜಿ-೨೦ ಶೃಂಗಸಭೆಯ ಹಿನ್ನಲೆಯಲ್ಲಿ ನಗರದ ಸೌಂದರ್ಯಿಕರಣದ ಭಾಗವಾಗಿ ಧೌಲಾ ಕುವಾ ಪ್ರದೇಶದ ಹನುಮಾನ್ ಚೌಕದ ರಸ್ತೆಬದಿ ೧೨ ಕಾರಂಜಿಗಳನ್ನು ನಿರ್ಮಿಸಲಾಗಿದೆ. ಭಾಜಪದ ನಾಯಕಿ ಚಾರೂ ಪ್ರಜ್ನಾ ಟ್ವೀಟ್ ಮಾಡಿ ಅಮ್ ಆದ್ಮಿ ಪಕ್ಷದ ಸರಕಾರವು ಧೌಲಾ ಕುವಾ ಪ್ರದೇಶದಲ್ಲಿ ಶಿವಲಿಂಗದ ಆಕಾರದಲ್ಲಿ ಕಾರಂಜಿ ಸ್ಥಾಪಿಸಿದೆ ಎಂದು ಆರೊಪಿಸಿದ್ದರು. ಆದರೆ ಅಮ್ ಆದ್ಮಿ ಪಕ್ಷವು ಭಾಜಪವು ಈ ಕಾರಂಜಿಯನ್ನು ಸ್ಥಾಪಿಸಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.