ಪ್ರತಾಪಗಡದಲ್ಲಿ (ರಾಜಸ್ಥಾನ) ಪತಿಯೇ ತನ್ನ ಗರ್ಭಿಣಿ ಪತ್ನಿಯನ್ನು ಬೆತ್ತಲೆಗೊಳಿಸಿ ಗ್ರಾಮಸ್ಥರ ಮುಂದೆ 1 ಕಿಮೀ ಓಡುವಂತೆ ಮಾಡಿದ !

1 ವರ್ಷದ ಹಿಂದೆ ಯುವಕನಿಂದ ಅಪಹರಣಕ್ಕೊಳಗಾದ ಸಂತ್ರಸ್ತೆ ಮರಳಿ ಬಂದಿದ್ದಳು !

ಪ್ರತಾಪಗಡ (ರಾಜಸ್ಥಾನ) – ಇಲ್ಲಿನ ಧಾರಿಯಾವಾಡ ಪ್ರದೇಶದಲ್ಲಿ ಗಂಡನೇ ಆತನ ಗರ್ಭಿಣಿ ಹೆಂಡತಿಯನ್ನು ಬೆತ್ತಲೆಗೊಳಿಸಿ ಗ್ರಾಮಸ್ಥರ ಮುಂದೆ 1 ಕಿ.ಮೀ. ಓಡುವಂತೆ ಮಾಡಿದ. ಈ ಸಮಯದಲ್ಲಿ ಮಹಿಳೆ ಸಹಾಯಕ್ಕಾಗಿ ಕಿರುಚುತ್ತಿದ್ದಳು; ಆದರೆ ಯಾರೂ ಅವಳಿಗೆ ಸಹಾಯ ಮಾಡಲಿಲ್ಲ. ಸಂತ್ರಸ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆಗಸ್ಟ್ 31 ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು 14 ಜನರ ವಿರುದ್ಧ ಪ್ರಕರಣ ದಾಖಲಿಸಿ ಆಕೆಯ ಪತಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಈ ಮಹಿಳೆಯ ವಿವಾಹವು ಒಂದೂವರೆ ವರ್ಷದ ಹಿಂದೆ ಈ ಗ್ರಾಮದ ಯುವಕನೊಂದಿಗೆ ಆಗಿತ್ತು. ಮದುವೆಯಾಗಿ 6 ತಿಂಗಳಾದ ಬಳಿಕ ಆಕೆಯನ್ನು ಪಕ್ಕದ ಉಪಲ ಕೋಟಾ ಗ್ರಾಮದ ಯುವಕನೊಬ್ಬನು ಓಡಿಸಿಕೊಂಡು ಹೋಗಿದ್ದನು. ಆಗಸ್ಟ್ 30 ರಂದು, ಮಹಿಳೆ ಒಂದು ವರ್ಷದ ನಂತರ ಯುವಕನೊಂದಿಗೆ ಹಿಂದಿರುಗಿದಾಗ, ಗಂಡನ ಮನೆಯವರು ಅವಳನ್ನು ಪಹಾಡ್ ಗ್ರಾಮಕ್ಕೆ ಬಲವಂತವಾಗಿ ಕರೆತಂದ ನಂತರ ಪತಿ ಮೇಲಿನಂತೆ ಕೃತ್ಯ ಎಸಗಿದ್ದಾನೆ.

ಸಂಪಾದಕರ ನಿಲುವು

* ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಘಟನೆಯನ್ನು ಟೀಕಿಸಿದ ಕಾಂಗ್ರೆಸ್ ಈಗ ತನ್ನ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ಮೌನವಾಗಿದೆ, ಎಂಬುದನ್ನು ಗಮನಿಸಿ !

* ಭಾರತದಲ್ಲಿ ಇಂತಹ ಘಟನೆಗಳು ನಡೆಯುವುದು ಭಾರತೀಯರಿಗೆ ಲಜ್ಜಾಸ್ಪದ ! ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ನೀಡಿದರೆ, ಈ ಬಗ್ಗೆ ಇತರರಿಗೆ ಅಂಕುಶ ಬೀಳಬಹುದು !