೧. ಶರೀರದ ಚಕ್ರಗಳ ಮೇಲೆ ಕೆಟ್ಟ ಶಕ್ತಿಗಳು ಮಾಡಿದ ಆಕ್ರಮಣವೇ ಯಾವುದಾದರೊಂದು ಅವಯವಕ್ಕೆ ರೋಗ ತಗಲುವುದರ ಮುಖ್ಯ ಕಾರಣವಾಗಿದೆ : ‘ನಾಮಜಪಾದಿ ಉಪಾಯಗಳನ್ನು ಮಾಡುವಾಗ ಶರೀರದ ಷಡ್‌ಚಕ್ರಗಳು ಮತ್ತು ಸಹಸ್ರಾರ ಚಕ್ರ ಮಹತ್ವದ್ದಾಗಿರುತ್ತವೆ. ಈ ಷಡ್‌ಚಕ್ರ ಮತ್ತು ಸಹಸ್ರಾರ ಚಕ್ರ ಇವುಗಳ ಮಾಧ್ಯಮದಿಂದಲೇ ನಮ್ಮ ಅವಯವಗಳಿಗೆ ಕಾರ್ಯವನ್ನು ಮಾಡಲು ಊರ್ಜೆ (ಪ್ರಾಣಶಕ್ತಿ) ಯನ್ನು ಪೂರೈಸಲಾಗುತ್ತದೆ; ಏಕೆಂದರೆ ನಮ್ಮ ಅವಯವಗಳು ಯಾವುದಾದರೊಂದು ಚಕ್ರದೊಂದಿಗೆ ಜೋಡಿಸ ಲ್ಪಟ್ಟಿರುತ್ತವೆ. ಅವಯವಗಳಿಗೆ ಊರ್ಜೆ ದೊರಕುವಲ್ಲಿ ಸತತವಾಗಿ ಅಡಚಣೆಗಳು ಉಂಟಾದರೆ, ಅವುಗಳಿಗೆ ರೋಗಗಳು ಬರುತ್ತವೆ. ಮನುಷ್ಯನ ರೋಗಗಳಿಗೆ ‘ಆಧ್ಯಾತ್ಮಿಕ ತೊಂದರೆಗಳು’ ಮುಖ್ಯ ಕಾರಣವಾಗಿರುತ್ತವೆ ಮತ್ತು ವಿವಿಧ ಆಧ್ಯಾತ್ಮಿಕ ತೊಂದರೆಗಳ ಪೈಕಿ ‘ಕೆಟ್ಟ ಶಕ್ತಿಗಳ ತೊಂದರೆ’ಯು ಮುಖ್ಯ ಕಾರಣವಾಗಿರುತ್ತದೆ. ಕೆಟ್ಟ ಶಕ್ತಿಗಳು ಮನುಷ್ಯನಿಗೆ ತೊಂದರೆಗಳನ್ನು ಕೊಡಲು ಒಂದು ಅಥವಾ ಒಂದಕ್ಕಿಂತ ಹೆಚ್ಚು ಚಕ್ರಗಳ ಮೇಲೆ ಆಕ್ರಮಣ ಮಾಡಿ ಅವುಗಳಲ್ಲಿ ತೊಂದರೆದಾಯಕ ಶಕ್ತಿಯನ್ನು (ಕಪ್ಪು ಶಕ್ತಿಯನ್ನು) ಸಂಗ್ರಹಿಸಿಡುತ್ತವೆ. ಇದರಿಂದ ಆ ಚಕ್ರಕ್ಕೆ ಅಥವಾ ಚಕ್ರಗಳಿಗೆ ಸಂಬಂಧಿಸಿದ ಅವಯವಗಳಿಗೆ ಸಿಗುವ ಪ್ರಾಣಶಕ್ತಿ ಅಲ್ಪವಾಗಿ ಅವುಗಳ ಕಾರ್ಯದಲ್ಲಿ ಅಡಚಣೆಗಳು ಬರುತ್ತವೆ, ಅಂದರೆ ಆ ಅವಯವಗಳಿಗೆ ರೋಗ ಬರುತ್ತದೆ.
೨. ಅವಯವದಲ್ಲಿ ಉತ್ಪನ್ನವಾದ ರೋಗವನ್ನು ದೂರ ಗೊಳಿಸಲು ಕೈಗಳ ಬೆರಳುಗಳ ‘ಮುದ್ರೆ’ಯನ್ನು ಮಾಡಿ ಆ ಮುದ್ರೆಯಿಂದ ಶರೀರದ ಮೇಲೆ ‘ನ್ಯಾಸ’ ಮತ್ತು ನಾಮಜಪ’ವನ್ನು ಮಾಡುತ್ತಾ ಚಕ್ರಕ್ಕೆ ಊರ್ಜೆಯನ್ನು ಪೂರೈಸಿ ಅದರಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡಬೇಕಾಗುತ್ತದೆ : ಯಾವುದಾದರೊಂದು ಅವಯವಕ್ಕೆ ಊರ್ಜೆ ಸಿಗುವಲ್ಲಿ ಅಡಚಣೆ ಬಂದಿದ್ದರಿಂದ ಅದರಲ್ಲಿ ಉತ್ಪನ್ನವಾದ ರೋಗವನ್ನು ದೂರಗೊಳಿಸಲು ಆ ಅವಯವಕ್ಕೆ ಸಂಬಂಧಿಸಿದ ಚಕ್ರದ ಮೇಲೆ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡಿ, ಅಂದರೆ ಆ ಚಕ್ರಕ್ಕೆ ಊರ್ಜೆ(ಶಕ್ತಿ)ಯನ್ನು ಪೂರೈಸಿ ಅದರಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡಬೇಕಾಗುತ್ತದೆ. ಚಕ್ರಕ್ಕೆ ಊರ್ಜೆಯನ್ನು ಪೂರೈಸಲು ಪಂಚಮಹಾಭೂತಗಳಲ್ಲಿನ ಯೋಗ್ಯ ಮಹಾಭೂತಕ್ಕೆ ಸಂಬಂಧಿಸಿದ ಕೈ ಬೆರಳುಗಳ ‘ಮುದ್ರೆಯನ್ನು ಮಾಡಿ ಆ ಚಕ್ರದ ಮೇಲೆ ‘ನ್ಯಾಸ’ ಮಾಡಬೇಕಾಗುತ್ತದೆ, ಹಾಗೆಯೇ ಆ ಪಂಚಮಹಾಭೂತಕ್ಕೆ ಸಂಬಂಧಿತ ‘ನಾಮಜಪ’ವನ್ನೂ ಮಾಡಬೇಕಾಗುತ್ತದೆ. ಈ ರೀತಿ ಉಪಾಯವನ್ನು ಮಾಡಿದರೆ ಅವಯವವು ಪುನಃ ಉತ್ತಮವಾಗಿ ಕೆಲಸ ಮಾಡತೊಡಗುತ್ತದೆ.
೩. ಕಾಲಾನುಸಾರ ಉಪಾಯದ ಸಮಯದಲ್ಲಿ ನ್ಯಾಸ ಮಾಡುವ ಮುಖ್ಯ ಸ್ಥಾನದಲ್ಲಾಗುತ್ತಿರುವ ಬದಲಾವಣೆ
೩ ಅ. ಸೂಕ್ಷ್ಮ ಘಟನಾವಳಿಗಳನ್ನು ಅರಿಯಲು ಆಜ್ಞಾಚಕ್ರವು ಮಹತ್ವದ್ದಾಗಿದೆ, ಹಾಗಾಗಿ ಕೆಟ್ಟ ಶಕ್ತಿಗಳು ಸಾಧಕರ ಆಜ್ಞಾಚಕ್ರದ ಮೇಲೆ ಪ್ರಾಧಾನ್ಯತೆಯಿಂದ ಆಕ್ರಮಣ ಮಾಡುವುದು : ಕಳೆದ ಕೆಲವು ವರ್ಷಗಳಿಂದ ಸಾಧಕರಿಗೆ ಉಪಾಯಗಳನ್ನು ಹುಡುಕಿ ಕೊಡುವಾಗ, ನ್ಯಾಸ ಮಾಡುವ ಸ್ಥಾನ ಒಂದೆಂದರೆ ಕೇವಲ ಆಜ್ಞಾ ಚಕ್ರವೇ ಸಿಗುತ್ತದೆ ಅಥವಾ ಆಜ್ಞಾಚಕ್ರ ಮತ್ತು ಅದರ ಜೊತೆಗೆ ಇನ್ನೊಂದು ಚಕ್ರ ಸಿಗುತ್ತದೆ ಎಂಬುದು ಗಮನಕ್ಕೆ ಬಂದಿತು. ಅಧ್ಯಾತ್ಮವು ಸೂಕ್ಷ್ಮ ಘಟನಾವಳಿಗಳಿಗೆ ಸಂಬಂಧಿಸಿದೆ. ಅದು ತಿಳಿಯಲು ಆಜ್ಞಾಚಕ್ರವು ಮಹತ್ವದ್ದಾಗಿರುತ್ತದೆ. ಆದುದರಿಂದ ಕೆಟ್ಟ ಶಕ್ತಿಗಳು ಪ್ರಾಧಾನ್ಯತೆಯಿಂದ ಸಾಧಕರ ಆಜ್ಞಾಚಕ್ರದ ಮೇಲೆ ಆಕ್ರಮಣ ಮಾಡುತ್ತವೆ.
೩ ಆ. ಸಂಪೂರ್ಣ ಜಗತ್ತನ್ನು ನಾವು ಕಣ್ಣುಗಳಿಂದ ನೋಡುತ್ತಿರುವುದರಿಂದ ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿ ಸಹಜವಾಗಿ ಶರೀರದಲ್ಲಿ ಸೇರಿಕೊಳ್ಳುತ್ತವೆ; ಆದುದರಿಂದ ಆಜ್ಞಾಚಕ್ರದ ಮೇಲೆ ಉಪಾಯ ಮಾಡುವುದಕ್ಕಿಂತ ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ ಎಂಬುದು ಒಂದು ವರ್ಷದ ಹಿಂದೆ ಗಮನಕ್ಕೆ ಬರುವುದು : ಒಂದು ವರ್ಷದ ಹಿಂದೆ, ಆಜ್ಞಾಚಕ್ರದ ಮೇಲೆ ಉಪಾಯ ಮಾಡುವುದಕ್ಕಿಂತ ಕಣ್ಣುಗಳ ಮೇಲೆ ಉಪಾಯ ಮಾಡುವುದು ಹೆಚ್ಚು ಮಹತ್ವದ್ದಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿತು; ಏಕೆಂದರೆ ನಾವು ಸಂಪೂರ್ಣ ಜಗತ್ತನ್ನು ಕಣ್ಣುಗಳ ಮೂಲಕ ನೋಡುತ್ತಿರುವುದ ರಿಂದ ಅವುಗಳ ಮೂಲಕ ಒಳ್ಳೆಯ ಅಥವಾ ಕೆಟ್ಟ ಶಕ್ತಿ ಸಹಜವಾಗಿ ನಮ್ಮ ಶರೀರದಲ್ಲಿ ಸೇರಿ ಕೊಳ್ಳು ತ್ತವೆ. ಕಣ್ಣುಗಳು ತೇಜತತ್ತ್ವಕ್ಕೆ ಸಂಬಂಧಿಸಿರುತ್ತವೆ. ಹಾಗೆಯೇ ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಮಾಡುವಾಗ ಕುಂಡಲಿನಿ ಚಕ್ರಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರ ಮಾಡಿದರೂ, ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿ ಬಾಕಿ ಉಳಿಯುತ್ತದೆ ಎಂಬುದೂ ಗಮನಕ್ಕೆ ಬಂದಿತು. ಆದುದರಿಂದ ಕೊನೆಗೆ ಕಣ್ಣುಗಳ ಮೇಲೆ ಉಪಾಯ ಮಾಡಿದರೆ, ಶರೀರದಲ್ಲಿನ ತೊಂದರೆದಾಯಕ ಶಕ್ತಿ ಸಂಪೂರ್ಣ ದೂರವಾಗುತ್ತದೆ.
೩ ಇ. ಮಾರ್ಚ್ ೨೦೨೩ ರಿಂದ ‘ತಲೆಯ ಎಡ ಬದಿ’ಯು ಉಪಾಯದ ಮುಖ್ಯ ಸ್ಥಾನವಾಗಿ ಬರುತ್ತಿದೆ; ಏಕೆಂದರೆ ಕೆಟ್ಟ ಶಕ್ತಿಗಳು ಸಾಧಕರ ಕೃತಿಗಳನ್ನು ನಿಯಂತ್ರಿಸಲು ಅವರ ಮೆದುಳಿನ ಮೇಲೆ ಆಕ್ರಮಣ ಮಾಡುವುದನ್ನು ಆರಂಭಿಸಿರುವುದು : ಮಾರ್ಚ್ ೨೦೨೩ ರಿಂದ ಉಪಾಯಗಳನ್ನು ಹುಡುಕುವಾಗ, ‘ಆಜ್ಞಾಚಕ್ರ’ ಅಥವಾ ‘ಕಣ್ಣುಗಳು’ ಉಪಾಯಗಳ ಮುಖ್ಯ ಸ್ಥಾನವಾಗಿರದೇ ‘ತಲೆಯ ಎಡಬದಿ’ಯಾಗಿದೆ ಮತ್ತು ಅಲ್ಲಿ ಉಪಾಯ ಮಾಡಿದರೆ, ಅದು ಹೆಚ್ಚು ಪರಿಣಾಮಕಾರಿ ಆಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿತು. ತಲೆಯ ಭಾಗವು ಮೆದುಳಿಗೆ ಸಂಬಂಧಿಸಿರುತ್ತದೆ. ಮೆದುಳು ನಮ್ಮ ಕೃತಿಗಳನ್ನು ನಿಯಂತ್ರಣದಲ್ಲಿಡುತ್ತದೆ. ಆದುದರಿಂದ ಕೆಟ್ಟ ಶಕ್ತಿಗಳು ಸಾಧಕರ ಮೆದುಳಿನ ಮೇಲೆ ಆಕ್ರಮಣ ಮಾಡಿ ಅವರ ಕೃತಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ. ಹಾಗೆಯೇ ಕಳೆದ ೨ ದಶಕಗಳ ಕಾಲ ಕೆಟ್ಟ ಶಕ್ತಿಗಳು ಸಾಧಕರ ಮೇಲೆ ಸೂಕ್ಷ್ಮದಿಂದ ಹೆಚ್ಚು ಆಕ್ರಮಣ ಮಾಡುತ್ತಿದ್ದವು; ಆದರೆ ಈಗ ಸಾಧಕರ ಸಾಧನೆ ಹೆಚ್ಚಾದುದರಿಂದ ಅವು ಸೋಲುತ್ತಿವೆ. ಅವುಗಳ ಶಕ್ತಿ ಕಡಿಮೆಯಾಗುತ್ತಿರುವುದರಿಂದ ಅವು ಈಗ ಸಾಧಕರಿಗೆ ಶಾರೀರಿಕ ತೊಂದರೆಗಳನ್ನು ನೀಡತೊಡಗಿವೆ. ಇದರ ಉದಾಹರಣೆ ಎಂದರೆ ಕೆಟ್ಟ ಶಕ್ತಿಗಳು ಸಾಧಕರ ಕೃತಿಗಳನ್ನು ನಿಯಂತ್ರಿಸಲು ಅವರ ಮೆದುಳಿನ ಮೇಲೆ ಆಕ್ರಮಣ ಮಾಡುವುದು.
ಈ ರೀತಿ ಸಾಧಕರ ಮೇಲೆ ಆಕ್ರಮಣ ಮಾಡುವಲ್ಲಿ ಕೆಟ್ಟ ಶಕ್ತಿಗಳು ಕಾಲಾನುಸಾರ ಎಷ್ಟೇ ಬದಲಾವಣೆ ಮಾಡಿದರೂ ಗುರುಕೃಪೆಯಿಂದ ಯೋಗ್ಯ (ಸಮರ್ಪಕ) ಉಪಾಯಗಳು ಸಿಗುತ್ತಿವೆ. ಆದುದರಿಂದ ನಮಗೆ ಕೆಟ್ಟ ಶಕ್ತಿಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ. ಇದಕ್ಕಾಗಿ ನಾನು ಶ್ರೀ ಗುರುಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೮.೫.೨೦೨೩)
ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದ ಅನೇಕ ಕಥೆಗಳು ವೇದ-ಪುರಾಣ ಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿ, ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿ ಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |