ಆಧ್ಯಾತ್ಮಿಕ ಪ್ರಗತಿಗಾಗಿ ಸಹಾಯಕ ಕ್ಷಮತೆ

ಧ್ಯೇಯಪ್ರಾಪ್ತಿಗಾಗಿ ಅಧ್ಯಾತ್ಮದಲ್ಲಿ ವಿವಿಧ ಮಾರ್ಗಗಳಿವೆ. ಪ್ರಗತಿಯಾಗುವುದಕ್ಕೆ ಪ್ರತಿಯೊಂದು ಮಾರ್ಗದಲ್ಲಿ ಬೇರೆ ಬೇರೆ ಕ್ಷಮತೆಯು ಕೆಲಸಕ್ಕೆ ಬರುತ್ತದೆ. ಆ ಕ್ಷಮತೆಗಳನ್ನು ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ. ನಮ್ಮಲ್ಲಿ ಯಾವ ಕ್ಷಮತೆ ಹೆಚ್ಚಿದೆ ಅದನ್ನು ಗುರುತಿಸಿ ನಮಗೆ ಅನುಕೂಲವಿರುವ ಸಾಧನೆ ಮಾಡಿದರೆ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುವ ಸಾಧ್ಯತೆ ಹೆಚ್ಚುತ್ತದೆ.

ಪೂ. ಅನಂತ ಆಠವಲೆ

೧. ಈಶ್ವರನ ಪ್ರಾಪ್ತಿಗಾಗಿ – ‘ಒಂದು ಕೋಟಿ ಜಪ ಮಾಡುತ್ತೇನೆ’, ‘ಹನ್ನೆರಡು ವರ್ಷ ತಪಸ್ಸು ಮಾಡುತ್ತೇನೆ’, ಇಂತಹ ಪ್ರಯತ್ನಗಳ ಬದಲು ಈಶ್ವರನ ಬಗ್ಗೆ ಭಕ್ತಿಭಾವ ಮತ್ತು ಈಶ್ವರನ ಪ್ರಾಪ್ತಿಯ ತಳಮಳವು ಹೆಚ್ಚು ಉಪಯುಕ್ತವಾಗಿದೆ.

೨. ಕರ್ಮಗಳಿಂದ ಆಧ್ಯಾತ್ಮಿಕ ಪ್ರಗತಿಗಾಗಿ – ನಿಷ್ಕಾಮರಾಗಿರಬೇಕು. ಕೆಲಸವನ್ನು ಪೂರ್ಣ ಉತ್ಸಾಹ

ದಿಂದ, ಎಚ್ಚರಿಕೆಯಿಂದ ಮಾಡಬೇಕು; ಇತರರ ಒಳಿತಿಗಾಗಿ ಮಾಡಬೇಕು; ಯಾರಿಗೆ ಒಳಿತನ್ನು ಮಾಡಿದ್ದೇವೆಯೋ, ಅವರಿಂದ ಮರು ಪಾವತಿಯ ಅಪೇಕ್ಷೆಯಿರಬಾರದು; ಆ ಕರ್ಮವು ಯಶಸ್ವಿಯಾದರೂ, ವಿಫಲವಾದರೂ ಸುಖ-ದುಃಖವಾಗದಿರುವದು (ಅಲಿಪ್ತ); ಇಂತಹ ಕರ್ಮ

ಯೋಗವು ಪೂರ್ಣ ನಿಷ್ಕಾಮತೆಯನ್ನು ಸಾಧಿಸು ವುದಕ್ಕಾಗಿ ಇರುತ್ತದೆ. ಮಹತ್ವ ಕರ್ಮದ್ದಲ್ಲ, ನಿಷ್ಕಾಮದ್ದಾಗಿದೆ.

೩. ಸಮಾಧಿಗಾಗಿ – ಚಿತ್ತದ ಏಕಾಗ್ರತೆ ಮಹತ್ವ ದ್ದಾಗಿರುತ್ತದೆ. ಪಾತಂಜಲಿ ಅಷ್ಟಾಂಗಯೋಗದ ಮೊದಲು ೫ ಅಂಗಗಳು (ಭಾಗಗಳು) – ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಇವು ಮುಖ್ಯ ಪೂರ್ವಸಿದ್ಧತೆಗಳಾಗಿವೆ. ಮುಂದಿನ ಎರಡು ಅಂಗಗಳು ಧಾರಣಾ ಮತ್ತು ಧ್ಯಾನ, ಇವು ಚಿತ್ತವನ್ನು ಏಕಾಗ್ರ ಮಾಡುವ ಪ್ರಯತ್ನಗಳಾಗಿವೆ. ಕೊನೆಯ ಭಾಗದಲ್ಲಿ ಅಂದರೆ ಸಮಾಧಿಯಲ್ಲಿ ಚಿತ್ತವು ಏಕಾಗ್ರವಾಗಿರುತ್ತದೆ.

೪ ಅ. ಆತ್ಮಜ್ಞಾನಪ್ರಾಪ್ತಿಗಾಗಿ – ಅತಿ ತೀವ್ರ ಜಿಜ್ಞಾಸೆ ಇರ ಬೇಕಾಗುತ್ತದೆ. ತಿಳಿಯುವ ತನಕ ಮನಸ್ಸು ಬಹಳ ಅಶಾಂತ ವಾಗಿದ್ದರೆ ಜಿಜ್ಞಾಸೆಯನ್ನು ಪೂರೈಸಲು ಹೆಚ್ಚು ಪ್ರಯತ್ನ ಗಳಾಗುತ್ತವೆ ಮತ್ತು ಅದು ಯಶಸ್ವಿಯಾಗುತ್ತದೆ.

೪ ಆ. ಬ್ರಹ್ಮಲೀನವಾಗಲು – ವೈರಾಗ್ಯ ಮತ್ತು ತೀವ್ರ ಮುಮುಕ್ಷುತ್ವ ಇರಬೇಕಾಗುತ್ತದೆ. ನಂತರ ಪ್ರಾಪ್ತ ಆತ್ಮಜ್ಞಾನದ ಪ್ರತ್ಯಕ್ಷ ಅನುಭೂತಿ, ಅನುಭವ ಬಂದು ಎಲ್ಲ ಇಚ್ಛೆಗಳ ಜೊತೆಗೆ ಮೋಕ್ಷಪ್ರಾಪ್ತಿಯ ಇಚ್ಛೆಯೂ ಲೋಪವಾಗಿ ಮನುಷ್ಯನು ಆಸೆರಹಿತನಾಗುತ್ತಾನೆ ಮತ್ತು ಬ್ರಹ್ಮಲೀನನಾಗುವ ಯೋಗ್ಯತೆ ಪ್ರಾಪ್ತವಾಗುತ್ತದೆ.

– ಅನಂತ ಆಠವಲೆ. ೨೫.೫.೨೦೨೩