ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯಲ್ಲಿ ಕೇಂದ್ರ ಸಚಿವರ ಮಗನ ಮನೆಯಲ್ಲಿ ಭಾಜಪ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ

ಸಚಿವರ ಮಗನ ಪಿಸ್ತೂಲಿನಿಂದ ಗುಂಡು ಹಾರಿಸಲಾಯಿತು !

ವಿನಯ್ ಶ್ರೀವಾಸ್ತವ, ವಿಕಾಸನ ಸ್ನೇಹಿತ ಹಾಗೂ ಭಾಜಪದ ಕಾರ್ಯಕರ್ತ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಮಗನ ಮನೆಯಲ್ಲಿ ಯುವಕನೊಬ್ಬನ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕನ ಹೆಸರು ವಿನಯ್ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಈತ ಕೌಶಲ್ ಕಿಶೋರ್ ಇವರ ಮಗ ವಿಕಾಸನ ಸ್ನೇಹಿತ ಹಾಗೂ ಭಾಜಪದ ಕಾರ್ಯಕರ್ತನಾಗಿದ್ದನು. ಕೌಶಲ್ ಕಿಶೋರ್ ಇವರ ಮಗನ ಪಿಸ್ತೂಲ್ ನಿಂದ ಗುಂಡು ಹಾರಿಸಲಾಗಿದ್ದು, ಘಟನೆ ಬಗ್ಗೆ ಮಾಹಿತಿ ಸಿಗುತ್ತಲೇ ಕೌಶಲ್ ಕಿಶೋರ್ ಕೂಡ ಸ್ಥಳಕ್ಕೆ ತಲುಪಿದರು. ಅವರು ಸುದ್ದಿಗಾರರಿಗೆ ಮಾಹಿತಿ ನೀಡುತ್ತಾ, ‘ಘಟನೆ ಸಮಯದಲ್ಲಿ ಅವರ ಮಗ ಮನೆಯಲ್ಲಿ ಇರಲಿಲ್ಲ. ವಿನಯ್ ನನ್ನ ಕುಟುಂಬಕ್ಕೆ ಆತ್ಮೀಯನಾಗಿದ್ದನು. ಈ ದುಃಖದ ಸಂದರ್ಭದಲ್ಲಿ ನಾನು ಅವರ ಕುಟುಂಬದೊಂದಿಗೆ ಇದ್ದೇನೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಂದು ಹೇಳೀದರು.

ಆಗಸ್ಟ 31ರ ರಾತ್ರಿ ಸಚಿವ ಕೌಶಲ್ ಕಿಶೋರ್ ಇವರ ಮಗನ ಮನೆಗೆ 6 ಮಂದಿ ಬಂದಿದ್ದರು, ತಡರಾತ್ರಿಯವರೆಗೂ ತಿನ್ನುವುದು ಮತ್ತು ಕುಡಿಯುವುದು ಮುಂದುವರೆದಿತ್ತು. ತದನಂತರ ಈ ಘಟನೆ ನಡೆದಿದೆಯೆಂದು ಪೊಲೀಸರು ಹೇಳಿದ್ದಾರೆ.