|
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಪಕ್ಷದ ನಾಯಕ ಭಾರತೀಯ ಮೂಲದ ವಿವೇಕ ರಾಮಸ್ವಾಮಿಯವರನ್ನು ಹೊಗಳಿದ್ದಾರೆ. ಅವರು, ‘ವಿವೇಕ ರಾಮಸ್ವಾಮಿ ಅವರು ಬಹಳ ತಿಳುವಳಿಕೆಯುಳ್ಳ ಮತ್ತು ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅವರಲ್ಲಿ ಉತ್ಸಾಹ ಮತ್ತು ಶಕ್ತಿ ಇದೆ. ಉಪಾಧ್ಯಕ್ಷರಾಗಿ ಅವರು ಖಂಡಿತಾ ಒಳ್ಳೆಯ ಕೆಲಸ ಮಾಡಬಲ್ಲರು.’ ಎಂದು ಹೇಳಿದ್ದಾರೆ. ವಿಶೇಷವೆಂದರೆ ರಾಮಸ್ವಾಮಿ ಅವರು ಅಮೇರಿಕಾದ ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ನಾಮನಿರ್ದೇಶನ ಪಡೆಯಲು ಯತ್ನಿಸುತ್ತಿದ್ದು, ಟ್ರಂಪ್ ಕೂಡ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ರಾಮಸ್ವಾಮಿ ಅವರನ್ನು ಟ್ರಂಪ್ ಹೊಗಳಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ರಾಮಸ್ವಾಮಿ ಅವರಿಗೆ ಉಪರಾಷ್ಟ್ರಪತಿ ಹುದ್ದೆಗೆ ಟ್ರಂಪ್ ಹಾರೈಸಿದ್ದರಿಂದ ಟ್ರಂಪ್ ಅಧ್ಯಕ್ಷರಾದರೆ ರಾಮಸ್ವಾಮಿ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತಿದೆ.
#IEWorld | Donald Trump has praised fellow candidate Vivek Ramaswamy, saying that the Indian-American would make a “very good” Vice Presidenthttps://t.co/AkMG2HVvVu
— The Indian Express (@IndianExpress) August 31, 2023