1 ಪ್ಲೆಟ್ ಊಟಕ್ಕೆ ನಾಲ್ಕೂವರೆ ಸಾವಿರ ರೂಪಾಯಿಗಳಾದರೆ, ರೂಂ ಬಾಡಿಗೆ ೨೫ ಸಾವಿರ ರೂಪಾಯಿಗಳು !
ಮುಂಬಯಿ – ಭಾಜಪದ ವಿರುದ್ಧ ಒಟ್ಟುಗೂಡಿದ ದೇಶದ ವಿವಿಧ ರಾಜಕೀಯ ಪಕ್ಷಗಳ ‘ಇಂಡಿಯಾ ಮೈತ್ರಿಕೂಟ’ದ ಸಭೆಯನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬಯಿಯ ‘ಗ್ರ್ಯಾಂಡ್ ಹಯಾತ್’ ಈ ಫೈಸ್ಟಾರ್ ಹೊಟೇಲ್‌ನಲ್ಲಿ ಆಯೋಜಿಸಲಾಯಿತು. ಈ ಸಭೆಯಲ್ಲಿ ಒಂದು ಪ್ಲೇಟ್ ಊಟಕ್ಕೆ ನಾಲ್ಕೂವರೆ ಸಾವಿರ ರೂಪಾಯಿಗಳು, ೬೫ ಕುರ್ಚಿಗಳಿಗೆ ೪೫ ಸಾವಿರ ರೂಪಾಯಿಗಳಾದರೆ, ಒಂದು ಕೋಣೆಯ ಬಾಡಿಗೆ ೨೫ ರಿಂದ ೩೦ ಸಾವಿರ ರೂಪಾಯಿಗಳಷ್ಟಿದೆ, ಎಂದು ಕೈಗಾರಿಕಾ ಸಚಿವ ಉದಯ ಸಾಮಂತ ಇವರು ೩೧ ಆಗಸ್ಟ್ ರಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಭೆಗೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿರುವ ಬಗ್ಗೆಯೂ ಅವರು ಆರೋಪಿಸಿದರು.
ಉದಯ ಸಾಮಂತ ಇವರು ಮಾತುಗಳನ್ನು ಮುಂದುವರಿಸುತ್ತಾ, “ನಾವು ಗೌಹಾತಿಗೆ ಹೋಗಿದ್ದೆವು. ಆಗ ನಮ್ಮ ಹೊಟೇಲ್‌ನ ಖರ್ಚಿನ ಬಗ್ಗೆ ಎಲ್ಲರಿಗೂ ಹೇಳಲಾಯಿತು. ಎರಡು ದಿನಗಳಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವವರಿಗೆ, ನಮ್ಮ ಬಗ್ಗೆ ಮಾತನಾಡುವ ಅಧಿಕಾರವಿಲ್ಲ. ಇಂಡಿಯಾ ಮೈತ್ರಿಕೂಟದ ಈ ಸಭೆ ಎಂದರೆ ಅಸಮಧಾನಗಳ ಗುಂಪಾಗಿದೆ. ರಾಜಕಾರಣಕ್ಕಾಗಿ ದೇಶದ ಹೆಸರು ಬಳಸುವುದು ದುರದೃಷ್ಟಕರವಾಗಿದೆ. ಲೋಕಸಭೆಯ ಚುನಾವಣೆಯನಂತರ ಈ ಮೈತ್ರಿಕೂಟವು ಮುಕ್ತಾಯಗೊಳ್ಳಲಿದೆ. ಬಾಳಾಸಾಹೇಬ ಠಾಕರೆ ಇವರನ್ನು ಟೀಕಿಸಿದ ಅನೇಕ ಪಕ್ಷಗಳು ಈ ಮೈತ್ರಿಕೂಟದಲ್ಲಿ ಸೇರಿಕೊಂಡಿವೆ. ಹೊಟೇಲ್‌ಗೆ ನೀಡಿರುವ ಪಟ್ಟಿಯಲ್ಲಿ ಉದ್ಧವ ಬಾಳಾಸಾಹೇಬ ಠಾಕರೆಯವರ ಪಕ್ಷ ೨೬ ನೇ ಸ್ಥಾನದಲ್ಲಿದ್ದರೆ, ಶರದ ಪವಾರ ಇವರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ೨೫ ನೇ ಸ್ಥಾನದಲ್ಲಿದೆ”, ಎಂದು ಹೇಳಿದರು.