ಹಣೆಗೆ ತಿಲಕ ಹಚ್ಚುವುದು ಮತ್ತು ಕೈಗೆ ಕೆಂಪು ದಾರ ಕಟ್ಟುವುದು ಮುಂತಾದರಿಂದ ವಿದ್ಯಾರ್ಥಿಗಳನ್ನು ತಡೆಯಲಾಗದು ! – ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಸ್ಪಷ್ಟನೆ

ಭೋಪಾಲ (ಮಧ್ಯಪ್ರದೇಶ) – ಹಿಂದೂ ವಿದ್ಯಾರ್ಥಿಗಳು ಶಾಲೆಗೆ ಹಣೆಯಗೆ ತಿಲಕ ಹಚ್ಚಿಕೊಂಡು ಮತ್ತು ಕೈಯಲ್ಲಿ ಕೆಂಪು ದಾರ ಕಟ್ಟಿಕೊಳ್ಳಲು ಯಾರು ತಡೆಯಲು ಸಾಧ್ಯವಿಲ್ಲ. ಹಿಂದೂ ಮತ್ತು ಜೈನ ವಿದ್ಯಾರ್ಥಿನಿಯರು ಹಿಜಾಬ ರೀತಿಯ ಇಸ್ಲಾಮಿ ಉಡುಪನ್ನು ಧರಿಸಲು ಕಡ್ಡಾಯಗೊಳಿಸಲಾಗದು. ಇತರ ಧರ್ಮಕ್ಕೆ ಸಂಬಂಧಿತ ಸಾಹಿತ್ಯ ಅಥವಾ ಭಾಷೆ ಕಲಿಯುವುದಕ್ಕಾಗಿ ಅವರಿಗೆ ಕಡ್ಡಾಯಗೊಳಿಸಲಾಗದು, ಕಾರಣ ಮಧ್ಯಪ್ರದೇಶ ಶಿಕ್ಷಣ ಇಲಾಖೆ ಇದಕ್ಕೆ ಮಾನ್ಯತೆ ನೀಡಿಲ್ಲ ಎಂದು ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ದಮೋಹ ಇಲ್ಲಿಯ ಗಂಗಾ ಜಮುನಾ ಉಚ್ಚ ಮಾಧ್ಯಮಿಕ ಶಾಲೆಯ ಪ್ರಕರಣದ ಕುರಿತು ವಿಚಾರಣೆಯ ಸಮಯದಲ್ಲಿ ಸ್ಪಷ್ಟಪಡಿಸಿದೆ. ಈ ಸಮಯದಲ್ಲಿ ನ್ಯಾಯಾಲಯದಿಂದ ಆಸಫಾ ಶೇಖ, ಅನಾಸ್ ಅಥಹರ್ ಮತ್ತು ರುಸ್ತಂ ಅಲಿ ಈ ಶಾಲೆಯ ವ್ಯವಸ್ಥಾಪಕರಿಗೆ ೫೦ ರೂಪಾಯಿಯ ವೈಯಕ್ತಿಕ ಜಾತಿಯತೆಯ ಆಧಾರದಲ್ಲಿ ಷರ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಏನು ಈ ಪ್ರಕರಣ ?

ಮೇ ೩೧ ರಂದು ಈ ಶಾಲೆಯಲ್ಲಿ ೧೦ ನೇ ತರಗತಿ ಮತ್ತು ೧೨ ನೇ ತರಗತಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಫ್ಲೆಕ್ಸ್ ಫಲಕ ಹಾಕಲಾಗಿತ್ತು. ಈ ಫಲಕದ ಮೇಲೆ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರುವ ಛಾಯಾ ಚಿತ್ರಗಳು ಪ್ರಕಟಗೊಳಿಸಲಾಗಿತ್ತು. ಇದರ ವಿರುದ್ಧ ದೂರ ನೀಡಿದ ನಂತರ ಸರಕಾರದಿಂದ ವಿಚಾರಣೆಯಲ್ಲಿ ಶಾಲೆಯ ಸಮವಸ್ತ್ರದಲ್ಲಿ ಹಿಜಾಬ್ ಧರಿಸುವುದು ಕಡ್ಡಾಯ ಇದೆ ಹಾಗೂ ಹಿಂದೂ ವಿದ್ಯಾರ್ಥಿಗಳು ಹಣೆಯಗೆ ತಿಲಕ ಹಚ್ಚುವುದು ಮತ್ತು ಕೈಗೆ ಕೆಂಪು ದಾರ ಕಟ್ಟುವುದು ನಿಷೇಧಿಸಲಾಗಿರುವುದು ಬೆಳಕಿಗೆ ಬಂದಿದೆ. ಈ ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗೆ ಉರ್ದು ಕಲಿಯಲು ಕೂಡ ಕಡ್ಡಾಯ ಮಾಡಲಾಗಿತ್ತು. ಪ್ರಾರ್ಥನೆ ಕೂಡ ಮುಸಲ್ಮಾನ ಪದ್ಧತಿಯಲ್ಲಿಯೇ ಮಾಡಲಾಗುತ್ತತ್ತು. ಶಾಲೆಯ ಕೆಲವು ಶಿಕ್ಷಕರ ಮತಾಂತರ ಕೂಡ ನಡೆದಿದೆ. ಈ ಎಲ್ಲಾ ಮಾಹಿತಿ ಬೆಳಕಿಗೆ ಬಂದ ನಂತರ ಮಧ್ಯಪ್ರದೇಶ ಸರಕಾರದಿಂದ ಶಾಲೆಯ ಅನುಮತಿ ರದ್ದು ಪಡಿಸಿತ್ತು.