ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ವಕೀಲರು ಬರೆದು ಕೊಟ್ಟ ನಿರ್ಣಯವನ್ನೇ ನ್ಯಾಯಾಧೀಶರು ಕೊಡುತ್ತಾರೆ ! – ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ

ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ ಇವರ ಗಂಭೀರ ಆರೋಪ !

ಜಯಪುರ (ರಾಜಸ್ಥಾನ) – ಇಂದು ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಏನು ಆದೇಶವನ್ನು ನೀಡಬೇಕು ಎಂದು ಅನೇಕ ವಕೀಲರು ನ್ಯಾಯಾಧೀಶರಿಗೆ ಬರೆದು ಕೊಡುತ್ತಾರೆ, ಎಂಬುದು ನಾನು ಕೇಳಿದ್ದೇನೆ. ಅದೇ ರೀತಿ ನಿರ್ಣಯಗಳನ್ನು ನೀಡಲಾಗುತ್ತದೆ. ಅದು ಕೆಳಮಟ್ಟದ ನ್ಯಾಯವ್ಯವಸ್ಥೆಯಾಗಿರಲಿ ಅಥವಾ ಮೇಲ್ಮಟ್ಟದ ನ್ಯಾಯವ್ಯವಸ್ಥೆಯಾಗಿರಲಿ. ವಿಷಯ ಗಂಭೀರವಾಗಿವೆ. ಭಾರತೀಯರು ವಿಚಾರ ಮಾಡಬೇಕು, ಎಂದು ರಾಜಸ್ಥಾನದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ಸಂಪಾದಕೀಯ ನಿಲುವು

ಹೀಗಿದ್ದರೇ ಮುಖ್ಯಮಂತ್ರಿಗಳು ಈ ಕುರಿತು ತನಿಖೆಗೆ ಏಕೆ ಆದೇಶಿಸುವುದಿಲ್ಲ ?