ಸನಾತನ ಸಂಸ್ಥೆಯ ವತಿಯಿಂದ ಗೋವಾ ಮುಖ್ಯಮಂತ್ರಿ. ಡಾ. ಪ್ರಮೋದ್ ಸಾವಂತ ಇವರಿಗೆ ರಾಖಿ ಕಟ್ಟಿಲಾಯಿತು !

ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರಿಗೆ ರಾಖಿ ಕಟ್ಟುವಾಗ ಸನಾತನ ಸಂಸ್ಥೆಯ ಸಾಧಕಿ ಸೌ. ಗಿರಿಜಾ ದಯಾನಂದ ಗಾಂವಕರ, ಅವರ ಪಕ್ಕದಲ್ಲಿ ಸೌ. ಗೀತಾ ತುಳಸಿದಾಸ ಗಾಂಜೆಕರ ಮತ್ತು ಸೌ. ಲತಾ ಮಾರುತಿ ಕಿಲ್ಲೇಕರ

ಪಣಜಿ – ಸಹೋದರನ ಏಳಿಗೆಯಾಗಬೇಕು, ಸಹೋದರನು ಸಹೋದರಿಯನ್ನು ರಕ್ಷಿಸಬೇಕು ಎಂಬ ಭಾವನೆಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರಿಗೆ ರಾಖಿ ಕಟ್ಟಲಾಯಿತು. ಸನಾತನ ಸಂಸ್ಥೆಯ ಸಾಧಕಿ ಸೌ. ಗಿರಿಜಾ ಗಾಂವಕರ ಮುಖ್ಯಮಂತ್ರಿಗಳಿಗೆ ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಸೌ. ಗೀತಾ ತುಳಸಿದಾಸ್ ಗಾಂಜೆಕರ ಮತ್ತು ಸೌ. ಲತಾ ಮಾರುತಿ ಕಿಲ್ಲೇಕರ ಉಪಸ್ಥಿತರಿದ್ದರು.

ಸನಾತನ ಸಂಸ್ಥೆಯ ವತಿಯಿಂದ ರಾಜ್ಯದ ಗಣ್ಯವ್ಯಕ್ತಿಗಳು, ವೇದಮೂರ್ತಿ, ಜನ ಪ್ರತಿನಿಧಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳಿಗೂ ರಾಖಿಗಳನ್ನು ಕಟ್ಟಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀ ಕೇದಾರ ನಾಯಿಕ, ಸಾಂಖಳಿಯ ವೇದಮೂರ್ತಿ ಶಿವಾನಂದ್ ಖೇಡೇಕರ್, ಸಾಂಖಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರಾಮದಾಸ್ ತಾರಿ, ಮ್ಹಾಪಸಾ ಪೊಲೀಸ್ ಠಾಣೆಯ ಉಪ ವಿಭಾಗಾಧಿಕಾರಿ ಜಿಬವಾ ದಳವಿ, ‘ತರುಣ್ ಭಾರತ’ ಸಂಪಾದಕ ಸಾಗರ್ ಜಾವಡೇಕರ್, ‘ಪ್ರೈಮ್ ಟಿವಿ’ ಸಂಪಾದಕ ಸಂದೀಪ್ ಕೇರಕರ ಇವರಿಗೂ ರಾಖಿ ಕಟ್ಟಲಾಯಿತು.