ಹಿಂದುತ್ವನಿಷ್ಠ ಸಂಘಟನೆಗಳಿಂದ ವಿರೋಧ
ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು
ನವ ದೆಹಲಿ – ‘ಆಮೇಜಾನ್’ ಈ ಆನ್ ಲೈನ್ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಯು ಇದುವರೆಗೆ ಹಲವಾರು ಬಾರಿ ಹಿಂದೂ ದೇವತೆಗಳ ಅವಮಾನಿಸುವ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಪ್ರತಿಬಾರಿ ಹಿಂದೂಗಳು ವಿರೋಧಿಸಿದ ನಂತರ ಆಮೇಜಾನ್ ಅವುಗಳನ್ನು ಮಾರಾಟದಿಂದ ತೆಗೆದುಹಾಕಿದೆ; ಆದರೆ ಅದರಿಂದ ಇಂತಹ ವಸ್ತುಗಳನ್ನು ಮತ್ತೆ ಮತ್ತೆ ಮಾರಾಟ ಮಾಡಲಾಗುತ್ತಿದೆ. ಈಗ ಶ್ರೀ ಮಹಾಕಾಳಿಮಾತೆಯನ್ನು ಅವಮಾನಿಸಲಾಗುತ್ತಿದೆ. ಆಮೇಜಾನ್ ‘ಕಾಲಿ ಮಾ : ಅ ಕಲೆಕ್ಷನ್ ಆಫ್ ಶಾರ್ಟ ಸ್ಟೋರಿಸ್’ (ಕಾಳಿ ಮಾತಾ : ಕಿರುಕಥೆಗಳ ಸಂಗ್ರಹ) ಎಂಬ ಪುಸ್ತಕಗಳನ್ನು ಮಾರಾಟಕ್ಕಾಗಿ ಇಟ್ಟಿದೆ. ಈ ಪುಸ್ತಕದ ಮುಖಪುಟದ ಮೇಲೆ ಶ್ರೀ ಮಹಾಕಾಳಿಮಾತೆಯನ್ನು ಗಲ್ಲಿಗೇರಿಸುವುದು ತೋರಿಸಲಾಗಿದೆ. ಇದರ ಲೇಖಕರು ಅಮೇರಿಕಾ ಮೂಲದ ಈಎಲ್.ಟಿ. ಫುಲಾಹರಾಗಿದ್ದಾರೆ. ‘ಈ ಪುಸ್ತಕಗಳನ್ನು ಭಾರತದಲ್ಲಿ ಮಾರಾಟಕ್ಕಾಗಿ ಲಭ್ಯವಿಲ್ಲದಿದ್ದರೂ, ಮುಂದೆ ಆ ಪುಸ್ತಕಗಳನ್ನು ಭಾರತದಲ್ಲಿಯೂ ಮಾರಾಟವಾಗಬಹುದು’, ಎಂದು ಆಮೇಜಾನ್ ಹೇಳಿದೆ. ಈಗ ಈ ಪುಸ್ತಕಗಳ ಮಾರಾಟಕ್ಕೆ ಹಿಂದುತ್ವನಿಷ್ಠರು ವಿರೋಧಿಸುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದ ಈ ಪುಸ್ತಕಗಳ ವಿರೋಧಲ್ಲಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲಾಗುತ್ತಿದೆ.
Sacrilege of Maa Kali: tone-deaf Amazon continues to host American author Fullah’s book with a degrading illustration of Devihttps://t.co/bkMO6AxEtx
— HinduPost (@hindupost) August 26, 2023
ಸಂಪಾದಕರ ನಿಲುವು* ಆಮೇಜಾನ್‌ನಿಂದ ನಿರಂತರವಾಗಿ ಹಿಂದೂ ದೇವತೆಗಳ ಅವಮಾನಿಸುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿರುವುದರಿಂದ ಈಗ ಭಾರತ ಸರಕಾರವು ಈ ಕಂಪನಿಯಯ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! * ಆಮೇಜಾನ್ ಈ ರೀತಿ ಇತರ ಧರ್ಮಗಳ ಬಗ್ಗೆ ಮಾಡಿದ್ದರೆ, ಏನಾಗುತ್ತಿತ್ತು, ಎಂಬುದನ್ನು ಹೇಳುವ ಅಗತ್ಯವಿಲ್ಲ ! |