|
ಶ್ಯಾಮಲಿ (ಉತ್ತರಪ್ರದೇಶ) – ಮಹಿಳೆಯರ ಕೈಯಲ್ಲಿ ಈಗ ಕೇವಲ ಬಳೆ ಹಾಕುವುದು ಅಷ್ಟೇ ಉಳಿದಿಲ್ಲ. ಈಗ ಮಹಿಳೆಯರು ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಆಸಕ್ತರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಶಸ್ತ್ರ ಅನುಮತಿ ಪಡೆಯುವುದರ ಬಗ್ಗೆ ಮಹಿಳೆಯರಲ್ಲಿ ಆಸಕ್ತಿ ಹೆಚ್ಚಾಗಿದೆ. ನಗರದಿಂದ ಗ್ರಾಮದವರೆಗೆ ಅನೇಕ ಮಹಿಳೆಯರ ಬಳಿ ಈಗ ಶಸ್ತ್ರಾಸ್ತ್ರ ಅನುಮತಿ ಇದೆ. ಉತ್ತರ ಪ್ರದೇಶದಲ್ಲಿನ ಶಾಮಲಿ ಜಿಲ್ಲೆಯಲ್ಲಿ ೮೦ ಮಹಿಳೆಯರು ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದು ೧೪೦ ಮಹಿಳೆಯರ ಅರ್ಜಿಗಳು ಬಾಕಿ ಉಳಿದಿದೆ.
ಯಾರ ಜೀವಕ್ಕೆ ಅಪಾಯ ಇದೆ ಅಥವಾ ಅವರು ಅಪರಾಧ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಾರೆ, ಅವರಿಗೆ ಶಸ್ತ್ರಾಸ್ತ್ರ ಅನುಮತಿ ನೀಡಲಾಗುತ್ತಿದೆ. ಹಿಂದೆ ಕೇವಲ ಪುರುಷರೇ ಶಸ್ತ್ರಾಸ್ತ್ರ ಅನುಮತಿಗಾಗಿ ಅರ್ಜಿ ನೀಡುತ್ತಿದ್ದರು; ಆದರೆ ಕಳೆದ ಕೆಲವು ವರ್ಷಗಳಿಂದ ಮಹಿಳೆಯಾರಿಂದ ಕೂಡ ನಿರಂತರವಾಗಿ ಅರ್ಜೆಗಳು ಬರುತ್ತಿವೆ. ಆಪತ್ಕಾಲಿನ ಪರಿಸ್ಥಿತಿಯಲ್ಲಿ ಸ್ವರಕ್ಷಣೆಗಾಗಿ ಉಪಯೋಗಿಸಬಹುದು ಎಂದು ಅವರ ದಾವೆ ಆಗಿದೆ. ಈಗ ೧೦ ಅರ್ಜಿಗಳಲ್ಲಿ ೪ ಅರ್ಜಿಗಳು ಮಹಿಳೆಯರದ್ದೆ ಆಗಿರುತ್ತದೆ. ‘ಮಾಹಿತಿ ಹಕ್ಕು’ ಕಾರ್ಯಕರ್ತ ಪವನ ಕುಮಾರ ಇವರು ಈ ಮಾಹಿತಿ ಪಡೆದರು.
ಸಂಪಾದಕೀಯ ನಿಲುವು‘ಪೊಲೀಸರು ಮಹಿಳೆಯರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ, ಇದು ಮತ್ತೆ ಮತ್ತೆ ಸಾಬೀತ ಆಗಿರುವುದರಿಂದ ಮಹಿಳೆಯರು ಈಗ ಸ್ವತಃ ಶಸ್ತ್ರಾಸ್ತ್ರ ಇಟ್ಟುಕೊಳ್ಳುತ್ತಿದ್ದಾರೆ, ಹೀಗೆ ಯಾರಿಗಾದರೂ ಅನಿಸಿದರೆ ತಪ್ಪೇನು ಇಲ್ಲ ? |