ನಾನು ಯಾವಾಗಲೂ ಆನಂದದಲ್ಲಿರುತ್ತೇನೆ. ಆದುದರಿಂದ ಒಮ್ಮೆ ಪರಾತ್ಪರ ಗುರು ಡಾ. ಆಠವಲೆಯವರು ನನಗೆ ‘ಸಾಧಕರು ಆನಂದದಲ್ಲಿರಲು ಹೇಗೆ ಪ್ರಯತ್ನಿಸಬೇಕು ?’, ಇದರ ಬಗ್ಗೆ ಲೇಖನವನ್ನು ಬರೆಯಲು ಹೇಳಿದ್ದರು. ನನ್ನ ಗಮನಕ್ಕೆ ಬಂದ ಕೆಲವು ಅಂಶ ಗಳನ್ನು ಮುಂದೆ ಕೊಟ್ಟಿದ್ದೇನೆ.
೧. ‘ಭಗವಂತನ ಕೃಪೆಯಿಂದ ಶೀಘ್ರ ಈಶ್ವರಪ್ರಾಪ್ತಿಯಾಗಲು ಆನಂದದಿಂದಿರುವುದು’, ಇದು ದೇವರು ನೀಡಿದ ಸಹಜ ಮತ್ತು ಸುಲಭಮಾರ್ಗವಾಗಿದೆ !
‘ಭಗವಂತನ ಕೃಪೆಯಿಂದ ಶೀಘ್ರ ಈಶ್ವರಪ್ರಾಪ್ತಿಯಾಗಲು ಆನಂದದಿಂದಿರುವುದು’, ದೇವರು ನೀಡಿದ ಸಹಜ ಮತ್ತು ಸುಲಭ ಮಾರ್ಗವಾಗಿದೆ. ‘ಸಾಧಕರು ಆನಂದದಲ್ಲಿ ಇದ್ದು ತಮ್ಮ ಪ್ರತಿಯೊಂದು ಕ್ಷಣವನ್ನು ಭಗವಂತನಿಗೆ ಕೊಡಬೇಕು. ನಮಗೆ ದೊರಕಿದ ಆನಂದವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ನಾವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರಯತ್ನಿಸಬೇಕು, ಹೀಗೆ ಮಾಡಿದರೆ ನಾವು ಪ್ರತಿಯೊಂದು ಕೃತಿಯಿಂದ ಆನಂದವನ್ನು ಪಡೆಯಬಹುದು.
೨. ನಕಾರಾತ್ಮಕ ವಿಚಾರಗಳಿಂದ ಒತ್ತಡ ಹೆಚ್ಚಾಗುತ್ತದೆ ಮತ್ತು ಸೇವೆಯ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಆದರೆ ಸಕಾರಾತ್ಮಕ ವಿಚಾರಗಳಿಂದ ಆನಂದದಲ್ಲಿ ಹೆಚ್ಚಳವಾಗುತ್ತದೆ
ನಮ್ಮ ಮನಸ್ಸಿನಲ್ಲಿ ಬರುತ್ತಿರುವ ವಿಚಾರಗಳ ಮೇಲೆ ನಮ್ಮ ಮನಸ್ಸಿನ ಸ್ಥಿತಿ ಅವಲಂಬಿಸಿರುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳಿದ್ದರೆ, ಮನಸ್ಸು ನಿರುತ್ಸಾಹಿಯಾಗುತ್ತದೆ. ಆದುದರಿಂದ ನಾವು ಯಾವ ಕೃತಿ ಅಥವಾ ಸೇವೆಯನ್ನು ಮಾಡುತ್ತೇವೆಯೋ ಅದರತ್ತ ನಮ್ಮ ಗಮನವಿರುವುದಿಲ್ಲ. ಇದರಿಂದ ನಮ್ಮಿಂದ ತಪ್ಪುಗಳಾಗುತ್ತವೆ ಅಥವಾ ಆ ಕೃತಿಗಳು ಸಮಯಮಿತಿಯಲ್ಲಿ ಪೂರ್ಣವಾಗುವುದಿಲ್ಲ. ಆದುದರಿಂದ ನಮಗೆ ಒತ್ತಡ ಬರುತ್ತದೆ. ನಮ್ಮ ಮನಸ್ಸಿನ ಮೇಲೆ ಒತ್ತಡದ ಪರಿಣಾಮವಾಗಿ ನಾವು ದಿನವಿಡಿ ಆ ವಿಚಾರಗಳಲ್ಲಿಯೇ ಇರುತ್ತೇವೆ. ಆದುದರಿಂದ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ದೇವರು ನೀಡಿದ ಪ್ರತಿಯೊಂದು ಕ್ಷಣದ ಮತ್ತು ಸೇವೆಯಿಂದ ದೊರಕುವ ಆನಂದವನ್ನೂ ನಮಗೆ ಪಡೆಯಲು ಸಾಧ್ಯವಾಗುವುದಿಲ್ಲ.
೩. ಪರಿಹಾರೋಪಾಯ
೩ ಅ. ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳಿಗೆ ನಾಮಜಪ ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ಅವುಗಳನ್ನು ದೂರಗೊಳಿಸುವುದು ಆವಶ್ಯಕ : ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದರೆ, ಆ ಸಮಯದಲ್ಲಿ ಆ ನಕಾರಾತ್ಮಕ ವಿಚಾರಗಳ ಜೊತೆಗೆ ಸಕಾರಾತ್ಮಕ ವಿಚಾರಗಳನ್ನೂ ಮಾಡಬೇಕು. ಮನಸ್ಸಿನಲ್ಲಿ ಸಕಾರಾತ್ಮಕ ವಿಚಾರಗಳು ಹೆಚ್ಚಾದರೆ, ತಾನಾಗಿಯೇ ಆನಂದದಲ್ಲಿ ಹೆಚ್ಚಳವಾಗುತ್ತದೆ. ನಾಮಜಪವನ್ನು ಮಾಡಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು ಮತ್ತು ನಮ್ಮ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವುದು’ ಮುಂತಾದ ಪ್ರಯತ್ನಗಳನ್ನೂ ಮಾಡಬೇಕು.
೩ ಆ. ‘ಪ್ರತಿ ಕ್ಷಣ ಸಾಧನೆಯನ್ನೇ ಮಾಡಬೇಕು’, ಎಂದು ವಿಚಾರ ಮಾಡಿದರೆ ಮನಸ್ಸು ಸಕಾರಾತ್ಮಕವಾಗುತ್ತದೆ ! : ‘ಭಗವಂತನು ನನಗೆ ಈ ಕ್ಷಣವನ್ನು ನೀಡಿದ್ದಾನೆ ಮತ್ತು ಈ ಕ್ಷಣವನ್ನು ನಾನು ಅವನಿಗಾಗಿಯೇ ಉಪಯೋಗಿಸಬೇಕಾಗಿದೆ’, ಎಂಬ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಅಂದರೆ ವರ್ತಮಾನ ಕಾಲದಲ್ಲಿದ್ದರೆ, ನಮ್ಮ ಮನಸ್ಸಿನಲ್ಲಿ ಇತರ ಯಾವುದೇ ವಿಚಾರ ಗಳು ಬರುವುದಿಲ್ಲ. ಯಾವುದೇ ವೈಯಕ್ತಿಕ ಕೃತಿ ಅಥವಾ ಸೇವೆ ಇರಲಿ, ಅದರಲ್ಲಿ ನಮ್ಮ ಮನಸ್ಸು ಸಕಾರಾತ್ಮಕವಾಗಿಯೇ ಇರುತ್ತದೆ.
೩ ಇ. ನಮ್ಮೊಂದಿಗಿರುವ ಸಾಧಕರೊಂದಿಗೆ ನಮ್ಮ ಸ್ಥಿತಿಯ ತುಲನೆಯನ್ನು ಮಾಡದೇ ಅವರಂತಾಗಲು ‘ನಾನೆಲ್ಲಿ ಕಡಿಮೆ ಬೀಳುತ್ತೇನೆ ?’, ಎಂಬ ವಿಚಾರವನ್ನು ಮಾಡಬೇಕು ! : ಅನೇಕ ಸಾಧಕರು ಇತರ ಸಾಧಕರೊಂದಿಗೆ ತಮ್ಮ ತುಲನೆಯನ್ನು ಮಾಡಿಕೊಳ್ಳುತ್ತಾರೆ. ‘ಅವರು ಎಷ್ಟು ಆನಂದದಿಂದಿದ್ದಾರೆ ? ಅವರದೆಲ್ಲವೂ ಚೆನ್ನಾಗಿ ನಡೆದಿದೆ. ಅವರ ಸೇವೆ ಚೆನ್ನಾಗಿ ನಡೆದಿದೆ. ಅವರಿಗೆ ಯಾವುದೇ ಅಡಚಣೆ ಬರುವುದಿಲ್ಲ’, ಈ ರೀತಿ ತುಲನೆಯಾಗುತ್ತದೆ. ಇಂತಹ ಸಮಯದಲ್ಲಿ ನಾವು ಆ ಸಾಧಕರಿಂದ ಕಲಿಯುವುದು ಅಪೇಕ್ಷಿತವಿರುತ್ತದೆ. ದೇವರು ನನಗೂ ಅವರಂತಹ ರೂಪವನ್ನೇ ನೀಡಿದ್ದಾನೆ. ಅವರ ಹಾಗೆ ಮಾತನಾಡುವ ಕ್ಷಮತೆಯನ್ನು ನೀಡಿದ್ದಾನೆ ಮತ್ತು ಅವರಂತಹ ಸೇವೆಯನ್ನು ನೀಡಿದ್ದಾನೆ, ಹಾಗಾದರೆ ಅವರ ಹಾಗೆ ನನ್ನನ್ನು ರೂಪಿಸಿಕೊಳ್ಳಲು ನಾನೆಲ್ಲಿ ಕಡಿಮೆ ಬೀಳುತ್ತಿದ್ದೇನೆ ?’, ಎಂಬುದರ ಚಿಂತನೆಯನ್ನು ಮಾಡಬೇಕು.
೩ ಈ. ಇತರ ಸಾಧಕರ ಮಾಧ್ಯಮದಿಂದ ದೇವರು ಮಾಡುತ್ತಿರುವ ಸಹಾಯದಿಂದ ಕೃತಿಯ ಸ್ತರದಲ್ಲಿ ಪ್ರಯತ್ನಿಸುವುದು : ‘ನಾವು ಎಲ್ಲಿ ಕಡಿಮೆ ಬೀಳುತ್ತಿದ್ದೇವೆ ?’, ಇದು ನಮ್ಮ ಗಮನಕ್ಕೆ ಬರದಿದ್ದರೆ ಇತರರ ಸಹಾಯ ಪಡೆಯಬಹುದು. ‘ಇತರ ಸಾಧಕರಿಂದ ಸಹಾಯ ಸಿಗುತ್ತದೆ, ಅಂದರೆ ನಮಗೆ ಭಗವಂತನೇ ಸಹಾಯ ಮಾಡುತ್ತಾನೆ’, ಎಂಬ ಭಾವವನ್ನು ಇಟ್ಟುಕೊಂಡು ಪ್ರಯತ್ನಿಸಬೇಕು.
೩ ಉ. ನಕಾರಾತ್ಮಕ ಮತ್ತು ಸಕಾರಾತ್ಮಕ ವಿಚಾರಗಳು ಒಟ್ಟಿಗೆ ಬರುವುದು : ನಕಾರಾತ್ಮಕ ವಿಚಾರಗಳು ಬಂದರೂ, ಅವುಗಳ ಜೊತೆಗೆ ಬಹಳಷ್ಟು ಸಕಾರಾತ್ಮಕ ವಿಚಾರಗಳೂ ಬರುತ್ತವೆ. ಎಲ್ಲರಿಗೂ ‘ಯಾವ ವಿಚಾರ ನಕಾರಾತ್ಮಕವಾಗಿದೆ ಮತ್ತು ಯಾವ ವಿಚಾರ ಸಕಾರಾತ್ಮಕವಾಗಿದೆ’, ಎಂಬುದು ಗೊತ್ತಿರುತ್ತದೆ. ಆಧ್ಯಾತ್ಮಿಕ ತೊಂದರೆಯಿಂದಾಗಿ ಕೆಲವೊಮ್ಮೆ ಇದು ಗಮನಕ್ಕೆ ಬರದೇ ಇದ್ದರೆ, ಇತರ ಸಾಧಕರ ಸಹಾಯ ತೆಗೆದುಕೊಳ್ಳಬೇಕು.
೩ ಊ. ಅಖಂಡವಾಗಿ ಪರಾತ್ಪರ ಗುರು ಡಾ. ಆಠವಲೆಯವರ ಸ್ಮರಣೆ ಮಾಡುವುದು : ‘ಭಾವದ ಸ್ತರದಲ್ಲಿ ಏನು ಪ್ರಯತ್ನ ಮಾಡಬೇಕು ? ಅಖಂಡ ಗುರುಸ್ಮರಣೆ (ಪರಾತ್ಪರ ಗುರು ಡಾ. ಆಠವಲೆಯವರ) ಮಾಡಿ ಅವರು ನಮಗೆ ಏನೆಲ್ಲವನ್ನು ಕೊಟ್ಟಿದ್ದಾರೆ ?’, ಅವೆಲ್ಲವುಗಳ ಅರಿವನ್ನು ಇಟ್ಟುಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಗುರುಗಳೊಂದಿಗೆ ನಾವು ಕಳೆದ ಕ್ಷಣಗಳನ್ನು ನೆನಪಿನಲ್ಲಿ ಇಟ್ಟುಕೊಂಡು ‘ಗುರುಗಳು ನಮ್ಮೊಂದಿಗೆ ಇದ್ದಾರೆ’, ಎಂಬುದರ ಅನುಭವ ಪಡೆಯಬೇಕು.
೪. ಪ್ರತಿಯೊಂದು ಕೃತಿಯನ್ನು ಮಾಡುವಾಗ ದೇವರ ಅನುಸಂಧಾನದಲ್ಲಿದ್ದರೆ, ನಮಗೆ ಆನಂದ ಸಿಗುತ್ತದೆ
ಈ ರೀತಿ ಪ್ರತಿದಿನ ಪ್ರಯತ್ನಿಸಿದರೆ ದೇವರ ಬಗ್ಗೆ ಸೆಳೆತ ಉತ್ಪನ್ನವಾಗುತ್ತದೆ. ನಮ್ಮಲ್ಲಿ ಭಾವವು ಮೂಡುತ್ತದೆ. ಅನಂತರ ನಾವು ದೇವರ ಅನುಸಂಧಾನದಲ್ಲಿದ್ದು ‘ಪ್ರತಿಯೊಂದು ಕೃತಿ ಮತ್ತು ಸೇವೆಯನ್ನು ಅವನೊಂದಿಗೆ ಮಾಡುತ್ತಿದ್ದೇವೆ’, ಎಂದು ಅನಿಸಿ ಸತತವಾಗಿ ಕೃತಜ್ಞತೆ ಅನಿಸುತ್ತದೆ. ನಂತರ ಯಾವುದೇ ಸೇವೆ ಇದ್ದರೂ ಅದನ್ನು ಸ್ವೀಕರಿಸಲು ಬರುತ್ತದೆ ಮತ್ತು ನಮಗೆ ಅದರಿಂದ ಆನಂದ ಸಿಗುತ್ತದೆ. ಆ ಆನಂದ ನಮ್ಮ ಮುಖದಲ್ಲಿಯೂ ಕಾಣಿಸುತ್ತದೆ.
೫. ಆರಂಭದಲ್ಲಿ ಮುಖದಲ್ಲಿ ಮಂದಹಾಸವನ್ನಿಟ್ಟುಕೊಂಡು ಬರುವಾಗ-ಹೋಗುವಾಗ ಪ್ರತಿಯೊಬ್ಬ ಸಾಧಕನತ್ತ ಮುಗುಳ್ನಗೆ ಬೀರಬೇಕು, ಮುಖ ಪ್ರಸನ್ನವಾಗಿರಬೇಕು. ನಂತರ ನಾವು ಆನಂದದಲ್ಲಿ ಇರುವೆವು ಮತ್ತು ಇತರರಿಗೂ ನಾವು ಆನಂದದಲ್ಲಿರುವುದು ಗಮನಕ್ಕೆ ಬರುವುದು.’
– ಸೌ. ವರ್ಧಿನಿ ವಾಸುದೇವ ಗೊರಲ (ಆಧ್ಯಾತ್ಮಿಕ ಮಟ್ಟ ಶೇ. ೬೨), ಸನಾತನ ಆಶ್ರಮ, ರಾಮನಾಥಿ, ಗೋವಾ.
ನಮಗೆ ನೀಡಿದ ಸೇವೆಯನ್ನು ಸಮಯಮಿತಿಯಲ್ಲಿ ಪೂರ್ಣಗೊಳಿಸಿದರೆ ಸಾಧನೆಯ ದೃಷ್ಟಿಯಿಂದ ಶೀಘ್ರಗತಿಯಲ್ಲಿ ಪ್ರಗತಿಯಾಗುವುದುಒಂದು ಸಲ ಪರಮಪೂಜ್ಯ ಡಾಕ್ಟರರ ಕೋಣೆಯಲ್ಲಿ ದೇವರ ಪೂಜೆಯನ್ನು ಮಾಡುತ್ತಿರುವಾಗ ನಮ್ಮಲ್ಲಿ ಮುಂದಿನ ಸಂಭಾಷಣೆ ಆಯಿತು. ಪ.ಪೂ. ಡಾಕ್ಟರರು : ‘ನಿನಗೆ ಪೂಜೆಗೆ ಎಷ್ಟು ಸಮಯ ತಗಲುತ್ತದೆ ? ‘ನಮ್ಮ ಪ್ರತಿಯೊಂದು ಕ್ಷಣವನ್ನು ಭಗವಂತನಿಗೆ ಕೊಡಬೇಕು. ನಮ್ಮ ತಳಮಳವನ್ನು ಹೆಚ್ಚಿಸಬೇಕು. ನಾವು ಪ್ರತಿಯೊಂದು ವಿಷಯವನ್ನು ಅವನಿಗಾಗಿಯೇ ಮಾಡುತ್ತಾ ಹೋದರೆ, ದೇವರು ನಮಗೆ ಸಹಾಯ ಮಾಡುವವನೇ ಇದ್ದಾನೆ. ಇದರಿಂದ ನನಗೆ ಭಗವಂತನು ನಮಗೆ ಪ್ರತಿಯೊಂದು ಸೇವೆಯ ಆಯೋಜನೆಯನ್ನು ಮಾಡಿ ಕೊಡುತ್ತಿರುತ್ತಾನೆ’, ಎಂಬುದು ಕಲಿಯಲು ಸಿಕ್ಕಿತು.’ – ಸೌ. ವರ್ಧಿನಿ ಗೊರಲ, ಸನಾತನ ಆಶ್ರಮ, ರಾಮನಾಥಿ, ಗೋವಾ. |