‘ಕೆಂಗಣ್ಣು ರೋಗ’ದ ತೊಂದರೆಗೆ ಮನೆಮದ್ದು

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಕೆಂಗಣ್ಣು ರೋಗದ ತೊಂದರೆ ಯಾದಾಗ ಈ ಮುಂದಿನಂತೆ ಆಹಾರ ಮತ್ತು ಔಷಧವನ್ನು ತೆಗೆದುಕೊಳ್ಳಬೇಕು.

೧. ಕಣ್ಣುಗಳು ಚೇತರಿಸಿಕೊಳ್ಳುವವರೆಗೆ ಸಾಮಾನ್ಯ ಆಹಾರ ಸೇವಿಸದೇ ಜೀರ್ಣಿಸಲು ಸುಲಭವಾದ ಆಹಾರಗಳಾದ ಹೆಸರು ಬೇಳೆಯ ಸಾರು ಮತ್ತು ಅನ್ನ, ಹೆಸರು ಬೇಳೆಯನ್ನು ಬೇಯಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ತಯಾರಿಸಿದ ದ್ರವ ಪದಾರ್ಥ, ರವೆಯ ಉಪ್ಪಿಟ್ಟು ಅಥವಾ ಶಿರಾ, ಗಂಜಿ, ಹೆಸರು ಬೇಳೆಯಿಂದ ಮಾಡಿದ ಅಕ್ಕಿಯ ಖಿಚಡಿ, ರೊಟ್ಟಿ ಇಂತಹ ಜೀರ್ಣಿಸಲು ಸುಲಭವಾದ ಆಹಾರ ಸೇವಿಸಿ.

೨. ೨-೨ ಚಿಟಿಕೆ ತ್ರಿಫಲಾ ಚೂರ್ಣವನ್ನು ದಿನದಲ್ಲಿ ೪-೫ ಬಾರಿ ಅಗಿಯಿರಿ.

೩. ಕಣ್ಣುಗಳು ಉರಿಯುತ್ತಿದ್ದರೆ, ಮಲಗುವಾಗ ಕಣ್ಣು ಮುಚ್ಚಿ ಸೌತೆ ಕಾಯಿಯ ಚೂರುಗಳನ್ನು ಕತ್ತರಿಸಿ ಸ್ವಚ್ಛವಾಗಿ ತೊಳೆದ ಕರವಸ್ತ್ರದಿಂದ ಕಣ್ಣುಗಳ ಮೇಲೆ ಕಟ್ಟಿಕೊಳ್ಳಿ. ಸೌತೆಕಾಯಿ ಯಂತೆಯೇ, ಮೆಂತ್ಯದೆಲೆಗಳನ್ನು ಸಹ ಕಣ್ಣುಗಳಿಗೆ ಕಟ್ಟಬಹುದು.

೪. ಕಣ್ಣುಗಳನ್ನು ಮುಟ್ಟಿದ ಕೈಗಳಿಂದ ಬೇರೆಡೆ ಮುಟ್ಟಬಾರದು. ಕಣ್ಣುಗಳನ್ನು ಮುಟ್ಟುವ ಮೊದಲು ಮತ್ತು ನಂತರ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಿರಿ.

೫. ಒಂದು ಚಿಟಿಕೆ ಭೀಮಸೇನಿ ಕರ್ಪೂರವನ್ನು ಅಂಗೈಗಳ ನಡುವೆ ಉಜ್ಜಿ ಮತ್ತು ಅಂಗೈಗಳನ್ನು ಕಣ್ಣುಗಳನ್ನು ತೆರೆದು ಕಣ್ಣುಗಳ ಹತ್ತಿರ ಇರಿಸಿ. ಅಂಗೈಗಳು ಕಣ್ಣುಗಳನ್ನು ಒತ್ತಿಡ ಬಾರದು. ಈ ಪರಿಹಾರವು ಕಣ್ಣಿನ ಉರಿಯೂತವನ್ನು ತಕ್ಷಣ ಕಡಿಮೆ ಮಾಡುತ್ತದೆ.

೬. ಸಾಧ್ಯವಾದರೆ ಇತರರೊಂದಿಗೆ ಸಂಪರ್ಕವನ್ನು ತಪ್ಪಿಸಿ. ಇದರಿಂದ ಜೊತೆಗಿರುವವರಿಗೆ ಇದು ಹರಡದಂತೆ ತಡೆಯಲು ಸಹಾಯಕವಾಗುತ್ತದೆ.
ಕೆಸರುಹುಣ್ಣಿಗೆ ಸುಲಭವಾದ ಮನೆಮದ್ದು

‘ಮಳೆಗಾಲದಲ್ಲಿ ಕಾಲುಗಳು ಹೆಚ್ಚು ಸಮಯ ನೀರಿನಲ್ಲಿರು ವುದರಿಂದ ಕೆಲವರಿಗೆ ಕಾಲ್ಬೆರಳುಗಳ ನಡುವೆ ಒಂದು ರೀತಿಯ ಚರ್ಮರೋಗವಾಗುತ್ತದೆ. ಈ ರೋಗಕ್ಕೆ ‘ಕೆಸರುಹುಣ್ಣು’ ಎನ್ನುತ್ತಾರೆ. ಇದರಲ್ಲಿ ಬೆರಳುಗಳ ನಡುವೆ ಬಿರುಕುಗಳು ಬೀಳುತ್ತವೆ, ಅಲ್ಲಿನ ಚರ್ಮವು ಹಸಿಯಾಗಿದ್ದು ಅದಕ್ಕೆ ದುರ್ಗಂಧ ಬರುವುದು, ತುರಿಕೆ, ಈ ರೀತಿಯ ತೊಂದರೆಗಳಾಗುತ್ತವೆ. ಇದಕ್ಕಾಗಿ ಮುಂದಿನಂತೆ ಸುಲಭ ಪರಿಹಾರವನ್ನು ಮಾಡಿ ನೋಡಬೇಕು.

ಪ್ರತಿದಿನ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಸಾಬೂನಿ ನಿಂದ ಸ್ವಚ್ಛವಾಗಿ ತೊಳೆಯಬೇಕು ಮತ್ತು ಬೆರಳುಗಳಲ್ಲಿನ ಬಿರುಕುಗಳಿಗೆ ಕೊಬ್ಬರಿಎಣ್ಣೆಯನ್ನು ಹಚ್ಚಬೇಕು. ತೊಂದರೆ ಹೆಚ್ಚಿದ್ದರೆ ಎಣ್ಣೆಯನ್ನು ಹಚ್ಚುವ ಮೊದಲು ಕೆಂಡದ ಮೇಲೆ ಧೂಪವನ್ನು ಹಾಕಿ ಸುಮಾರು ೫ ನಿಮಿಷಗಳ ವರೆಗೆ ಅದರ ಹೊಗೆಯಲ್ಲಿ ಪಾದಗಳನ್ನಿಡಬೇಕು.’

– ವೈದ್ಯ ಮೇಘರಾಜ ಮಾಧವ ಪರಾಡಕರ ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೮.೨೦೨೩)