ಚೀನಾದ ‘ಯೂತು-2’ ರೋವರ್ 4 ವರ್ಷಗಳ ನಂತರವೂ ಚಂದ್ರನಲ್ಲಿ ಸಕ್ರಿಯ !

ಬೀಜಿಂಗ್ – ಭಾರತದ ಚಂದ್ರಯಾನ-3 ‘ವಿಕ್ರಮ್ ಲ್ಯಾಂಡರ್’ನೊಂದಿಗೆ ಚಂದ್ರನ ಮೇಲೆ ಇಳಿದಿದೆ. ಭಾರತವು ಚಂದ್ರನತ್ತ ಸಾಗಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವಕ್ಕೆ ಹೋದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲ್ಯಾಂಡರ್ ನಲ್ಲಿರುವ ‘ಪ್ರಗ್ಯಾನ್ ರೋವರ್’ ಇದೀಗ ಹೊರಬಂದು, ಸಧ್ಯಕ್ಕೆ ಚಂದ್ರನ ಮೇಲ್ಮೈ ಮೇಲೆ ಚಲಿಸುತ್ತಿದೆ. ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಏಕಾಂಗಿಯಾಗಿಲ್ಲ. ಚೀನಾದ ರೋವರ್ ಯುತು-2 ಕೂಡ ಚಂದ್ರನ ಮೇಲಿದ್ದು, 4 ವರ್ಷಗಳ ನಂತರವೂ ಅದು ಕ್ರಿಯಾಶೀಲವಾಗಿದೆ.

ಚೀನಾದ ‘ಯುತು-2’ ರೋವರ್ ಇನ್ನೂ ಅನೇಕ ಛಾಯಾಚಿತ್ರಗಳನ್ನು ಚೀನಾಕ್ಕೆ ಕಳುಹಿಸುವ ಮೂಲಕ ಚೀನಾದ ವಿಜ್ಞಾನಿಗಳಿಗೆ ಸಹಾಯ ಮಾಡುತ್ತಿದೆ. ‘ಯುತು-2’ ಅನ್ನು ‘ರೋವರ್’ ‘ಚಾಂಗ್ ಇ-4’ ನೌಕೆಯೊಂದಿಗೆ ಕಳುಹಿಸಲಾಗಿತ್ತು.